
ಬೆಂಗಳೂರು ::ರಾಜ್ಯದ ಮುಖ್ಯ ಚುನಾವಣಾಧಿಕಾರಿ (ಸಿಇಒ) ಕಚೇರಿಯು ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನಕ್ಕೆ ಸಂಬಂಧಿಸಿದಂತೆ ಹಂಚಿಕೊಂಡಿರುವ ದತ್ತಾಂಶದಂತೆ, ಮತದಾರರ ಪಟ್ಟಿಯಿಂದ ಹೆಸರುಗಳ ಅಳಿಸುವಿಕೆಯ ಅಂಕಿ-ಅಂಶಗಳಲ್ಲಿ ಸುಮಾರು 6,000 ಮತದಾರರ ವ್ಯತ್ಯಾಸವಿರುವುದು ಬೆಳಕಿಗೆ ಬಂದಿದೆ ಎಂದು newindianexpress.com ವರದಿ ಮಾಡಿದೆ.


ಶನಿವಾರ ಬಿಡುಗಡೆಯಾದ ಆ.24, 2026ರ ಅಂತಿಮ ಎಸ್‌ಐಆರ್ ಕರಡು ಮತದಾರರ ಪಟ್ಟಿಯ ಪ್ರಕಾರ, ಚುನಾವಣಾಧಿಕಾರಿಗಳು ಜೂ.16ರಿಂದ ಆ.23ರ ನಡುವೆ ಹೆಸರುಗಳನ್ನು ಅಳಿಸಲು ಒಟ್ಟು 67,307 ಫಾರ್ಮ್-7 ಅರ್ಜಿಗಳನ್ನು ಸ್ವೀಕರಿಸಿದ್ದರು. ಆದರೆ ಸೆ. 25ರಂದು ಸಿಇಒ ಕಚೇರಿ ಬಿಡುಗಡೆ ಮಾಡಿದ ದತ್ತಾಂಶದಲ್ಲಿ ಹೆಸರುಗಳ ಅಳಿಸುವಿಕೆಗಾಗಿ 61,130 ಅರ್ಜಿಗಳನ್ನು ಸ್ವೀಕರಿಸಿ ಸಂಸ್ಕರಿಸಲಾಗಿದೆ ಎಂದು ತಿಳಿಸಲಾಗಿದೆ.ಅರ್ಜಿಗಳ ಸಂಖ್ಯೆಯಲ್ಲಿ ಕಂಡುಬಂದಿರುವ ಈ ವ್ಯತ್ಯಾಸವು ಚುನಾವಣಾ ಅಧಿಕಾರಿಗಳನ್ನೇ ಅಚ್ಚರಿಗೊಳಿಸಿದೆ. ಈ ದೋಷವನ್ನು ಒಪ್ಪಿಕೊಂಡಿರುವ ಅವರು, ಸಿಇಒ ಕರ್ನಾಟಕ ಮತ್ತು ಭಾರತೀಯ ಚುನಾವಣಾ ಆಯೋಗದ ಸರ್ವರ್ ಮೂಲಕ ಇದನ್ನು ವಿವರವಾಗಿ ಪರಿಶೀಲಿಸಬೇಕಾಗಿದೆ ಎಂದು ತಿಳಿಸಿದ್ದಾರೆ.ಮುಖ್ಯ ಚುನಾವಣಾ ಅಧಿಕಾರಿ ವಿ. ಅನ್ನುಕುಮಾರ್ ಅವರು ಈ ವಿಷಯದ ಬಗ್ಗೆ ಪರಿಶೀಲಿಸುವುದಾಗಿ ಹೇಳಿದ್ದಾರೆ.

