Tuesday, June 23, 2026
spot_imgspot_img
spot_imgspot_img

ವಿಟ್ಲ: ಬಾಲಗೋಕುಲ ಕ್ಷೇತ್ರ ವಿಟ್ಲ ಸಮಿತಿಯಿಂದ ನಡೆದ 18 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ವಿಶ್ವ ದಾಖಲೆ ಮೆರೆದ ರೆಮೋನಾ ಪಿರೇರಾರವರಿಗೆ ಗೌರವಾರ್ಪಣೆ

- Advertisement -
- Advertisement -

ವಿಟ್ಲ: ಬಾಲಗೋಕುಲ ಕ್ಷೇತ್ರ ವಿಟ್ಲ ಸಮಿತಿಯಿಂದ 18 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಇಂದು ನಡೆಯಿತು. ವಿಠಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಾತಪಸ್ವಿ ಸಾಂಸ್ಕೃತಿಕ ತಂಡದಿಂದ ಅಮೋಘ ಮನರಂಜನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ನಿರಂತರ 170 ಗಂಟೆ ಭರತನಾಟ್ಯ ಮಾಡಿ ವಿಶ್ವ ದಾಖಲೆ ಮೆರೆದ ಮಂಗಳೂರಿನ ಕುವರಿ ರೆಮೋನಾ ಪಿರೇರಾ ಇವರ ಅದ್ಭುತ ನೃತ್ಯ ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಬಾಲಗೋಕುಲ ಕ್ಷೇತ್ರ ವಿಟ್ಲ ಸಮಿತಿಯಿಂದ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ವಿಶ್ವ ದಾಖಲೆ ಮೆರೆದ ರೆಮೋನಾ ಪಿರೇರಾರವರನ್ನು ಸನ್ಮಾನಿಸಿ ಗೌರವಿಸಲಾಯಿತು.

- Advertisement -

Related news

error: Content is protected !!