



ಪ್ರಪಂಚದಾದ್ಯಂತ ಏಪ್ರಿಲ್ 18 ಶುಭ ಶುಕ್ರವಾರ ಕ್ರೈಸ್ತ ಭಕ್ತಾದಿಗಳಿಗೆ ಒಂದು ಪವಿತ್ರ ಮತ್ತು ಮಹತ್ವದ ದಿನ. ಏಸು ಕ್ರಿಸ್ತನು ಮನುಜ ಕುಲವನ್ನು ಪಾಪದಿಂದ ವಿಮುಕ್ತಗೊಳಿಸಲು ತನ್ನನ್ನು ತಾನೆ ಶಿಲುಬೆಗೆ ಏರಿದ ದಿನವಾಗಿದೆ.
ಚರ್ಚ್ ಗಳಲ್ಲಿ ಶಿಲುಬೆ ಹಾದಿ, ವಿಶೇಷ ಪ್ರಾರ್ಥನೆ, ಶಿಲುಬೆಯ ಆರಾಧನೆ ನಡೆಸಲಾಗುತ್ತದೆ. ಈ ದಿನ ಕ್ರೈಸ್ತರು ಉಪವಾಸ ವ್ರತ ಆಚರಿಸುತ್ತಾರೆ. ಇಂದು ಪವಿತ್ರ ಸಭೆಯಲ್ಲಿ ಬಲಿಪೂಜೆಗಳು ನಡೆಯುತ್ತಿಲ್ಲ.ಹಾಗೇನೇ ಈ ದಿನ ಪುತ್ತೂರು ಮಾಯ್ ದೆ ದೇವುಸ್ ಚರ್ಚಿನಲ್ಲಿ ಯೇಸುವಿನ ಕಷ್ಟ ಮರಣದ ಕಥಾಪ್ರಸಂಗವನ್ನು ಅತೀ ವಂದನೀಯ ಲಾರೆನ್ಸ್ ಮಸ್ಕರೇನಸ್, ವಂದನೀಯ ಲೋಹಿತ್ ಅಜಯ್ ಮಸ್ಕರೇನಸ್ , ವಂದನೀಯ ಅಶೋಕ್ ರಾಯನ್ ಕ್ರಾಸ್ತಾ ರವರು ರಾಗಭರಿತವಾಗಿ ಓದಿದರು.ವಂದನೀಯ ಲೋಹಿತ್ ಅಜಯ್ ಮಸ್ಕರೇನಸ್ ರವರು ತಮ್ಮ ಪ್ರವಚನದಲ್ಲಿ ಶಿಲುಬೆಯ ಮಹತ್ವವನ್ನು ತಿಳಿಸುತ್ತಾ ಯೇಸು ಸ್ವಾಮಿಯ ಶಿಲಬೆಯ ಮರಣ ನಮಗೆ ಭರವಸೆಯ ಸಂಕೇತ.

ಯೇಸು ಸ್ವಾಮಿ ತನಗೆ ಜನರು ತಿರಸ್ಕಾರಿಸಿದರು, ಅವರ ಜೀವನ ಕಷ್ಟಕರವಾದರು, ಶಿಲುಬೆ ಹೊತ್ತು ನಡೆದಾಗ ಬಿದ್ದಾರು ಎದ್ದು ಮುನ್ನಡೆಯುತ್ತಾರೆ. ಯೇಸು ನಿರಾಶೆಗೊಳ್ಳುದ್ದಿಲ್ಲ ತಿರಾಸ್ಕಾರ- ಕಷ್ಟವನ್ನು ಮೆಟ್ಟಿ ನಿತ್ತು ತನ್ನ ಗುರಿ ತಲುಪುತ್ತಾರೆ. ನಮಗೆ ತಿರಸ್ಕಾರ ಲಭಿಸಿದಾಗ, ಕಷ್ಟ ಬಂದಾಗ ಹಾಗೂ ಬಿದ್ದಾಗ ಎದ್ದು ಮುನ್ನಡೆಯಲು ಯೇಸು ನಮ್ಮ ಭರವಸೆಯ ಮೂಲವಾಗಿದ್ದಾರೆ ಎಂದು ನುಡಿದರು.