ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ಶ್ರೀನಗರ: ಕೇಂದ್ರ ಸರ್ಕಾರ ಇಂದು ಎರಡೆರಡು ಸಂಭ್ರಮದ ಕ್ಷಣದಲ್ಲಿದೆ. ಒಂದೆಡೆ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಯಲಿದ್ದರೆ, ಮತ್ತೊಂದೆಡೆ ಜಮ್ಮು-ಕಾಶ್ಮೀರಕ್ಕೆ ವಿಧಿಸಿದ್ದ 370ನೇ ವಿಧಿ ರದ್ದಾಗಿ ಇಂದಿಗೆ ಇಂದು ವರ್ಷ ತುಂಬಿದೆ.
ಜಮ್ಮು-ಕಾಶ್ಮೀರಕ್ಕೆ ವಿಧಿಸಿದ್ದ ವಿಶೇಷಾಧಿಕಾರವನ್ನು ಆಗಸ್ಟ್ 5, 2019ರಂದು ಕೇಂದ್ರಸರ್ಕಾರ ತೆರೆವುಗೊಳಿಸಿತ್ತು. ನಂತರ ಜಮ್ಮು ಮತ್ತು ಕಾಶ್ಮೀರ, ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಲಾಗಿತ್ತು. ಸುಮಾರು 70 ವರ್ಷಗಳ ಬಳಿಕ ಅಲ್ಲಿನ ಜನ ನಿಟ್ಟುಸಿರು ಬಿಟ್ಟಿದ್ದರು.
ಸರ್ವಪಕ್ಷ ಸಭೆ ಕರೆದ ಫಾರುಕ್ ಅಬ್ದುಲ್ಲಾ
ಪ್ರಮುಖವಾಗಿ ಜಮ್ಮು-ಕಾಶ್ಮೀರದ ಉರಿಸೆಕ್ಟರ್ ನ ನಾಗರಿಕರು ಮೂಲಸೌಕರ್ಯಗಳ ಅಭಿವೃದ್ಧಿ ಇನ್ನೂ ಆಗಬೇಕಿದೆ ಎಂದು ಒತ್ತಾಯಿಸುತ್ತಿದ್ದಾರೆ. ಇನ್ನು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರುಕ್ ಅಬ್ದುಲ್ಲಾ, ಜಮ್ಮು-ಕಾಶ್ಮೀರದಲ್ಲಿ ಸರ್ವಪಕ್ಷಗಳ ಸಭೆ ಕರೆದಿದ್ದಾರೆ. ಇನ್ನು 370 ಆರ್ಟಿಕಲ್ ರದ್ದಾಗಿ ಒಂದು ವರ್ಷವಾದ ನಡುವೆ ಫಾರಕ್ ಅಬ್ಧುಲ್ ಕರೆದ ಸರ್ವಪಕ್ಷಗಳ ಸಭೆ ಭಾರೀ ಮಹತ್ವ ಪಡೆದುಕೊಂಡಿದೆ.
ಶ್ರೀನಗರದಲ್ಲಿ ಕರ್ಫ್ಯೂ ಜಾರಿ:
370 ವಿಧಿ ರದ್ದುಗೊಳಿಸಿದ ನಂತರ ಇದೇ ಮೊದಲ ಬಾರಿಗೆ ಕಣಿವೆ ರಾಜ್ಯದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ಪ್ರತ್ಯೇಕವಾದಿಗಳು ಇಂದು ಬ್ಲಾಕ್ ಡೇ ಆಚರಿಸಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಯಾವುದೇ ಹಿಂಸಾಚಾರ ನಡೆಯದಂತೆ ಈ ಕ್ರಮ ಕೈಗೊಳ್ಳಲಾಗಿದೆ.