Monday, May 6, 2024
spot_imgspot_img
spot_imgspot_img

ವಿಟ್ಲ: ಮೇಗಿನಪೇಟೆ ಶ್ರೀ ಮಹಮ್ಮಾಯಿ ಅಮ್ಮನವರು ಮತ್ತು ಸ-ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಮಾರಿಪೂಜೆಯ ಆಮಂತ್ರಣ ಪತ್ರಿಕೆ ಹಂಚಿಕೆ

- Advertisement -G L Acharya panikkar
- Advertisement -
suvarna gold

ವಿಟ್ಲ: ಮೇಗಿನಪೇಟೆ ಶ್ರೀ ಮಹಮ್ಮಾಯಿ ಅಮ್ಮನವರು ಮತ್ತು ಸ-ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಮಾರಿಪೂಜೆಯು ಜ. ೨೬ ಹಾಗೂ ಜ.೨೭ ರಂದು ನಡೆಯಲಿದೆ. ಈ ಪ್ರಯುಕ್ತ ಆಮಂತ್ರಣ ಪತ್ರಿಕೆಯನ್ನು ಹಂಚಲಾಯಿತು.

ವೇದಮೂರ್ತಿ ಕುಂಟುಕುಡೇಲು ಕೆ. ರಘುರಾಮ ತಂತ್ರಿವರ್ಯರ ನೇತೃತ್ವದಲ್ಲಿ ಶ್ರೀ ಅಮ್ಮನವರು ಮತ್ತು ಸ-ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಹಂಚಲಾಯಿತು. ಈ ವೇಳೆ ಶ್ರೀ ಮಹಮ್ಮಾಯಿ ಅಮ್ಮನವರ ಸೇವಾ ಸಮಿತಿಯ ಗೌರವಾಧ್ಯಕ್ಷ ಕೃಷ್ಣಯ್ಯ ಕೆ ವಿಟ್ಲ ಅರಮನೆ, ಕಾರ್ಯಾಧ್ಯಕ್ಷ ಪದ್ಮನಾಭ ಗೌಡ ಚಂದಪ್ಪಾಡಿ, ಕಾರ್ಯದರ್ಶಿ ರಾಜೇಶ್ ವಿಟ್ಲ, ಮೊಕ್ತೇಸರು ವಿ. ಶೀನ, ಕೋಶಾಧಿಕಾರಿ ರಾಮ್ ದಾಸ್ ಶೆಣೈ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಜಯಂತ ವಿಟ್ಲ, ಸಂತೋಷ್ ಮೇಗಿನಪೇಟೆ, ಸತೀಶ್ ಮೇಗಿನ ಪೇಟೆ, ಹಾಗೂ ಹಲವು ಸೇವಾ ಸಮಿತಿ ಸದಸ್ಯರು ಇದ್ದರು.

ಜ೨೭ರಂದು ಸಭಾಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಚಿವ ಎಸ್ ಅಂಗಾರ, ಪುತ್ತೂರು ಶಾಸಕ ಸಂಜೀವ ಮಠಂದೂರು ಹಾಗೂ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ. ರಾತ್ರಿ ೭ ಗಂಟೆಗೆ – ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜೇಶ್ ವಿಟ್ಲ ನಿರ್ದೇಶನದ ಆರ್ ಕೆ. ಆರ್ಟ್ಸ್ ಚಿಣ್ಣರಮನೆ (ರಿ.) ವಿಟ್ಲ ಇವರಿಂದ ನೃತ್ಯ ಸಂಭ್ರಮ ಹಾಗೂ ಶ್ರೀದೇವಿ ಜಗದಾಂಬಿಕೆ (ನೃತ್ಯ ರೂಪಕ) ನಡೆಯಲಿದೆ.

- Advertisement -

Related news

error: Content is protected !!