
ವಿಟ್ಲ: ವಿಟ್ಲ-ಪುತ್ತೂರು ರಸ್ತೆಯ ವಿ.ಎಚ್ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ನೂತನವಾಗಿ “ಝೆನ್ ಟೆಕ್ಸ್ ಟೈಲ್ಸ್” ಇದೇ ಸೆ.19ರ ಭಾನುವಾರ ಶುಭಾರಂಭಗೊಳ್ಳಲಿದೆ.
ಅತ್ಯುತ್ತಮ ಗುಣಮಟ್ಟ, ವಿಶಾಲ ಸಂಗ್ರಹ, ದೀರ್ಘ ಬಾಳಿಕೆ, ವಿನ್ಯಾಸಗಳನ್ನೂಳಗೊಂಡ ಪುರುಷರ, ಮಹಿಳೆಯರ, ಮಕ್ಕಳ ವಿವಿಧ ಬಟ್ಟೆಗಳು ಮಿತ ದರದಲ್ಲಿ ದೊರೆಯಲಿದೆ.

ಶುಭಾರಂಭದ ಪ್ರಯುಕ್ತ ವಿಶೇಷ ಆಫರ್ ಇಡಲಾಗಿದ್ದು, ದಿನಾಂಕ ೧೯-೦೯-೨೦೨೧ ರಿಂದ ೩೦-೦೯-೨೦೨೧ ವರೆಗೆ ೫ ಪ್ಲಾಝೋ ಪ್ಯಾಂಟ್ ಗೆ ರೂ. ೩೯೯/-, ೫ ಲೇಡಿಸ್ ಟಾಪ್ ಗೆ ರೂ. ೪೯೯/-, ೫ ಲೆಗ್ಗಿನ್ಸ್ ಗೆ ರೂ. ೪೯೯/-, ೫ ಲೇಡಿಸ್ ಶಾಲ್ ಗೆ ರೂ. ೧೯೯/-,ರೂ ಆಫರ್ ದೊರೆಯಲಿದೆ.
ಸಂಸ್ಥೆಯ ಉದ್ಘಾಟನೆಯ ಆಮಂತ್ರಣ ಪತ್ರಿಕೆಯನ್ನು ಸ್ಟೇಟಸ್ ಹಾಕಿದವರಿಗೂ ವಿಶೇಷ ಬಹುಮಾನ ಘೋಷಿಸಲಾಗಿದೆ. ೫೦ಕ್ಕಿಂತ ಜನರು ಹೆಚ್ಚು ವೀಕ್ಷಿಸಿದ ಸ್ಟೇಟಸ್ ಸ್ಕ್ರೀನ್ ಶಾಟ್ ನ ಡ್ರಾ ಫಲಿತಾಂಶ ಸೆ. ೨೬ರಂದು ನಡೆಯಲಿದ್ದು, ವಿಜೇತರಿಗೆ ರೂ. ೩,೩೧೩ ಬೆಳೆಬಾಳುವ ಫ್ಯಾಮಿಲಿ ಪ್ಯಾಕ್ ನೀಡಲಾಗುತ್ತದೆ ಎಂದು ಸಂಸ್ಥೆಯ ವ್ಯವಸ್ಥಾಪಕರು ತಿಳಿಸಿದ್ದಾರೆ.

ಉಡುಪಿ ಮತ್ತು ಚಿಕ್ಕಮಗಳೂರು ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಕೆಐಸಿ ಪ್ರಾಂಶುಪಾಲ ಬಿ.ಕೆ ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ,
ಪುತ್ತೂರು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ.
ಉಳ್ಳಾಲ ಶಾಸಕ ಯು.ಟಿ ಖಾದರ್, ವಿಟ್ಲ ಅರಮನೆಯ ಕೃಷ್ಣಯ್ಯ ಕೆ, ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬು ಮಹಮ್ಮದ್ ಆಲಿ ಫೈಝಿ ಇರ್ಫಾನಿ, ವಿಟ್ಲ ಟೌನ್ ಮಸೀದಿ ಖತೀಬು ಅಬ್ಬಾಸ್ ಮದನಿ, ಮಾಜಿ ಶಾಸಕಿ ಶಕುಂತಾಳ ಶೆಟ್ಟಿ, ಕೆಥೋಲಿಕ್ ಸಭಾ ಮೊಗರ್ನಾಡು ವಲಯಾಧ್ಯಕ್ಷ ಲೂವಿಸ್ ಮಸ್ಕರೇಂಞಸ್, ವಿಟ್ಲ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ, ಅರುಣ್ ಎಂ ವಿಟ್ಲ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎಸ್ ಮಹಮ್ಮದ್, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಾರಾಂ ಕೆ.ಬಿ, ಕೆಪಿಸಿಸಿ ಸದಸ್ಯ ಬಿ ರಘು, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಮೋನಪ್ಪ ಗೌಡ, ರೋಟರಿ ಕ್ಲಬ್ ಅಧ್ಯಕ್ಷ ಅಣ್ಣಪ್ಪ ಸಾಸ್ತಾನ, ಜೇಸಿಐ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ವಿಟ್ಲ ವಾಣಿಜ್ಯ ಮತ್ತು ವರ್ತಕರ ಸಂಘದ ಅಧ್ಯಕ್ಷ ಬಾಬು ಕೆ.ವಿ, ಎಂ ಫ್ರೆಂಡ್ಸ್ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ, ಇ.ಕೆ ಸಿದ್ದೀಕ್ ಅಡ್ಡೂರು, ಎಂ.ಬಿ ನಝೀರ್, ಎಸ್‌ಡಿಪಿಐ ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾರ್ಯದರ್ಶಿ ಶಾಕೀರ್ ಅಳಕೆಮಜಲು, ಜೆಡಿಎಸ್ ಮುಖಂಡ ಜಾಫರ್ ಖಾನ್, ರಝಾಕ್ ಕುಕ್ಕಾಜೆ, ಆರ್.ಕೆ ಅಬ್ದುಲ್ಲ ಹಾಜಿ, ವಿ.ಎಚ್ ಅಶ್ರಫ್, ರಹಿಮಾನ್ ಮಠ, ಸಿದ್ದೀಕ್ ಉಚ್ಚಿಲ ಮೊದಲಾದವರು ಭಾಗವಹಿಸಲಿದ್ದಾರೆ.











