Sunday, July 19, 2026
spot_imgspot_img
spot_imgspot_img

ಜ್ಞಾನಜ್ಯೋತಿ ತಾಂತ್ರಿಕ ಶಿಕ್ಷಣ ಕೇಂದ್ರದ ವಾರ್ಷಿಕ ಕ್ರೀಡಾಕೂಟ 2025–26

- Advertisement -
- Advertisement -

ಪುತ್ತೂರು ಬೊಳುವಾರಿನಲ್ಲಿ ಕಳೆದ ಹಲವಾರು ವರ್ಷಗಳಿಂದ ತಾಂತ್ರಿಕ ತರಬೇತಿಯನ್ನು ನೀಡಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುತ್ತಿರುವ ಜ್ಞಾನಜ್ಯೋತಿ ತಾಂತ್ರಿಕ ಶಿಕ್ಷಣ ಕೇಂದ್ರದ 2025–26ನೇ ಸಾಲಿನ ವಾರ್ಷಿಕ ಕ್ರೀಡಾಕೂಟವು ಫೆಬ್ರವರಿ 9, 2026ರ ಸೋಮವಾರದಂದು ನೆಹರು ನಗರದ ಕಾರ್ಜಾಲು ಮೈದಾನದಲ್ಲಿ ಜರಗಿತು.


ಕಾರ್ಯಕ್ರಮವನ್ನು ಕಾರ್ಜಾಲು ಧೂಮಾವತಿ ದೈವಸ್ಥಾನದ ಅಧ್ಯಕ್ಷರಾದ ಅಜಿತ್ ಕುಮಾರ್ ಜೈನ್ ಕಲ್ಲೇಗ ರವರು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.


ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳಿಗೆ ವಾಲಿಬಾಲ್, ಕಬಡ್ಡಿ, ಹಗ್ಗಜಗ್ಗಾಟ, ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು. ಕ್ರೀಡಾಕೂಟವನ್ನು ದೈಹಿಕ ಶಿಕ್ಷಕರಾದ ಸಂತೋಷ್, ಪ್ರದೀಪ್, ನವೀನ್ ಹಾಗೂ ನಿತೇಶ್ ರವರು ಯಶಸ್ವಿಯಾಗಿ ನಡೆಸಿಕೊಟ್ಟರು.
ಸಂಜೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪುತ್ತೂರು ಗೃಹ ನಿರ್ಮಾಣ ಸಹಕಾರಿ ಬ್ಯಾಂಕಿನ ಕಾರ್ಯನಿರ್ವಹಣಾಧಿಕಾರಿಗಳಾದ ಪುರುಷೋತ್ತಮ್ ಶೆಟ್ಟಿ ಕೊಂಬಿಲ ಹಾಗೂ ನೆಟ್ಲ ನಿಟಿಲಾಕ್ಷ ಸದಾಶಿವ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ನವೀನ್ ಗಟ್ಟಿ ಉಪಸ್ಥಿತರಿದ್ದರು.
ಜ್ಞಾನಜ್ಯೋತಿ ತಾಂತ್ರಿಕ ಶಿಕ್ಷಣ ಕೇಂದ್ರದ ಪ್ರಾಂಶುಪಾಲರಾದ ಮಹೇಶ್ ಶೆಟ್ಟಿ ಸ್ವಾಗತಿಸಿ, ಜ್ಞಾನಜ್ಯೋತಿ ತಾಂತ್ರಿಕ ಶಿಕ್ಷಣ ಕೇಂದ್ರದ ಪುತ್ತೂರು ಶಾಖೆಯ ಮುಖ್ಯಸ್ಥ ಹರ್ಷಿತ್ ಹನುಮಜೆ ವಂದಿಸಿದರು.

- Advertisement -

Related news

error: Content is protected !!