Tuesday, June 23, 2026
spot_imgspot_img
spot_imgspot_img

ನಟಿಯ ಅಪಹರಣ, ಹಲ್ಲೆ ಪ್ರಕರಣ – ಶಾಸಕರ ಕಚೇರಿ ಸಿಬ್ಬಂದಿ ಸೆರೆ

- Advertisement -
- Advertisement -

ತಿರುವನಂತಪುರಂ: ಕೇರಳದಲ್ಲಿ ಕೋಲಾಹಲ ಸೃಷ್ಟಿಸಿದ್ದ ನಟಿಯೊಬ್ಬಳ ಅಪಹರಣ ಮತ್ತು ಹಲ್ಲೆ ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರದೀಪ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ.

ಆರೋಪಿ ಪ್ರದೀಪ್ ಕುಮಾರ್ ಶಾಸಕ ಹಾಗೂ ನಟ ಗಣೇಶ್ ಕುಮಾರ್ ಅವರ ಕಚೇರಿ ಸಿಬ್ಬಂದಿಯಾಗಿದ್ದಾನೆ. ಪ್ರಕರಣದ ಪ್ರಮುಖ ಸಾಕ್ಷಿದಾರರಾಗಿರುವ ಕಾಸರಗೋಡಿನ ಬೇಕಲ ನಿವಾಸಿಯೊಬ್ಬರಿಗೆ ಪ್ರದೀಪ್ ಕುಮಾರ್ ಬೆದರಿಕೆ ಒಡ್ಡಿದ್ದ ಎಂದು ಆರೋಪಿಸಲಾಗಿದೆ.

ಪ್ರದೀಪ್ ಕುಮಾರ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ಸೋಮವಾರ ತಳ್ಳಿಹಾಕಿತ್ತು. ಇಂದು ಮುಂಜಾನೆ ಪ್ರದೀಪ್ ಕುಮಾರ್ ಅವರನ್ನು ಬಂಧಿಸಲಾಗಿದೆ. ನಟಿಯ ಹೆಸರು ಪ್ರಕಟಿಸದಂತೆ ನ್ಯಾಯಾಲಯ ನಿರ್ಬಂಧ ಹೇರಿದೆ.

- Advertisement -

Related news

error: Content is protected !!