


ಕ್ರೀಡೆಯಿಂದ ಶಾರೀರಿಕ ಮಾನಸಿಕ ಆರೋಗ್ಯ ಸಮತೋಲನ: ಉದ್ಯಮಿ ದಿವಾಕರ ದಾಸ್ ನೇರ್ಲಾಜೆ
ವಿಟ್ಲ: ಶಾರೀರಿಕ ಮಾನಸಿಕ ಆರೋಗ್ಯ ಸಮತೋಲನದ ಜತೆ ಸೌಹಾರ್ದವನ್ನು ಕ್ರೀಡೆಗಳನ್ನು ಬೆಸೆಯುತ್ತವೆ. ವಿದ್ಯಾರ್ಥಿಗಳು ಆಟದ ಜತೆ ಪಾಠಗಳಲ್ಲಿ ಕೂಡ ತೊಡಗಿಸಿಕೊಂಡು ಸಮಾಜದಲ್ಲಿ ಎತ್ತರಕ್ಕೆ ಏರಬೇಕು ಎಂದು ಮೈಸೂರು ಎಸ್ ಎಲ್ ವಿ. ಬುಕ್ಸ್ ಇಂಡಿಯಾ ದ ವ್ಯವಸ್ಥಾಪಕ ನಿರ್ದೇಶಕ ,ಉದ್ಯಮಿ ದಿವಾಕರ ದಾಸ್ ನೇರ್ಲಾಜೆ ಹೇಳಿದರು.

ಅವರು ಗುರುವಾರ ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್ ನ ವಾರ್ಷಿಕ ಕ್ರೀಡೋತ್ಸವವನ್ನು ಉದ್ಯಮಿ ದಿವಾಕರ ದಾಸ್ ನೇರ್ಲಾಜೆ ಉದ್ಘಾಟಿಸಿ ಮಾತನಾಡಿದರು. ತನ್ನ ಹುಟ್ಟೂರು ತೀರಾ ಗ್ರಾಮೀಣ ಪ್ರದೇಶವಾದ ಕಂಬಳಬೆಟ್ಟಿನಲ್ಲಿ ಶಿಕ್ಷಣ ಸಂಸ್ಥೆ ಹುಟ್ಟು ಹಾಕಿ ಬೆಳೆಸುತ್ತಿರುವ ಡಾ ವಿ.ಕೆ. ಅಬ್ದುಲ್ ಬಶೀರ್ ಅವರ ಸಾಹಸವನ್ನು ಅವರು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜನಪ್ರಿಯ ಫೌಂಡೇಶನ್ ಚೆಯರ್ ಮ್ಯಾನ್ ಡಾ.ವಿ.ಕೆ. ಅಬ್ದುಲ್ ಬಶೀರ್ ಆರೋಗ್ಯ ಮತ್ತು ಶಿಕ್ಷಣ ಇಂದಿನ ಅಗತ್ಯ. ಇದು ಗ್ರಾಮೀಣ ಭಾಗದ ಜನರಿಗೆ ಸಿಕ್ಕಿದಾಗ ಮಾತ್ರ ಊರು ಮತ್ತು ದೇಶದ ಏಳಿಗೆ ಸಾಧ್ಯ. ಇದನ್ನು ಮನಗಂಡು ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸಾಧಿಸುವ ಗುರಿ ಹೊಂದಿರುವುದಾಗಿ ಹೇಳಿದರು.
ಜನಪ್ರಿಯ ಫೌಂಡೇಶನ್ ನ ನಿರ್ದೇಶಕ ಡಾ. ಶಾರೂಖ್ ಅಬ್ದುಲ್ಲಾ, ಜನಪ್ರಿಯ ಸೆಂಟ್ರಲ್ ಸ್ಕೂಲ್ ನಿರ್ದೇಶಕ ಎ.ಆರ್.ನೌಶೀನ್ ಬದ್ರಿಯಾ, ಪ್ರಾಂಶುಪಾಲ ಲಿಬಿನ್ ಕ್ಸೇವಿಯರ್ ಅವರು ಶುಭಹಾರೈಸಿ ಮಾತನಾಡಿದರು.
ಕ್ರೀಡಾ ಜ್ಯೋತಿಯೊಂದಿಗೆ ವಿದ್ಯಾರ್ಥಿಗಳ ಸಂಚಲನ ನಡೆಸಿದರು. ವಿದ್ಯಾರ್ಥಿಗಳಿಂದ ಆಕರ್ಷಕ ಕ್ರೀಡಾ ಕವಾಯತು ನಡೆಯಿತು. ಫ್ರೀ ಸ್ಕೂಲ್, ಎಲ್ ಕೆಜಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಮುಖ್ಯ ಅತಿಥಿ ದಿವಾಕರ ದಾಸ ನೇರ್ಲಾಜೆ ಅವರನ್ನು ಸನ್ಮಾನಿಸಲಾಯಿತು.
ಕ್ರೀಡಾ ಧ್ವಜಾರೋಹಣ ಬಳಿಕ ಶಾಲಾ ಗೀತೆಯನ್ನು ಹಾಡಲಾಯಿತು.
ಆಡಳಿತಾಧಿಕಾರಿ ಸಫ್ವಾನ್ ಪಿಲಿಕಲ್ ಸ್ವಾಗತಿಸಿದರು. ಶಿಕ್ಷಕಿ ದಿವ್ಯಾ ಅತಿಥಿಗಳನ್ನು ಪರಿಚಯಿಸಿದರು.ವಿದ್ಯಾರ್ಥಿನಿ ಝುಲ್ಫಾ ಮರಿಯಮ್ ವಂದಿಸಿದರು.
ವಿದ್ಯಾರ್ಥಿನಿಯರಾದ ಅಶ್ಹಾನಾ , ಹಿಬಾ ಮರಿಯಮ್ , ಮೈಮುನಾ ಸನಮ್ ಮತ್ತು ನೆಫಿಸತ್ ಸ್ವನೀಹಾ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.








