Monday, August 3, 2026
spot_imgspot_img
spot_imgspot_img

ಸಾಲದ ಸುಳಿಯಲ್ಲಿ ಸಿಲುಕಿದ ಚಿತ್ರನಟ ದ್ವಾರಕೀಶ್!!

- Advertisement -
- Advertisement -
vtv vitla

ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರಿಗೆ ಸಂಕಷ್ಟ ಎದುರಾಗಿದೆ. ಅವರೀಗ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಸಾಲದ ಹಣ ವಾಪಸ್ ನೀಡುವಂತೆ ದ್ವಾರಕೀಶ್‌ಗೆ ಕೋರ್ಟ್​ ಆದೇಶಿಸಿದೆ. 1 ತಿಂಗಳಲ್ಲಿ ಸಾಲದ ಹಣ ಹಿಂದಿರುಗಿಸಲು ಗಡುವು ನೀಡಲಾಗಿದೆ.

For Dwarakish, life comes full circle with 'Ayushmanbhava' - The Hindu

2013ರಲ್ಲಿ ನಿರ್ಮಾಪಕ ಕೆಸಿಎನ್​ ಚಂದ್ರಶೇಖರ್‌ ಅವರಿಂದ ದ್ವಾರಕೀಶ್​ ಸಾಲ ಪಡೆದುಕೊಂಡಿದ್ದರು. ‘ಚಾರುಲತಾ’ ಸಿನಿಮಾ ಬಿಡುಗಡೆಗಾಗಿ 50 ಲಕ್ಷ ರೂ. ಮೊತ್ತವನ್ನು ಅವರು ಪಡೆದಿದ್ದರು. ನಂತರ ಸಾಲದ ಹಣ ವಾಪಸ್​ ನೀಡದೇ ಸತಾಯಿಸಿದ್ದರು. ಈ ಪ್ರಕರಣ ಕೋರ್ಟ್​ ಮೆಟ್ಟಿಲೇರಿತ್ತು. ಇನ್ನು ಒಂದು ತಿಂಗಳ ಒಳಗೆ 52 ಲಕ್ಷ ರೂ.ಗಳನ್ನು ಹಿಂದಿರುಗಿಸುವಂತೆ ದ್ವಾರಕೀಶ್​ ಅವರಿಗೆ ಕೋರ್ಟ್​ ಆದೇಶ ನೀಡಿದೆ.

vtv vitla

2013ರಲ್ಲಿ ಕೆಸಿಎನ್​ ಚಂದ್ರಶೇಖರ್‌ ಅವರಿಂದ ಸಾಲ ಪಡೆಯುವಾಗ ದ್ವಾರಕೀಶ್​ ಅವರು ಚೆಕ್​ ನೀಡಿದ್ದರು. ನಂತರ ‘ನಾನು ಚೆಕ್​ ನೀಡಿಲ್ಲ, ಚೆಕ್​ಗೆ ಸಹಿ ಮಾಡಿಲ್ಲ’ ಎಂದು ಅವರು ವಾದಿಸಿದ್ದರು. ಹೀಗಾಗಿ ಕೋರ್ಟ್​ ಮೊರೆ ಹೋಗುವುದು ಕೆಸಿಎನ್​ ಚಂದ್ರಶೇಖರ್‌ ಅವರಿಗೆ ಅನಿವಾರ್ಯ ಆಗಿತ್ತು. ಆ ಸಹಿ ದ್ವಾರಕೀಶ್ ಅವರದ್ದೇ ಎಂದು ಫೋರೆನ್ಸಿಕ್ ಲ್ಯಾಬ್​ನಲ್ಲಿ ಸಾಬೀತಾಗಿತ್ತು.

Dwarakish fined Rs 52.20 lakh

ಹಣ ಹಿಂದಿರುಗಿಸುವಂತೆ 2019ರಲ್ಲಿ ದ್ವಾರಕೀಶ್​ ಅವರಿಗೆ ನ್ಯಾಯಾಲಯ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಅವರು ಸೆಷನ್ಸ್​ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ಬಳಿಕ ಕೆಳ ನ್ಯಾಯಾಲಯದ ಆದೇಶವನ್ನು ಸೆಷನ್ಸ್​ ಕೋರ್ಟ್​ ಎತ್ತಿ ಹಿಡಿದಿದೆ.

vtv vitla
vtv vitla
- Advertisement -

Related news

error: Content is protected !!