

ವಿಟ್ಲ: ಮಹತ್ತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆ ಜ.14 ರಿಂದ 22ವರೆಗೆ ನಡೆಯಲಿದೆ. ದಿನಾಂಕ: 14-1-2025ನೇ ಮಂಗಳವಾರ ಬೆಳಿಗ್ಗೆ 10:00ಕ್ಕೆ ಧ್ವಜಾರೋಹಣ ನಡೆದು ಬಳಿಕ ಸಂಜೆ 6:00ಕ್ಕೆ ಅರಸು ಮುಂಡಾಲ್ತಾಯ ದೈವದ ಭಂಡಾರ ಕ್ಷೇತ್ರಕ್ಕೆ ಆಗಮನವಾಗಿ ಬಳಿಕ ರಾತ್ರಿ 8:30ಕ್ಕೆ ಲಕ್ಷದೀಪೋತ್ಸವ ,ಉತ್ಸವ ಬಲಿ,ಕಟ್ಟೆ ಪೂಜೆಯ ಬಳಿಕ ಬಟ್ಟಲು ಕಾಣಿಕೆ ನಡೆಯಲಿದೆ.
ದಿನಾಂಕ: 15-1-2025ನೇ ಬುಧವಾರ ಸಂಜೆ 7:00ಕ್ಕೆ ನಿತ್ಯೋತ್ಸವ ನಡೆಯಲಿದೆ.
ದಿನಾಂಕ: 16-1-2025ನೇ ಗುರುವಾರ ಸಂಜೆ 7:00ಕ್ಕೆ ನಿತ್ಯೋತ್ಸವ ನಡೆಯಲಿದೆ.
ದಿನಾಂಕ: 17-1-2025ನೇ ಶುಕ್ರವಾರ ಸಂಜೆ 7:00ಕ್ಕೆ ನಿತ್ಯೋತ್ಸವ ನಡೆಯಲಿದೆ.
ದಿನಾಂಕ: 18-1-2025ನೇ ಶನಿವಾರ ಬಯ್ಯದ ಬಲಿ ಉತ್ಸವ ನಡೆಯಲಿದೆ. ಬೆಳಿಗ್ಗೆ 9:00ಕ್ಕೆ ಶ್ರೀ ಪಂಚಲಿಂಗೇಶ್ವರ ದೇವರ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ರುದ್ರಯಾಗ ನಡೆಯಲಿದೆ. ಬಳಿಕ ರಾತ್ರಿ 8:30ಕ್ಕೆ ಕೇಪುವಿನಿಂದ ಶ್ರೀ ಮಲರಾಯ ದೈವದ ಭಂಡಾರ ಬರುವುದು. ರಾತ್ರಿ 9:00ಕ್ಕೆ ಬಯ್ಯದ ಬಲಿ ಉತ್ಸವ ಪ್ರರಂಭವಾಗಲಿದೆ.
ದಿನಾಂಕ: 19-1-2025ನೇ ಆದಿತ್ಯವಾರ ನಡು ದೀಪೋತ್ಸವ- ಕೆರೆ ಆಯನ ನಡೆಯಲಿದೆ. ಬೆಳಿಗ್ಗೆ: 9:30ಕ್ಕೆ ದರ್ಶನ ಬಲಿ, ಬಟ್ಲು ಕಾಣಿಕೆ, ಪ್ರಸಾದ ವಿತರಣೆ ನಡೆದು ಬಳಿಕ 8:00 ನಡು ದೀಪೋತ್ಸವ ನಂತರ ತೆಪ್ಪೋತ್ಸವ ನಡೆಯಲಿದೆ.
ದಿನಾಂಕ: 20-1-2025ನೇ ಸೋಮವಾರ ಹೂತೇರು ಪ್ರಾತಃಕಾಲ ಗಂಟೆ 5:00 ಕ್ಕೆ ದರ್ಶನ ಬಲಿ,ಬಟ್ಲು ಕಾಣಿಕೆ,ಪ್ರಸಾದ ವಿತರಣೆ,ರಾತ್ರಿ 7:30 ಕ್ಕೆ ಉತ್ಸವದ ನಂತರ ಹೂತೇರು ನಡೆಯಲಿದೆ.
ದಿನಾಂಕ: 21-1-2025 ಮಂಗಳವಾರ ಬೆಳಿಗ್ಗೆ ಗಂಟೆ 9:30 ಕ್ಕೆ ದರ್ಶನ ಬಲಿ,ರಾಜಾಂಗಣದ ಬಟ್ಲುಕಾಣಿಕೆ, ಪ್ರಸಾದ ವಿತರಣೆ, ಸಂಜೆ ಗಂಟೆ 4:30 ಕ್ಕೆ ಕಡಂಬುವಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಕ್ಷೇತ್ರಕ್ಕೆ ಆಗಮನ ರಾತ್ರಿ ಗಂಟೆ 9:00ಕ್ಕೆ ಮಹಾರಥೋತ್ಸವ, ಬೀದಿ ಮೆರವಣಿಗೆ,ಶಯನೋತ್ಸವ ನಡೆಯಲಿದೆ.
ದಿನಾಂಕ 22-1-2025 ಬುಧವಾರ ಬೆಳಿಗ್ಗೆ ಗಂಟೆ 8:30ಕ್ಕೆ ಕವಟೋದ್ಘಾಟನೆ, ಮಹಾಪೂಜೆ,ಕಾಲಾವಧಿ ಬಟ್ಲು ಕಾಣಿಕೆ, ತುಲಾಭಾರ ಸೇವೆ, ರಾತ್ರಿ ಗಂಟೆ 7:30 ಕ್ಕೆ ಓಕುಳಿಕಟ್ಟೆಯಲ್ಲಿ ಕಟ್ಟೆಪೂಜೆಯ ನಂತರ ಶ್ರೀ ದೇವರಿಗೆ ಅಷ್ಟಾವಧಾನ ಸೇವೆ ನಂತರ ಅವಚ್ಛತ ಸ್ನಾನಕ್ಕೆ ಕೊಡಂಗಾಯಿಗೆ ಸವಾರಿ ಧ್ವಜಾವರೋಹಣ, ಸಂಪ್ರೋಕ್ಷಣೆ ಜರುಗಲಿದೆ.
ದಿನಾಂಕ: 24-01-2025 ನೇ ಶುಕ್ರವಾರ ಮಧ್ಯಾಹ್ನ ಗಂಟೆ 2:00 ಕ್ಕೆ ಅರಸು ಮುಂಡಾಲತ್ತಾಯ, ಮಲರಾಯ ದೈವ, ಕೊಡಮಣಿತ್ತಾಯ, ಪಿಲಿಚಾಮುಂಡಿ ದೈವಕ್ಕೆ ದೇವಸ್ಥಾನದ ಎದುರು ನೇಮೋತ್ಸವ ನಡೆಯಲಿದೆ.
ದಿನಾಂಕ: 25-01-2025 ನೇ ಶನಿವಾರ ಮಧ್ಯಾಹ್ನ 2:00 ಕ್ಕೆ ಅರಮನೆಯಲ್ಲಿ ಶ್ರೀ ಮಲರಾಯ ದೈವಕ್ಕೆ ನೇಮೋತ್ಸವ ಬಳಿಕ ಕೇಪುವಿಗೆ ಭಂಡಾರ ಹೊರಡುವುದು ನಡೆಯಲಿದೆ.








