Monday, September 28, 2026
spot_imgspot_img
spot_imgspot_img

ಬೆಳ್ಳಾರೆ: ಕುದ್ಮಾರ್ ಗ್ರಾಮಾದ ಕೂರತ್ ಮಸೀದಿ ಯಲ್ಲಿ ಊರುಸ್ ಕಾರ್ಯಕ್ರಮದಲ್ಲಿ 06 ಜನರ ಆರೋಗ್ಯದಲ್ಲಿ ಏರುಪೇರು- ಸುಳ್ಳು ವದಂತಿ ಹಬ್ಬಿಸದಂತೆ ಸೂಚನೆ

- Advertisement -
- Advertisement -

ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಫ್ತಿಯ ಕುದ್ಮಾರ್ ಗ್ರಾಮಾದ ಕೂರತ್ ಮಸೀದಿ ಯಲ್ಲಿ ದಿನಾಂಕ 29.06.2025 ರಂದು ಉರುಸ್ ಕಾರ್ಯಕ್ರಮ ನಡೆದಿದ್ದು, ಈ ವೇಳೆ ಕಾರ್ಯಕ್ರಮಕ್ಕೆ ಬೇರೆ ಬೇರೆ ಸ್ಥಳಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿರುತ್ತಾರೆ.

ಜನದಟ್ಟಣೆಯಲ್ಲಿ 06 ಜನರು ದೈಹಿಕವಾಗಿ ನಿತ್ರಾಣಗೊಂಡಿದ್ದು, ಅವರುಗಳನ್ನು ಸ್ಥಳದಲ್ಲಿದ್ದ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಚರಿಸಲಾಗಿ ಇಬ್ಬರ ಆರೋಗ್ಯ ಸ್ಥಳದಲ್ಲೇ ಸುಧಾರಿಸಿರುತ್ತದೆ. ಉಳಿದ 04 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಅವರು ಆಸ್ಪತ್ರೆಯಲ್ಲಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದು ತೆರಳಿದ್ದಾರೆ. ಉರುಸ್ ಕಾರ್ಯಕ್ರಮ ಮುಕ್ತಾಯಗೊಂಡಿರುತ್ತದೆ. ಸಾರ್ವಜನಿಕರು ಯಾವುದೇ ಸುಳ್ಳು ವದಂತಿಗಳು ಹರಡದಂತೆ ಹಾಗೂ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದಾಗಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

- Advertisement -

Related news

error: Content is protected !!