ಚುನಾವಣಾಧಿಕಾರಿಗಳು ಜೂ.6 ರಿಂದ ಸೆ.24ರವರೆಗೆ ಒಟ್ಟು 19,48,164 ಅರ್ಜಿಗಳನ್ನು ಸ್ವೀಕರಿಸಿದ್ದು, ಇದರಲ್ಲಿ ಸೇರ್ಪಡೆಗಾಗಿ 7,70,988 ಪಾರ್ಮ್-6, ಎನ್‌ಆರ್‌ಐ ಮತದಾರರಿಂದ 4,551 ಫಾರ್ಮ್-6ಎ ಹಾಗೂ ತಿದ್ದುಪಡಿಗಾಗಿ 11,11,495 ಫಾರ್ಮ್-8 ಅರ್ಜಿಗಳು ಸೇರಿವೆ. ಬೀದರ್‌ನಲ್ಲಿ ಅತಿ ಹೆಚ್ಚು ಅಂದರೆ 5,154, ಶಿವಮೊಗ್ಗದಲ್ಲಿ 3,181, ತುಮಕೂರಿನಲ್ಲಿ 3,171 ಮತ್ತು ಬೆಂಗಳೂರು ನಗರದಲ್ಲಿ 2,318 ಮತದಾರರ ಹೆಸರುಗಳನ್ನು ಅಳಿಸಲಾಗಿದೆ.ಆದರೆ ಕರಡು ಪಟ್ಟಿಯ ಪ್ರಕಾರ, ಜೂ.16ರಿಂದ ಆ.23ರವರೆಗೆ ಚುನಾವಣಾಧಿಕಾರಿಗಳು ಒಟ್ಟು 14,67,929 ಅರ್ಜಿಗಳನ್ನು ಸ್ವೀಕರಿಸಿದ್ದರು. ಇದರಲ್ಲಿ 4,73,354 -6, 3,880 -62, 67,307 -7 2 9,23,388 ಫಾರ್ಮ್-8 ಸೇರಿದ್ದವು.ಮತದಾರ ಮೃತಪಟ್ಟಿದ್ದರೆ, ಬೇರೆಡೆಗೆ ಸ್ಥಳಾಂತರಗೊಂಡಿದ್ದರೆ ಅಥವಾ ನಕಲಿ ನೋಂದಣಿಯಂತಹ ಸಂದರ್ಭಗಳಲ್ಲಿ ಹೆಸರು ಅಳಿಸಲು ಫಾರ್ಮ್-7 ಅನ್ನು ಬಳಸಲಾಗುತ್ತದೆ.
ಫಾರ್ಮ್ 7ನ್ನು ವರ್ಷವಿಡೀ ಸಲ್ಲಿಸಬಹುದಾದದರೂ,ಎಸ್‌ಐಆರ್ ಅವಧಿಯಲ್ಲಿ ಅದನ್ನು ಹಕ್ಕು ಮತ್ತು ಆಕ್ಷೇಪಣೆಗಳ ಸಲ್ಲಿಕೆಗಾಗಿ ಬಳಸಲಾಗುತ್ತಿದೆ.ಹಕ್ಕುಗಳು ಮತ್ತು ಆಕ್ಷೇಪಣೆಗಳ ವಿಲೇವಾರಿ ಪ್ರಕ್ರಿಯೆಯು ಅಕ್ಟೋಬರ್ 22ರವರೆಗೆ ಮುಂದುವರಿಯಲಿದ್ದು, ಅಂತಿಮ ಪಟ್ಟಿಯು ಅಕ್ಟೋಬರ್ 27ರಂದು ಪ್ರಕಟವಾಗಲಿದೆ.
ಚುನಾವಣಾ ಅಧಿಕಾರಿಗಳು ಸ್ವೀಕರಿಸಿದ ಒಟ್ಟು ಫಾರ್ಮ್-7 ಹಾಗೂ ಫಾರ್ಮ್-8 ಅರ್ಜಿಗಳ ವರ್ಗವಾರು ವಿವರಗಳನ್ನು ಒದಗಿಸಲು ಸಹ ವಿಫಲರಾಗಿದ್ದಾರೆ.








