Sunday, July 19, 2026
spot_imgspot_img
spot_imgspot_img

ಕಡಂಬು: (ನ.29) ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಸಾನಿಧ್ಯ ವೃದ್ಧಿಗಾಗಿ ಶ್ರೀ ವಿಷ್ಣುಯಾಗ, ಪವಮಾನ ಅಭಿಷೇಕ ಮತ್ತು ಮುಷ್ಠಿ ಕಾಣಿಕೆ ಸಮರ್ಪಣೆ

- Advertisement -
- Advertisement -

ಕಡಂಬು: ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವೇ| ಮೂ| ಬ್ರಹ್ಮಶ್ರೀ ಕುಂಟುಕುಡೇಲು ಶ್ರೀ ರಘರಾಮ ತಂತ್ರಿಗಳವರ ನೇತೃತ್ವದಲ್ಲಿ ವಿಟ್ಲ ಪಡ್ನೂರು ಗ್ರಾಮದ ಏಕೈಕ ಗ್ರಾಮ ದೇವರಾದ ಕಡಂಬು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಸಾನಿಧ್ಯ ವೃದ್ಧಿಗಾಗಿ ಶ್ರೀ ವಿಷ್ಣುಯಾಗ, ಪವಮಾನ ಅಭಿಷೇಕ ಮತ್ತು ಮುಷ್ಠಿ ಕಾಣಿಕೆ ಸಮರ್ಪಣೆ ಕಾರ್ಯಕ್ರಮವು ನ. 29-11-2025ನೇ ಶನಿವಾರ 8:30 ನಡೆಯಲಿದೆ.

ಬೆಳಿಗ್ಗೆ 8.30ರಿಂದ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಪವಮಾನ ಅಭಿಷೇಕ, ಶ್ರೀ ವಿಷ್ಣುಯಾಗ ನಡೆಯಲಿದೆ. ಬಳಿಕ 11.45ರಿಂದ ಶ್ರೀ ಯಾಗದ ಪೂರ್ಣಾಹುತಿ, ಶ್ರೀ ವಿಷ್ಣುಯಾಗದ ಕಲಶಾಭಿಷೇಕ, ಸಾಮೂಹಿಕ ಪ್ರಾರ್ಥನೆ, ಮುಷ್ಠಿ ಕಾಣಿಕೆ ಸಮರ್ಪಣೆ ನಡೆಯಲಿದೆ. ಮಧ್ಯಾಹ್ನ 12.45ಕ್ಕೆ ಸರ್ವಾಲಂಕಾರ, ಮಹಾಪೂಜೆ, ಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಲಿದೆ.

ಸೇವೆಯ ವಿವರ : ಶ್ರೀ ವಿಷ್ಣುಯಾಗ : 501/-

ವಿಶೇಷ ಸೂಚನೆ:

  • ಗ್ರಾಮದ ಪ್ರತಿಯೊಂದು ಮನೆಯಿಂದಲೂ ಸೇವೆ ಮಾಡಿಸಿ ಪ್ರಸಾದ ಸ್ವೀಕರಿಸಬೇಕಾಗಿ ವಿನಂತಿ.
  • ಭಕ್ತಾದಿಗಳಿಂದ ಬಾಳೆಎಲೆ, ತರಕಾರಿ, ತೆಂಗಿನಕಾಯಿ, ಬಾಳೆಗೊನೆ, ಹೂವುಗಳು ಇತ್ಯಾದಿಗಳನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುವುದು.
- Advertisement -

Related news

error: Content is protected !!