

ಪುತ್ತೂರು: ‘ಸಮಸ್ತ’ ದ ಅಧೀನದ ಮದ್ರಸ ವಿದ್ಯಾರ್ಥಿಗಳಿಗಾಗಿ ಎರಡು ವರ್ಷಗಳಿಗೊಮ್ಮೆ ನಡೆಯುವ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆ ‘ಮುಸಾಬಕ- 2021’ ಕಾರ್ಯಕ್ರಮದ ಪುತ್ತೂರು ರೇಂಜ್ ಮಟ್ಟದ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಪುತ್ತೂರು ಬದ್ರಿಯಾ ಜುಮ್ಮಾ ಮಸೀದಿಯ ಮದ್ರಸ ಸಭಾಂಗಣದಲ್ಲಿ ಪುತ್ತೂರು ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ಮತ್ತು ರೇಂಜ್ ಮದ್ರಸ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ಇದರ ಜಂಟಿ ಸಭೆಯಲ್ಲಿ ರಚಿಸಲಾದ ಈ ಸ್ವಾಗತ ಸಮಿತಿ ರಚನಾ ಸಭೆಯ ಅಧ್ಯಕ್ಷತೆಯನ್ನು ರೇಂಜ್ ಮದ್ರಸ ಮ್ಯಾನೇಜ್ ಮೆಂಟ್ ಅಧ್ಯಕ್ಷ ರಫೀಕ್ ಹಾಜಿ ನೇರಳಕಟ್ಟೆ ವಹಿಸಿದ್ದರು. ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುಲ್ ಕರೀಂ ದಾರಿಮಿ ಮುಸಾಬಕ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಪುತ್ತೂರು ರೇಂಜ್ ಮಟ್ಟದ ಮುಸಾಬಕ ಕಾರ್ಯಕ್ರಮವು ಡಿಸೆಂಬರ್ ತಿಂಗಳಲ್ಲಿ ನಡಯಲಿದ್ದು ಇದರ ಪೂರ್ವಭಾವಿ ಸಿದ್ಧತೆಗಾಗಿ ರಚಿಸಲಾದ ಸ್ವಾಗತ ಸಮಿತಿಗೆ ಈ ಕೆಳಗಿನವರನ್ನು ಆರಿಸಲಾಯಿತು.
ಚೆಯರ್ಮಾನ್ ಆಗಿ ಆರ್.ಬಿ. ಅಬ್ದುರ್ರಝಾಕ್ ಪಡೀಲ್,
ಕನ್ವೀನರ್ ಆಗಿ ಶಾಫಿ ಮುಸ್ಲಿಯಾರ್ ಕಲ್ಲೇಗ, ಕೋಶಾಧಿಕಾರಿಯಾಗಿ ಬಾತಿಷ್ ವಳತ್ತಡ್ಕ, ವೈಸ್ ಚೆಯರ್ಮಾನ್ ಆಗಿ ನೌಶಾದ್ ಹಾಜಿ ಬೊಳ್ವಾರ್, ಕೆ.ಎಂ.ಎ. ಕೊಡುಂಗಾಯಿ ಫಾಝಿಲ್ ಹನೀಫಿ, ಇಸ್ಮಾಯಿಲ್ ಸಾಲ್ಮರ, ವೈಸ್ ಕನ್ವೀನರ್ ಆಗಿ ಮುಸ್ತಫ ಫೈಝಿ ಪರ್ಲಡ್ಕ , ಎ.ಎಸ್.ಕೌಸರಿ ವಳತ್ತಡ್ಕ,

ಕಾರ್ಯಕಾರಿ ಸದಸ್ಯರುಗಳಾಗಿ ಹಸೈನಾರ್ ಬನಾರಿ, ಸಂಶುದ್ದೀನ್ ಪಡೀಲ್, ಸೂಫಿ ಬಪ್ಪಳಿಗೆ, ಎಂ.ಎಸ್.ಅಬ್ದುಲ್ ಹಮೀದ್ ಪುಣಚ, ಅಬ್ದುಲ್ ಮಜೀದ್ ದಾರಿಮಿ ಮಿತ್ತೂರು, ಸುಲೈಮಾನ್ ದಾರಿಮಿ ಮಂಜ, ಸಂಶುದ್ದೀನ್ ಹನೀಫಿ ಮರ್ದಾಲ, ರಫೀಕ್ ಹಾಜಿ ನೇರಳಕಟ್ಟೆ, ಇಬ್ರಾಹೀಂ ಕಡವ ಅವರನ್ನು ಆರಿಸಲಾಯಿತು.

vtv vitla











