Tuesday, June 30, 2026
spot_imgspot_img
spot_imgspot_img

ತರಬೇತಿಗೆ ಬಾರದೆ ಸತಾಯಿಸುತ್ತಿದ್ದ ವಿದ್ಯಾರ್ಥಿಯನ್ನು ಹಾಕಿ ಸ್ಟಿಕ್‌ನಿಂದ ಹಲ್ಲೆ ಮಾಡಿದ ಕೋಚ್!

- Advertisement -
- Advertisement -
driving

ಮಡಿಕೇರಿ: ಪೊನ್ನಂಪೇಟೆಯ ಸಾಯಿ ಕ್ರೀಡಾ ಶಾಲೆಯಲ್ಲಿ ವಿದ್ಯಾರ್ಥಿ ಮೇಲೆ ಕೋಚ್ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಕೋಚ್, ವಿದ್ಯಾರ್ಥಿಗೆ ಹಾಕಿ ಸ್ಟಿಕ್‌ನಿಂದ ಹೊಡೆದಿರುವ ಆರೋಪ ಕೇಳಿ ಬಂದಿದ್ದು ಕ್ರೀಡಾ ಹಾಸ್ಟೆಲ್‌ನ ವಿದ್ಯಾರ್ಥಿಯ ಕೈ ಮುರಿದಿದೆ. ಹಲ್ಲೆಗೊಳಗಾದ ವಿದ್ಯಾರ್ಥಿ ವಿಪುಲ್ ಉತ್ತಪ್ಪ(13) ಎನ್ನಲಾಗಿದೆ.

ಕೊಡಗಿನ ಪೊನ್ನಂಪೇಟೆಯಲ್ಲಿರುವ ಸಾಯಿ ಕ್ರೀಡಾ ಶಾಲೆಯಲ್ಲಿ ವಿದ್ಯಾರ್ಥಿಗೆ ಹಾಕಿ ಸ್ಟಿಕ್‌ನಿಂದ ಕೋಚ್ ಬುಟ್ಟಿಯಂಡ ಚಂಗಪ್ಪ ಹೊಡೆದಿದ್ದಾರೆ ಎಂದು ಕೋಚ್ ವಿರುದ್ಧ ವಿಪುಲ್ ಉತ್ತಪ್ಪ ಪೋಷಕರು ಆರೋಪ ಮಾಡಿದ್ದು, ಆಕ್ರೋಶ ಹೊರ ಹಾಕಿದ್ದಾರೆ. ಘಟನೆಯಲ್ಲಿ ವಿಪುಲ್ ಕೈ ಮುರಿದಿದ್ದು ಮಡಿಕೇರಿಯ ಕಿಮ್ಸ್ ಆಸ್ಪತ್ರೆಯಲ್ಲಿ ವಿದ್ಯಾರ್ಥಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇನ್ನು ಘಟನೆ ಸಂಬಂಧ ಸ್ಪಷ್ಟನೆ ನೀಡಿದ ಕೋಚ್ ಬುಟ್ಟಿಯಂಡ ಚಂಗಪ್ಪ, ಉದ್ದೇಶಪೂರ್ವಕವಾಗಿ ವಿದ್ಯಾರ್ಥಿಯನ್ನು ಥಳಿಸಿಲ್ಲ. ವಿದ್ಯಾರ್ಥಿ ತರಬೇತಿಗೆ ಬಾರದೆ ಸತಾಯಿಸುತ್ತಿದ್ದ. ಇದು ಆಕಸ್ಮಿಕವಾಗಿ ನಡೆದಿದೆ ಎಂದು ಕೋಚ್ ಬುಟ್ಟಿಯಂಡ ಚಂಗಪ್ಪ ತಿಳಿಸಿದ್ದಾರೆ.

- Advertisement -

Related news

error: Content is protected !!