Tuesday, July 28, 2026
spot_imgspot_img
spot_imgspot_img

ಪುತ್ತೂರು: ಲೈಂಗಿಕ ಸಂಪರ್ಕ ಮಾಡಿದ ಹಳೆಯ ವಿಡಿಯೋ ಯುವತಿಯ ಪತಿಗೆ ರವಾನಿಸಿದ ಪ್ರಿಯಕರ: ಯುವತಿಯೊಂದಿಗೆ ವಿಚ್ಛೇದನಕ್ಕೆ ಪಟ್ಟು ಹಿಡಿದ ಪತಿ; ಯುವತಿಯಿಂದಲೇ ಪ್ರಿಯಕರನ ವಿರುದ್ಧ ಅತ್ಯಾಚಾರದ ದೂರು ದಾಖಲು

- Advertisement -
- Advertisement -

ಪುತ್ತೂರು: ಪ್ರಿಯಕರನೋರ್ವನು ಯುವತಿಯೊಂದಿಗೆ ಲೈಂಗಿಕ ಸಂಪರ್ಕ ಮಾಡಿರುವ ಹಳೆಯ ವೀಡಿಯೋವೊಂದನ್ನು ಆಕೆಯ ಪತಿಯ ಮೊಬೈಲ್ ಫೋನ್ ಗೆ ರವಾನಿಸಿದ್ದಾನೆ. ವೀಡಿಯೋ ನೋಡಿದ ಪತಿ ವಿಚ್ಛೇದನಕ್ಕೆ ಪಟ್ಟು ಹಿಡಿದಿದ್ದು, ಇದೀಗ ಯುವತಿ ಪ್ರಿಯಕರನ ಮೇಲೆಯೇ ಅತ್ಯಾಚಾರದ ದೂರು ದಾಖಲಿಸಿರುವ ವಿಚಿತ್ರ ಪ್ರಕರಣವೊಂದು ನಡೆದಿದೆ.

ಪುತ್ತೂರು ತಾಲೂಕಿನ ವಿಜೇಶ್ ಹಾಗೂ ಯುವತಿ ಪರಸ್ಪರ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದರು. ವಿಜೇಶ್ 2016ರ ನವೆಂಬರ್ ತಿಂಗಳಿನಲ್ಲಿ ಒಂದು ದಿನ ತನ್ನ ಪ್ರಿಯತಮೆಯನ್ನು ಚಹಾ ಕುಡಿಯಲು ಹೊಟೇಲ್ ಗೆ ಕರೆದಿದ್ದಾನೆ. ಪುತ್ತೂರಿನ ದರ್ಬೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಪ್ರಿಯಕರ ಕರೆದಿರುವುದಕ್ಕೆ ಬಂದಿದ್ದಾಳೆ.

ಆದರೆ ಪ್ರಿಯಕರ ವಿಜೇಶ್ ಚಹಾ ಕುಡಿಯಲು ಹೊಟೇಲ್ ಗೆ ಕರೆದೊಯ್ಯದೆ, ಆಕೆಯನ್ನು ಕಾರಿನಲ್ಲಿ ನೇರವಾಗಿ ಸುರತ್ಕಲ್ ಬಳಿಯ ರೆಡ್ ರಾಕ್ ಲಾಡ್ಜ್ ಗೆ ಕರೆತಂದಿದ್ದಾನೆ. ಅಲ್ಲಿ ಯುವತಿಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಸಂಪರ್ಕ ನಡೆಸಿದ್ದಾನೆ. ಅಲ್ಲದೆ ಅದನ್ನು ಫೋಟೋ ತೆಗೆದುಕೊಂಡು, ವೀಡಿಯೋ ಚಿತ್ರೀಕರಿಸಿ ಇಟ್ಟುಕೊಂಡಿದ್ದ.

- Advertisement -

Related news

error: Content is protected !!