Tuesday, June 30, 2026
spot_imgspot_img
spot_imgspot_img

ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಡೆತನದ ಫಾರ್ಮ್ ಹೌಸ್ ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ!

- Advertisement -
- Advertisement -

ಮೈಸೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಒಡೆತನದ ಫಾರ್ಮ್ ಹೌಸ್ ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಟಿ. ನರಸೀಪುರ ರಸ್ತೆಯ ಫಾರ್ಮ್ ಹೌಸ್ ನಲ್ಲಿ ಶಿವಮೊಗ್ಗ ಮೂಲದ ಕುಟುಂಬದವರು ಕೆಲಸ ಮಾಡಿಕೊಂಡಿದ್ದರು. ಮಗಳು ಕೂಡ ಕುಟುಂಬದವರೊಂದಿಗೆ ಇದ್ದಳು. ಅಲ್ಲೇ ಕೆಲಸ ಮಾಡಿಕೊಂಡಿದ್ದ ಬಿಹಾರ ಮೂಲದ ಆರೋಪಿ ಕಳೆದ ಸೋಮವಾರ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.

ಮೈಸೂರು ಮಹಿಳಾ ಠಾಣೆಯ ಪೊಲೀಸರಿಗೆ ಬಾಲಕಿಯ ತಾಯಿ ದೂರು ನೀಡಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

- Advertisement -

Related news

error: Content is protected !!