Sunday, July 26, 2026
spot_imgspot_img
spot_imgspot_img

ಸಾಕಾನೆ ತುಳಿತ: ಕಾವಾಡಿಗ ಗಂಭೀರ ಗಾಯ

- Advertisement -
- Advertisement -

ಹಾಸನ : ಜಿಲ್ಲೆಯ ಬೇಲೂರು ತಾಲೂಕಿನ ಬಿಕ್ಕೋಡು ಗ್ರಾಮದ ತಾತ್ಕಾಲಿಕ ಸಾಕಾನೆ ಕ್ಯಾಂಪ್‌ನಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆಗೆ ಬಳಸಲಾಗುತ್ತಿದ್ದ ಸಾಕಾನೆ ‘ಸುಗ್ರೀವ’ ಕಾವಾಡಿಗನ ಮೇಲೆಯೇ ದಾಳಿ ನಡೆಸಿ ತುಳಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ರಾಜು ಎಂಬವರನ್ನು ಹಾಸನ ನಗರದ ಹಿಮ್ಸ್ ಆಸ್ಪತ್ರೆಗೆ ತುರ್ತು ವಾಹನದಲ್ಲಿ ರವಾನಿಸಿ ಸೂಕ್ತ ಚಿಕಿತ್ಸೆ ಕೊಡಲಾಗುತ್ತಿದೆ.

ಮಾಹಿತಿಯಂತೆ, ಬುಧವಾರ ರಾತ್ರಿ ಸೆರೆ ಹಿಡಿದ ಬಳಿಕ ತಪ್ಪಿಸಿಕೊಂಡು ಹೋಗಿದ್ದ ನರಹಂತಕ ಒಂಟಿಕೋರೆ ಕಾಡಾನೆಯನ್ನು ಮರು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು, ಮಾವುತರು ಹಾಗೂ ಕಾವಾಡಿಗರು ಬೆಳಗ್ಗಿನಿಂದಲೇ ಸಿದ್ಧತೆ ನಡೆಸುತ್ತಿದ್ದರು. ಕ್ಯಾಂಪ್ ಪ್ರದೇಶದಲ್ಲಿ ಕಾರ್ಯಾಚರಣೆಗೆ ಸಂಬಂಧಿಸಿದ ಚಟುವಟಿಕೆಗಳು ನಡೆಯುತ್ತಿದ್ದ ವೇಳೆ, ಅಕಸ್ಮಿಕವಾಗಿ ಸಾಕಾನೆ ‘ಸುಗ್ರೀವ’ ಆಕ್ರೋಶಗೊಂಡು ನಿಯಂತ್ರಣ ತಪ್ಪಿದೆ.

ಈ ಸಂದರ್ಭದಲ್ಲೇ ಸಮೀಪದಲ್ಲಿದ್ದ ಕಾವಾಡಿಗ ರಾಜು ಮೇಲೆ ದಾಳಿ ನಡೆಸಿದ ಸುಗ್ರೀವ, ಅವನನ್ನು ತುಳಿದು ಗಂಭೀರವಾಗಿ ಗಾಯಗೊಳಿಸಿದೆ. ದಾಳಿಯ ತೀವ್ರತೆಯಿಂದ ರಾಜು ನೆಲಕ್ಕುರುಳಿದ್ದು, ಸ್ಥಳದಲ್ಲಿದ್ದ ಇತರ ಸಿಬ್ಬಂದಿ ಆತಂಕಗೊಂಡು ತಕ್ಷಣ ನೆರವಿಗೆ ಧಾವಿಸಿದ್ದಾರೆ.

ಗಾಯಗೊಂಡ ರಾಜುಗೆ ತುರ್ತು ಚಿಕಿತ್ಸೆ ನೀಡುವ ಸಲುವಾಗಿ ಕೂಡಲೇ ಆಂಬುಲೆನ್ಸ್ ಮೂಲಕ ಹಾಸನ ನಗರದ ಜಿಲ್ಲಾ ಹಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಅಲ್ಲಿ ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ವೈದ್ಯಕೀಯ ಮೂಲಗಳ ಪ್ರಕಾರ, ರಾಜುವಿನ ಸ್ಥಿತಿ ಗಂಭೀರವಾಗಿದ್ದು, ನಿಗಾ ವಹಿಸಲಾಗಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!