ವಂದನೀಯ ಮ್ಯಾಕ್ಸಿಮ್ ಡಿಸೋಜಾ ಮತ್ತು ವಂದನೀಯ ರೂಪೇಶ್ ತಾವ್ರೋ ರವರು ವಿಶೇಷ ಪ್ರಾರ್ಥನೆ ಮೂಲಕ ಇಡೀ ಪ್ರಪಂಚದಾದ್ಯಂತ ಕ್ಯಾಥೋಲಿಕ್ ಸಮುದಾಯವನ್ನು ನಡೆಸುವ ಪೋಪ್ ಫ್ರಾನ್ಸಿಸ್, ಬಿಷಪ್, ಹಾಗೂ ಎಲ್ಲಾ ಧಾರ್ಮಿಕ ಗುರುಗಳಿಗೆ, ಪ್ರಪಂಚದಾದ್ಯಂತ ದೇಶಗಳನ್ನು ನಡೆಸುವ ಮುಖಂಡರುಗಳಿಗೆ, ಯೇಸು ಕ್ರಿಸ್ತರನ್ನು ನಂಬಿ ಪೂಜಿಸುವ, ನಂಬಿಕೆ ಇಲ್ಲದ, ಪೂಜಿಸಿದ ಮಾನವರ ಒಳಿತಿಗೆ, ಇಡೀ ಮನುಜ ಕುಲಕ್ಕೆ ಒಳ್ಳೆಯದಾಗಲಿ, ಒಳ್ಳೆಯದನ್ನು ಮಾಡಲು ಆ ದೇವರು ಆಶೀರ್ವದಿಸಲಿ ಎಂದು ಆಶಿಸಿದರು.ನಂತರ ಎಲ್ಲಾ ಭಕ್ತಾದಿಗಳಿಗೆ ಶಿಲುಬೆಯನ್ನು ಮುಟ್ಟಿ ನಮಸ್ಕರಿಸಲು ಅನುವು ಮಾಡಿ ಕೊಡಲಾಯಿತು. ಈ ಸಮಯದಲ್ಲಿ ಒಟ್ಟು ಗೂಡಿದ ಕಾಣಿಕೆ ಹಣವನ್ನು ರೋಗಿಗಳಿಗೆ ಮತ್ತು ಒಂದು ಹೊತ್ತು ಆಹಾರ ವಿಲ್ಲದ ಬಡಜನರಿಗೆ ಇರಿಸಲಾಯಿತು. ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡ ಭಕ್ತಾದಿಗಳು ಯೇಸುವಿನ ಪಾರ್ಥಿವ ಶರೀರವಿರುವ ತೊಟ್ಟಿಲು ಮತ್ತು ದುಃಖ ತಪ್ತ ಮೇರಿ ಮಾತೆಯ ವಿಗ್ರಹವನ್ನು ಚರ್ಚ್ ವಠಾರದಿಂದ M.T ರಸ್ತೆಯ ಮೂಲಕ ಕೋರ್ಟ್ ರಸ್ತೆಯಾಗಿ ಚರ್ಚ್ ವಠಾರಕ್ಕೆ ಮೆರವಣಿಗೆ ಮೂಲಕ ತರಲಾಯಿತು. ತದನಂತರ ಭಕ್ತಾದಿಗಳಿಗೆ ವೀಕ್ಷಣೆಗೆ ಅನುವು ಮಾಡಿ ಕೊಟ್ಟು ತೊಟ್ಟಿಲಿಗೆ ಹಾಕಿದ ಹೂಗಳನ್ನು ಪ್ರತಿಯೊಬ್ಬ ಕ್ರೈಸ್ತ ಬಾಂಧವರು ಮನೆಗೆ ತೆಗೆದುಕೊಂಡು ಹೋಗಿ ಯೇಸಕ್ರಿಸ್ತರ ಕೃಪೆಗೆ ಪಾತ್ರರಾದರು.ಚರ್ಚ್ ಪಾಲನಾ ಮಂಡಳಿಯ ಸದಸ್ಯರು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಮೆರವಣಿಗೆ ಹಾಗೂ ಧಾರ್ಮಿಕ ವಿಧಿವಿಧಾನಗಳು ಸುಸೂತ್ರವಾಗಿ ನೆರವೇರಲು ಸಹಕರಿಸಿದರು.ಇದೇ ದಿವಸ ಬೆಳಿಗ್ಗೆ 7.15ರಿಂದ 8.45ರ ತನಕ ಶಿಲುಬೆ ಹಾದಿಯನ್ನು ಚರ್ಚ್ ವಠಾರದಲ್ಲಿ ಹಮ್ಮಿಕೊಳ್ಳಲಾಯಿತು. ಎಲ್ಲಾ ಕ್ರೈಸ್ತ ಭಕ್ತಾದಿಗಳು ಯೇಸುವಿನ ಕಷ್ಟ ಹಾದಿಯನ್ನು ಮೆಲುಕು ಹಾಕಿ ಧನ್ಯರಾದರು.








