Sunday, November 1, 2026
spot_imgspot_img
spot_imgspot_img

ಸಿಟಿ ರವಿಗೆ ಹಲ್ಲೆ ಮಾಡುವಾಗ ಪ್ರಾಣಕ್ಕೆ ಪ್ರಾಣ ಕೊಟ್ಟು ಕಾಪಾಡಿದ ಕಿಶೋರ್ ಕುಮಾರ್ ಪುತ್ತೂರು

- Advertisement -
- Advertisement -

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬೆಂಬಲಿಗರ ಹಲ್ಲೆಯಿಂದ ಸಿ.ಟಿ.ರವಿ ಸ್ವಲ್ಪದರಲ್ಲೇ ಬಚಾವ್ ಆಗಿದ್ದಾರೆ. ಇದಕ್ಕೆ ಕಾರಣ ದಕ್ಷಿಣ ಕನ್ನಡ ಜಿಲ್ಲೆಯ ಪರಿಷತ್ ನೂತನ ಸದಸ್ಯ ಕಿಶೋರ್ ಕುಮಾರ್ ಪುತ್ತೂರು.ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಸದನದಲ್ಲಿ ಕೆಟ್ಟ ಪದಗಳಿಂದ ನಿಂದಿಸಿದ ವಿಚಾರ ದೊಡ್ಡ ವಿವಾದ ಸೃಷ್ಟಿಸಿದೆ. ಸಿಟಿ ರವಿಯ ಹೇಳಿಕೆಯ ವಿರುದ್ಧ ಹೆಬ್ಬಾಳ್ಕರ್ ಬೆಂಬಲಿಗರು ಆಕ್ರೋಶ ಗೊಂಡಿದ್ದು, ಇದು ಸುವರ್ಣ ಸೌಧದಲ್ಲಿ ದೊಡ್ಡ ಹೈಡ್ರಾಮಕ್ಕೆ ಕಾರಣವಾಗಿತ್ತು. ಸಿಟಿ ರವಿ ಸುವರ್ಣ ಸೌಧದ ಹೊರಗೆ ಬರುತ್ತಾ ಇದ್ದಂತೆ ಹೆಬ್ಬಾಳ್ಕರ್ ಬೆಂಬಲಿಗರು ಅವರ ಮೇಲೆ ಮುಗಿಬಿದ್ದಿದ್ದಾರೆ. ಈ ವೇಳೆ ತಕ್ಷಣ ಹಲ್ಲೆಗೆ ಮುಂದಾದವರನ್ನು ತಡೆಯುವ ಮೂಲಕ ಕಿಶೋರ್ ಕುಮಾರ್ ಸಿಟಿ ರವಿ ಅವರನ್ನು ರಕ್ಷಣೆ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕಿಶೋರ್ ಕುಮಾರ್ ಬೊಟ್ಯಾಡಿ ಅವರ ಸಮಯಪ್ರಜ್ಞೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!