Sunday, July 19, 2026
spot_imgspot_img
spot_imgspot_img

ವಿಟ್ಲ: ಸ್ವಸ್ತಿಕ್ ಫ್ರೆಂಡ್ಸ್ (ರಿ.) ವಿಟ್ಲ ಸಾರಥ್ಯದಲ್ಲಿ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟ ”ಸ್ವಸ್ತಿಕ್ ಟ್ರೋಪಿ 2025”

- Advertisement -
- Advertisement -

ಉದ್ಘಾಟನಾ ಸಮಾರಂಭ- ಸನ್ಮಾನ ಕಾರ್ಯಕ್ರಮ- ಸಮಾರೋಪ ಸಮಾರಂಭ

ವಿಟ್ಲ: ಸ್ವಸ್ತಿಕ್ ಫ್ರೆಂಡ್ಸ್ (ರಿ.) ವಿಟ್ಲ ಸಾರಥ್ಯದಲ್ಲಿ ಬಂಟ್ವಾಳ ತಾಲೂಕು, ಅಮೆಚೂರ್ ವಾಲಿಬಾಲ್ ಅಸೋಸಿಯೇಷನ್ ಇದರ ಸಹಯೋಗದೊಂದಿಗೆ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟ ಸ್ವಸ್ತಿಕ್ ಟ್ರೋಪಿ 2025 ನವೆಂಬರ್ 23 ರಂದು ವಿಠಲ ಪದವಿ ಪೂರ್ವ ಕಾಲೇಜು ವಿಟ್ಲ ಇಲ್ಲಿ ನಡೆಯಿತು.

ಉದ್ಘಾಟನಾ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಭಟ್, ಗೋಕುಲ್ ದಾಸ್ ಶೆಣೈ, ಜಗನ್ನಾಥ್ ಕಾಸರಗೋಡು, ಸ್ವಸ್ತಿಕ್ ಫ್ರೆಂಡ್ಸ್ ಅಧ್ಯಕ್ಷರು ತಾರನಾಥ್ ನೆಕ್ಕರೆ ಕಾಡು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಒಟ್ಟು 16 ತಂಡಗಳು ಪಂದ್ಯಾಟದಲ್ಲಿ ಭಾಗಿಯಾಗಿತ್ತು. ಈ ಪೈಕಿ ದುರ್ಗಾಂಬಾ ರೋಡ್ ಲೈನ್ಸ್ ತಂಡ ಪ್ರಥಮ ಸ್ಥಾನ ಪಡೆದು 10,000/-ಮತ್ತು ಸ್ವಸ್ತಿಕ್ ಟ್ರೋಫಿಯೊಂದಿಗೆ ವಿನ್ನರ್‌ ಆಗಿ ಮಿಂಚಿದರು. ದ್ವಿತೀಯ ಸ್ಥಾನ ಪಂಚಶ್ರೀ -7,000/-ಮತ್ತು ಸ್ವಸ್ತಿಕ್ ಟ್ರೋಫಿ , ತೃತೀಯ ಸ್ಥಾನ ಅಕ್ಷರ ಟ್ಯುಟೋರಿಯಲ್ 4,000/-ಮತ್ತು ಸ್ವಸ್ತಿಕ್ ಟ್ರೋಫಿ ಹಾಗೂ ಚತುರ್ಥ ಸ್ಥಾನ ವಿ ಎಫ್ ಸಿ ವಿಟ್ಲ -4,000/-ಮತ್ತು ಸ್ವಸ್ತಿಕ್ ಟ್ರೋಫಿ ತಂಡ ಪಡೆದುಕೊಂಡಿದ್ದಾರೆ.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ರಮೇಶ್ ವರಪ್ಪಾದೆ, ರವಿಪ್ರಕಾಶ್ , ಜಯರಾಮ್ ರೈ ವಕೀಲರು, ಅಭಿಲಾಶ್ ಶಿಕ್ಷಕರು ವಿಠಲ ಪದವಿ ಪೂರ್ವ ಕಾಲೇಜ್ ವಿಟ್ಲ, ಅರುಣ್ ವಿಟ್ಲ. ಹರೀಶ್ ಸಿಎಚ್, ಮೋನಪ್ಪ ಗೌಡ ಶಿವಾಜಿನಗರ ಹಾಗೂ ಸ್ವಸ್ತಿಕ್ ಫ್ರೆಂಡ್ಸ್ ಅಧ್ಯಕ್ಷರು ತಾರಾನಾಥ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕ್ರೀಡಾಸಾಧಕರಾದ ಸಿಂಚನ ಕೆ, ಕೀರ್ತೇಶ್‌, ಚಿರಾಗ್‌, ದೀಕ್ಷಿತ್‌ ಶೆಟ್ಟಿ, ಇಶಾನ್‌ ಕಾರ್ಯಪ್ಪ ಸೇ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ದಿವಾಕರ್ ಉಪ್ಪಳ ಕಾರ್ಯಕ್ರಮ ನಿರೂಪಿಸಿದರು.

”ಸ್ವಸ್ತಿಕ್ ಟ್ರೋಪಿ 2025 ” ಕಾರ್ಯಕ್ರಮದ ನಿಮಿತ್ತ ಲಕ್ಕ್‌ಡಿಪ್‌ ಕೂಪನ್‌ ನೀಡಲಾಗಿತ್ತು. ಇದರ ಫಲಿತಾಂಶ ಹೀಗಿದೆ..!


ಪ್ರಥಮ ಬಹುಮಾನ ವಿಜೇತ ಲಕ್ಕ್‌ಡಿಪ್‌ ಕೂಪನ್‌ ಸಂಖ್ಯೆ = 356

ಆಕರ್ಷಕ ಬಹುಮಾನ ವಿಜೇತ ಲಕ್ಕ್‌ಡಿಪ್‌ ಕೂಪನ್‌ ಸಂಖ್ಯೆ
828
669
483

- Advertisement -

Related news

error: Content is protected !!