Friday, April 26, 2024
spot_imgspot_img
spot_imgspot_img

ಸಂಕಷ್ಟದ ಸಮಯದಲ್ಲಿ ಇನ್ನೂ ದುಬಾರಿಯಾದ ಅಡುಗೆ ಅನಿಲ ದರ

- Advertisement -G L Acharya panikkar
- Advertisement -

ನವದೆಹಲಿ: ಒಂದೆಡೆ ಶತಕ ಬಾರಿಸಿರುವ ಪೆಟ್ರೋಲ್ ಬೆಲೆ, ಇನ್ನೊಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಅದರ ನಡುವೆ ಜನ ಸಾಮಾನ್ಯರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಬಂದಿದೆ. ಇಂದಿನಿoದಲೇ ಜಾರಿಗೆ ಬರುವಂತೆ ತೈಲ ಕಂಪನಿಗಳು ಗೃಹ ಬಳಕೆಯ ಅಡುಗೆ ಅನಿಲದ ಪ್ರತೀ ಸಿಲಿಂಡರ್ ಬೆಲೆಯಲ್ಲಿ 25.50 ಹೆಚ್ಚಳ ಮಾಡಿವೆ.

ಈ ಮೂಲಕ 14.2 ಕೆಜಿ ತೂಕದ ಸಿಲಿಂಡರ್ ಬೆಲೆ ದೆಹಲಿಯಲ್ಲಿ 834.50 ಆಗಿದೆ. 19 ಕೆಜಿ ಸಿಲಿಂಡರ್ ಬೆಲೆ ಘ 76 ಹೆಚ್ಚಿಸಲಾಗಿದ್ದು, 1,550 ಆಗಿದೆ. ಮುಂಬೈ ಮತ್ತು ಕೋಲ್ಕತ್ತಾದಲ್ಲೂ ಸಿಲಿಂಡರ್ ಬೆಲೆ 834.50 ಆಗಿದ್ದು, ಚೆನ್ನೈನಲ್ಲಿ ಒಂದು ಎಲ್‌ಪಿಜಿ ಸಿಲಿಂಡರ್‌ಗೆ 850.50 ಆಗಿದೆ. ಎಲ್‌ಪಿಜಿ ಬೆಲೆಗಳನ್ನು ಪ್ರತಿ ತಿಂಗಳ ಆರಂಭದಲ್ಲಿ ಪರಿಷ್ಕರಿಸಲಾಗುತ್ತದೆ ಮತ್ತು ಜುಲೈ 1ರ ಈ ಹೊಸ ಪರಿಷ್ಕರಣೆ ಸೇರಿ ಆರು ತಿಂಗಳಲ್ಲಿ ಪ್ರತಿ ಸಿಲಿಂಡರ್ ಬೆಲೆಯಲ್ಲಿ 140 ರಷ್ಟು ಹೆಚ್ಚಾಗಿದೆ.

ದೇಶದ ಹಲವು ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ಬೆಲೆ 100ರ ಗಡಿ ದಾಟಿರುವ ಬೆನ್ನಲ್ಲೇ ಸಿಲಿಂಡರ್ ಬೆಲೆ ಏರಿಗೆ ಜನರಿಗೆ ಫೆಬ್ರವರಿಯಲ್ಲಿ, ಎಲ್‌ಪಿಜಿ ಬೆಲೆಗಳನ್ನು ಮೂರು ಬಾರಿ ಪರಿಷ್ಕರಿಸಲಾಗಿತ್ತು. ಫೆಬ್ರವರಿ 4 ರಂದು ಸಿಲಿಂಡರ್‌ಗೆ 125, ಫೆಬ್ರವರಿ 15 ರಂದು 150 ಮತ್ತು ಫೆಬ್ರವರಿ 25 ರಂದು 25 ಹೆಚ್ಚಳವಾಗಿತ್ತು. ಮಾರ್ಚ್ನಲ್ಲಿ ಮತ್ತೆ 25 ರಷ್ಟು ಹೆಚ್ಚಿಸಲಾಗಿತ್ತು.

- Advertisement -

Related news

error: Content is protected !!