Monday, July 27, 2026
spot_imgspot_img
spot_imgspot_img

ಪತಿಗೆ ಕೊರೊನಾ ಸೊಂಕು ತಗುಲಿದ ಹಿನ್ನಲೆಯಲ್ಲಿ ಪತ್ನಿ ಮಹಡಿಯಿಂದ ಜಿಗಿದು ಆತ್ಮಹತ್ಯೆ

- Advertisement -
- Advertisement -

ಉಡುಪಿ :ಪತಿಗೆ ಕೊರೊನಾ ಸೊಂಕು ತಗುಲಿದ ಹಿನ್ನಲೆಯಲ್ಲಿ ಮನನೊಂದ ಮಹಿಳೆಯೊಬ್ಬರು ವಸತಿ ಸಂಕೀರ್ಣದ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ.


ಮೃತರನ್ನು ೭೦ ವರ್ಷ ಪ್ರಾಯದ ಗಂಗಮ್ಮ ಎಂದು ಗುರುತಿಸಲಾಗಿದೆ. ಇವರು ಮೂಲತಃ ಚಿತ್ರದುರ್ಗದವರು. ನಗರದ ಬಿಗ್ ಬಜಾರ್ ಸನಿಹದಲ್ಲಿರುವ ವಸತಿಸಂಕೀರ್ಣದಲ್ಲಿ ಮಗನ ಮನೆಯಲ್ಲಿ ಕೆಲವು ತಿಂಗಳುಗಳಿoದ ವಾಸವಾಗಿದ್ದರು. ಕೆಲವು ದಿನಗಳ ಹಿಂದೆ ಕೋವಿಡ್ ಸೋಂಕಿಗೆ ಬಾಧಿತರಾಗಿ ಗುಣಮುಖರಾಗಿದ್ದರು.


ಇವರ ಪತಿಯು ಕೊರೊನಾ ಪಾಸಿಟಿವ್ ಇರುವುದರಿಂದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಪತಿಯ ಅನಾರೋಗ್ಯದ ಕಾರಣ ಮನನೊಂದ ಗಂಗಮ್ಮ ಅವರು ಆತ್ಮಹತ್ಯೆಕೊಂಡಿರ ಬಹುದೆಂದು ಶಂಕಿಸಲಾಗಿದೆ.ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ .

- Advertisement -

Related news

error: Content is protected !!