



ವಿಟ್ಲ: ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪನಿ ವಿಟ್ಲ ಇದರ ವಾರ್ಷಿಕ ಮಹಾಸಭೆ ಹಾಗೂ ನೂತನ ಗೋದಾಮು ಕಟ್ಟಡ ಉದ್ಘಾಟನಾ ಕಾರ್ಯಕ್ರಮ ನೆಲ್ಲಿಗುಡ್ಡೆಯಲ್ಲಿರುವ ಪಿಂಗಾರ ಕಛೇರಿ ಆವರಣದಲ್ಲಿ ನಡೆಯಿತು.
ಪಿಂಗಾರ ಕಂಪನಿಯ ಅಧ್ಯಕ್ಷ ರಾಮಕಿಶೋರ್ ಸಭಾಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉದ್ಘಾಟಿಸಿ ” ದೇಶಾದ್ಯಂತ ರೈತ ಉತ್ಪಾದಕ ಕಂಪನಿಯನ್ನು ಉತ್ತೇಜಿಸಲು ಸರ್ಕಾರ ಅನುದಾನ ನೀಡುತ್ತಿದೆ. ನಮ್ಮಲ್ಲಿ ಬೇಳೆಯುವ ಬೆಳೆಗಳಿಗೆ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಿ ರೈತರು ಲಾಭ ಗಳಿಸಬೇಕು” ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತಾಡಿದ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಮಂಜುನಾಥ ಡಿ ಪಿಂಗಾರ ಕಂಪನಿಯು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿ ರಾಜ್ಯದಲ್ಲಿ ಮಾದರಿ ರೈತ ಉತ್ಪಾದಕ ಕಂಪನಿಯಾಗಿದೆ ಎಂದರು. ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ಗೌಡ ನಾಯ್ತೊಟ್ಟು ಉಪಸ್ಥಿತರಿದ್ದರು.
ನಿರ್ದೇಶಕ ಜಯರಾಮ ರೈ ಸ್ವಾಗತಿಸಿದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರದೀಪ್ ಎಸ್ ವರದಿ ವಾಚಿಸಿದರು. ನಿರ್ದೇಶಕಿ ಪುಷ್ಪಾ ಎಸ್ ಕಾಮತ್ ವಂದಿಸಿದರು. ಸುಧೀರ್ ನಾಯ್ಕ ನಿರೂಪಿಸಿದರು.








