- Advertisement -
- Advertisement -



ವಿಟ್ಲ: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವೇದಮೂರ್ತಿ ಅನಂತನಾರಾಯಣ ಭಟ್ ಪರಕ್ಕಜೆರವರ ಮಾರ್ಗದರ್ಶನದಲ್ಲಿ ’ಸಾಮೂಹಿಕ ಮೃತ್ಯುಂಜಯ ಹೋಮ’ ಸೆ. 16-09-2025ನೇ ಮಂಗಳವಾರ ನಡೆಯಲಿದೆ.
ಬೆಳಗ್ಗೆ 8.30ಕ್ಕೆ ಪ್ರಾರ್ಥನೆ ನಡೆದು 9.00ಕ್ಕೆ ಮೃತ್ಯುಂಜಯ ಹೋಮ ಆರಂಭವಾಗಲಿದೆ. ಮಧ್ಯಾಹ್ನ 12.00ಕ್ಕೆ ಪೂರ್ಣಾಹುತಿ ಬಳಿಕ 12.45ಕ್ಕೆ ಮಹಾಪೂಜೆ, ಸಂಕ್ರಮಣದ ವಿಶೇಷ ಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಪೂಜೆ ಮಾಡಿಸುವವರಿಗೆ ‘ಸಾಮೂಹಿಕ ಸಂಕಲ್ಪ ಸಹಿತ ಮೃತ್ಯುಂಜಯ ಜಪ’ ಮಾಡುವ ಅವಕಾಶ ಇದೆ.
ವಿಶೇಷ ಸೂಚನೆ:
*ಪೂಜೆ ಒಂದರ – ರೂ. 251/-
*ಅನ್ನದಾನಕ್ಕೆ ಅಕ್ಕಿ, ತರಕಾರಿ, ತೆಂಗಿನಕಾಯಿ, ಫಲವಸ್ತು, ಹೂ ಇತರ ವಸ್ತುಗಳನ್ನು ಕೃತಜ್ಞತಾಪೂರ್ವಕ ಸ್ವೀಕರಿಸಲಾಗುವುದು.
- Advertisement -








