Sunday, July 26, 2026
spot_imgspot_img
spot_imgspot_img

ಮಾಣಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಾಲುದಾರ ಸದಸ್ಯರಿಗೆ ಲಾಭಾಂಶ ವಿತರಣಾ ಕಾರ್ಯಕ್ರಮ

- Advertisement -
- Advertisement -

ಮಾಣಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ , ಬಿ ಸಿ ಟ್ರಸ್ಟ್ , ವಿಟ್ಲ , ಮಾಣಿ ವಲಯದ ಪ್ರಾಯೋಜಕತ್ವದಲ್ಲಿ ಯೋಜನೆಯ ಪಾಲುದಾರ ಸದಸ್ಯರಿಗೆ , ಲಾಭಾಂಶ ವಿತರಣಾ ಕಾರ್ಯಕ್ರಮ ಇಡ್ಕಿದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ಯನ್ನುಇಡ್ಕಿದು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಮಲ್ಲಿಕಾರವರು ವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಜನಜಾಗೃತಿ ವೇದಿಕೆ ಸದಸ್ಯ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತುರವರು ನೆರವೇರಿಸಿ, ಪೂಜ್ಯ ಖಾವಂದರು ಕಲ್ಪಿಸಿದ ಉಳಿತಾಯ ಯೋಜನೆಯಲ್ಲಿ ಸಾಲ ಪಡೆದು ಲಾಭಂಶ ಪಡೆದುಕೊಳ್ಳುವ ಹಂತದಲ್ಲಿದ್ದೇವೆ ಯಾವುದೇ ಕಷ್ಟಕರ ಇಲ್ಲದೆ ಸುಲಭ ರೀತಿಯಲ್ಲಿ ಸಿಗುವ ಇಂಥಹ ಸೌಲಭ್ಯಗಳನ್ನು ಎಲ್ಲರೂ ಪಡೆದುಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು. ವಿಟ್ಲ ತಾಲೂಕಿನ ಯೋಜನಾಧಿಕಾರಿ ಶ್ರೀಯುತ ಚೆನ್ನಪ್ಪ ಗೌಡರವರು ಯೋಜನೆ ಹೆಮ್ಮರವಾಗಿ ಬೆಳೆದು ಬಂದ ರೀತಿ, ಪೂಜ್ಯರ ಆಶಯಗಳನ್ನು, ನಾವು ಹೇಗೆ ಸದ್ಬಳಕೆ ಮಾಡಬೇಕೆಂದು ತಿಳಿಸಿದರು.

ವೇದಿಕೆಯಲ್ಲಿ ಮಾಣಿ ವಲಯದ ವಲಯಾಧ್ಯಕ್ಷ ತನಿಯಪ್ಪ ಗೌಡ , ಅಳಕೆಮಜಲು ಒಕ್ಕೂಟದ ಅಧ್ಯಕ್ಷ , ತಿರುಮಲೇಶ್ವರ , ಆಂತರಿಕ ಲೆಕ್ಕ ಪರಿಶೋಧಕರಾದ ಶ್ರೀಮತಿ ಯಶೋಧ , ಸೇವಾಪ್ರತಿನಿಧಿ ಯೋಗಿತ , ಒಕ್ಕೂಟದ ಪದಾದಿಕಾರಿಗಳು ಉಪಸ್ಥಿತರಿದ್ದರು. ಇಡ್ಕಿದು ಸೇವಾ ಪ್ರತಿನಿಧಿ ದಿವ್ಯಾರವರು ಸ್ವಾಗತಿಸಿದರು , ಅಳಕೆಮಜಲು ಸೇವಾಪ್ರತಿನಿಧಿ ಸುಗಂಧಿನಿ ವಂದಿಸಿದರು. ಮಾಣಿ ವಲಯ ಮೇಲ್ವಿಚಾರಕಿ ಶ್ರೀಮತಿ ಪ್ರೇಮಾರವರು ಕಾರ್ಯಕ್ರಮವನ್ನು ನಿರೂಪಿಸಿದರು.

driving

- Advertisement -

Related news

error: Content is protected !!