Thursday, June 18, 2026
spot_imgspot_img
spot_imgspot_img

ಶಿಬರಿಕಲ್ಲು-ಮಾಡ: (ಮಾ.15-17) ಶ್ರೀ ಮಲರಾಯ ಮೂವರ್‌‌ ದೈವಂಗಳ ಕಾಲಾವಧಿ ನೇಮೋತ್ಸವ ಹಾಗೂ ಶ್ರೀ ಸತ್ಯನಾರಾಯಣ ಪೂಜೆ

- Advertisement -
- Advertisement -

ಶಿಬರಿಕಲ್ಲು-ಮಾಡ: ಶ್ರೀ ಮಲರಾಯ ಮೂವರ್‌‌ ದೈವಂಗಳು ಶಿಬರಿಕಲ್ಲು- ಮಾಡ ಶ್ರೀ ಮಲರಾಯ ಮೂವರ್‌‌ ದೈವಂಗಳ ಕಾಲಾವಧಿ ನೇಮೋತ್ಸವ ಹಾಗೂ ಶ್ರೀ ಸತ್ಯನಾರಾಯಣ ಪೂಜೆಯು ಮಾರ್ಚ್ 15-3-2025ನೇ ಶನಿವಾರದಿಂದ 17-3-2025ನೇ ಸೋಮವಾರದವರೆಗೆ ನಡೆಯಲಿದೆ.

ದಿನಾಂಕ: 15-3-2025ನೇ ಶನಿವಾರ ಸಂಜೆ 5:00ಕ್ಕೆ ಜೈನರಕೋಡಿಯಿಂದ ಭಂಡಾರ ಬಂದು, ಪರಿವಾರ ದೈವಗಳೀಗೆ ಬನದಲ್ಲಿ ಕಾಲಾವಧಿ ನೇಮೋತ್ಸವ ನಡೆಯಲಿದೆ.

ದಿನಾಂಕ:16-03-2025ನೇ ಆದಿತ್ಯವಾರ ಬೆಳಿಗ್ಗೆ9:00ಕ್ಕೆ ಮಲರಾಯ ಮೂವ‌ರ್ ದೈವಂಗಳಿಗೆ ತಂಬಿಲ ಸೇವೆ ನಡೆಯಲಿದೆ. ರಾತ್ರಿ ಶಿಬರಿಕಲ್ಲ ಮಾಡದಲ್ಲಿ ಮೂವರ್ ದೈವಂಗಳ ಕಾಲಾವಧಿ ನೇಮೋತ್ಸವ ನಡೆಯಲಿದೆ.

ದಿನಾಂಕ: 17-03-2025ನೇ ಸೋಮವಾರ ಬೆಳಿಗ್ಗೆ ಶ್ರೀ ಮಲರಾಯ ದೈವಕ್ಕೆ ಮತ್ತು ಪಿಲಿಚಾಮುಂಡಿ ದೈವಗಳಿಗೆ ಕಾಲಾವಧಿ ನೇಮೋತ್ಸವ ನಡೆದು ಮಧ್ಯಾಹ್ನ 1:00ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.

ದಿನಾಂಕ:16-03-2025ನೇ ಆದಿತ್ಯವಾರ ಶಿಬರಿ ಯುವಕ ಮಂಡಲ (ರಿ.) ಮಾಡತ್ತಡ್ಕ, ವಿಟ್ಲ ಮುಡ್ನೂರು ಇದರ ವತಿಯಿಂದ ಸಂಜೆ 5:30ರಿಂದ ಮಾಡತ್ತಡ್ಕ ಶಾಲಾ ವಠಾರದಲ್ಲಿ ಸಾಮೂಹಿಕ ಸತ್ಯನನಾರಾಯಣ ಪೂಜೆ ಸಾಂಸ್ಕೃತಿಕ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ7:30ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆದು ಬಳಿಕ 8:30ರಿಂದ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದು ಅನ್ನಸಂತರ್ಪಣೆ ನಡೆಯಲಿದೆ.ರಾತ್ರಿ 9:00ರಿಂದ ಮಾಡತ್ತಡ್ಕ ಶಾಲಾ ವಠಾರದಲ್ಲಿ ಕದಳಿ ಕಲಾ ಕೇಂದ್ರ ಇವರಿಂದ “ಶ್ರೀ ದೇವಿ ಕಂದಬ ಕೌಶಿಕೆ” ಎಂಬ ಯಕ್ಷಗಾನ ಕಾರ್ಯಕದೆಮ ನಡೆಯಲಿದೆ.

- Advertisement -

Related news

error: Content is protected !!