Sunday, October 18, 2026
spot_imgspot_img
spot_imgspot_img

ಮಂಗಳೂರು: ನೇತ್ರಾವತಿ ನದಿಗೆ ಕಸ ಎಸೆದ ಮಹಿಳೆ ಮತ್ತು ಕಾರು ವಶಕ್ಕೆ

- Advertisement -
- Advertisement -

ಉಳ್ಳಾಲ: ನೇತ್ರಾವತಿ ನದಿಗೆ ಕಸವನ್ನು ಎಸೆದ ಬೆಂಗಳೂರು ಮೂಲದ ವಾಹನವನ್ನು ಪತ್ತೆ ಹಚ್ಚಿ ಕಾರಿನಲ್ಲಿದ್ದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.

ಇಂದು ಬೆಳಗ್ಗೆ ಕೆಂಪು ಬಣ್ಣದ(KAO3NB4648) ಕಾರೊಂದು ನೇತ್ರಾವತಿ ಸೇತುವೆಯ ಮೇಲೆ ಬಂದು ನಿಂತಿದೆ. ಅದರಿಂದ ಇಳಿದ ಇಬ್ಬರು ಮಹಿಳೆಯರು ಸೇತುವೆಯ ಮೇಲಿನಿಂದ ಕಸವನ್ನು ನದಿಗೆ ಎಸೆದಿದ್ದಾರೆ. ಈ ದೃಶ್ಯವನ್ನು ಹಿಂಬದಿ ಕಾರಿನಲ್ಲಿದ್ದವರು ಸೆರೆ ಹಿಡಿದು ವೈರಲ್ ಮಾಡಿದ್ದಾರೆ.

ಈ ಬಗ್ಗೆ ಮಂಗಳೂರು ಮಹಾ ನಗರ ಪಾಲಿಕೆ ಹಿರಿಯ ಆರೋಗ್ಯ ನಿರೀಕ್ಷಕರ ದೂರಿನನ್ವಯ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪ್ರಕರಣವನ್ನು ಭೇದಿಸಿರುವ ಪೊಲೀಸರು ಕಾರನ್ನು ವಶಪಡಿಸಿದ್ದಾರೆ. ಅಲ್ಲದೆ, ಇಬ್ಬರೂ ಮಹಿಳೆಯರು ಮಾಸ್ಕ್ ಸರಿಯಾಗಿ ಧಾರಣೆ ಮಾಡದಿರುವ ಬಗ್ಗೆಯೂ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!