Monday, October 12, 2026
spot_imgspot_img
spot_imgspot_img

ಸವಣೂರು: ವಿದ್ಯುತ್ ಕಂಬಕ್ಕೆ ಓಮ್ನಿ ಡಿಕ್ಕಿ ಇಬ್ಬರಿಗೆ ಗಾಯ

- Advertisement -
- Advertisement -

ಪುತ್ತೂರು: ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಓಮ್ನಿ ಡಿಕ್ಕಿಯಾಗಿ ಕಂಬ ತುಂಡಾಗಿ ಇಬ್ಬರಿಗೆ ಗಾಯವಾದ ಘಟನೆ ಕಾಣಿಯೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಸವಣೂರಿನಲ್ಲಿ ನಡೆದಿದೆ.

ಆನ್ ಲೈನ್ ಪಾರ್ಸೆಲ್ ಅಮೆಜನ್ ನ ಪಾರ್ಸೆಲ್ ಸಾಗಟದ ಓಮ್ನಿ ಕಾರು ಸುಬ್ರಹ್ಮಣ್ಯ ಕಡೆಯಿಂದ ಪುತ್ತೂರಿಗೆ ಹೋಗುತಿದ್ದಾಗ ಸವಣೂರಿನ ಮಾಂತೂರು ಎಂಬಲ್ಲಿ ಅಪಘಾತ ಸಂಭವಿಸಿದೆ.

ಓಮ್ಮಿ ಸ್ಕಿಡ್ ಆಗಿ ವಿರುದ್ಧ ದಿಕ್ಕಿನಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಒಮ್ನಿಯಲ್ಲಿದ್ದ ಇಬ್ಬರಿಗೆ ತಲೆ ಹಾಗೂ ಕಿವಿಗೆ ಗಾಯವಾಗಿದೆ. ವಿದ್ಯುತ್ ಕಂಬ ತುಂಡಾಗಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.

ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸವಣೂರು ಮೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಸಂಪರ್ಕ ಸರಿಪಡಿಸಲು ಶ್ರಮಿಸಿದರು.

- Advertisement -

Related news

error: Content is protected !!