

ವಿಟ್ಲ: 55ನೇ ವರ್ಷದ ವಿಟ್ಲ ಶಾರದೋತ್ಸವದ ಶೋಭಾಯಾತ್ರೆಯು ಅಕ್ಟೋಬರ್ 20ರಂದು ಮಂಗಳವಾರ ವಿಟ್ಲದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಟೀಮ್ ಪುಣ್ಯಕೋಟಿ ವಿಟ್ಲ ಇದರ ಆಶ್ರಯದಲ್ಲಿ ಸಿಂಗಾರಿ ಮೇಳ ಹಾಗೂ ವೈಯಲಿನ್ ವಾದ್ಯ ಕಾರ್ಯಕ್ರಮ ಜರುಗಲಿದೆ.ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಿಟ್ಲ ಆರಕ್ಷಕ ಠಾಣೆಯ ಉಪನಿರೀಕ್ಷಕ ರಾಮಕೃಷ್ಣ ಬಿಡುಗಡೆಗೊಳಿಸಿದರು.


ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷ ಪದ್ಮನಾಭ ಕಟ್ಟೆ, ಹಿರಿಯರಾದ ಎಂ. ನಿತ್ಯಾನಂದ ನಾಯಕ್, ಕೃಷ್ಣಯ್ಯ ವಿಟ್ಲ ಅರಮನೆ, ಜಯರಾಮ್ ಬಳ್ಳಾಲ್, ಸುದರ್ಶನ್ ಪಡಿಯಾರ್, ವಿಟ್ಲ ಮೋಹನ್ ಕಟ್ಟೆ, ಸಂಸ್ಥೆಯ ಅಧ್ಯಕ್ಷ ಜಿತೇಶ್ ಕೆ.ಎಸ್., ಕಾರ್ಯದರ್ಶಿ ಕೆ. ಕಾರ್ತಿಕ್, ಕೋಶಾಧಿಕಾರಿ ಪ್ರೀತೇಶ್ ಕೆ.ಎಸ್. ಹಾಗೂ ಸದಸ್ಯರಾದ ಮನೋಜ್ ಬಿ.ಪಿ., ಆದಿತ್ಯ ಪಡಿಯಾರ್, ಸಾಯಿ ಕೀರ್ತನ್, ಕೃತಿಕ್ ಎಸ್.ವಿ., ಯೋಗಿತ್ ಡಿ., ಸಾತ್ವಿಕ್ ಎಂ., ರಶ್ಮಿತ್ ಎನ್., ವೈ. ವಿತ್ತೇಶ್, ಕ್ಷಿತಿಜ್, ಅನುಷ್ ಡಿ., ಪ್ರಣಯಿ ಎಂ. ಶೆಟ್ಟಿ, ಜಿಗ್ನೇಶ್ ಎಸ್.ಜಿ., ಸುಮಂತ್ ಪಿ., ವಿ. ಕಾರ್ತಿಕ್, ಚೈತನ್ ಎ., ನಿಶಾಂತ್, ಪೂರ್ಣಿಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.








