Tuesday, June 30, 2026
spot_imgspot_img
spot_imgspot_img

ಸ್ವಯಂ ಘೋಷಿತ ದೇವಮಾನವನಿಂದ ಅಪ್ರಾಪ್ತ ಬಾಲಕಿಯ ಅತ್ಯಾಚಾರ; ಕೃತ್ಯಕ್ಕೆ ತಾಯಿಯ ಸಾಥ್!

- Advertisement -
- Advertisement -

ಮಹಾರಾಷ್ಟ್ರ: 16 ವರ್ಷದ ಬಾಲಕಿಯ ಮೇಲೆ ಸ್ವಯಂ ಘೋಷಿತ ದೇವಮಾನವ ಅತ್ಯಾಚಾರ ಎಸಗಿರುವ ಘಟನೆ ಥಾಣೆಯ ಭಿವಂಡಿಯಲ್ಲಿ ನಡೆದಿದೆ.

ಆರೋಪಿ ದೇವಮಾನವನಿಗೆ ಬಾಲಕಿಯ ತಾಯಿ ಪರಿಚಯಸ್ಥಳಾಗಿದ್ದಳು ಎಂದು ಹೇಳಲಾಗಿದೆ.  ಬಾಲಕಿಯು ಅನಾರೋಗ್ಯದಿಂದ ಬಳಲುತ್ತಿದ್ದು, ಈ ಬಗ್ಗೆ ಸಲಹೆ ಕೇಳಲು ಬಾಲಕಿಯ ತಾಯಿ ದೇವಮಾನವ ಸಾಧುವೊಬ್ಬನ ಬಳಿಗೆ ಹೋಗಿದ್ದಾಳೆ. ಈ ವೇಳೆ ಆತ, ನಿನ್ನ ಮಗಳ ದೇಹದಲ್ಲಿ ಆಕೆಯ ಚಿಕ್ಕಪ್ಪನ ದೆವ್ವ ಇದೆ ಅದನ್ನು ಬಿಡಿಸಬೇಕು ಎಂದು ಹೇಳಿದ್ದಾನೆ.

ಆತನ ಮಾತಿಗೆ ಒಪ್ಪಿದ್ದ ಬಾಲಕಿಯ ತಾಯಿ ಮಗಳನ್ನು ಆತನೊಂದಿಗೆ ಕಳುಹಿಸಿದ್ದಾಳೆ. ಬಾಲಕಿಯನ್ನು ಕಾಡು ಪ್ರದೇಶಕ್ಕೆ ಕರೆದೊಯ್ದ ಸಾಧು, ಪೂಜೆಯ ನೆಪದಲ್ಲಿ ಆಕೆಯ ಮೇಲೆ ಕ್ರೂರವಾಗಿ ಅತ್ಯಾಚಾರ ನಡೆಸಿದ್ದಾನೆ ಎಂದು ಬಾಲಕಿ ಹೇಳಿದ್ದಾಳೆ.

ಬಾಲಕಿ ನಾರ್ಪೋಲಿ ಪೊಲೀಸರಿಗೆ ದೂರು ನೀಡಿದ್ದಾಳೆ. ಬಾಲಕಿಯ ತಾಯಿ ಅಪರಾಧ ಮಾಡಲು ಆರೋಪಿಗಳಿಗೆ ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರು ತಾಯಿ ಮತ್ತು ಸ್ವಯಂ ಘೋಷಿತ ದೇವಮಾನವ ಇಬ್ಬರನ್ನೂ ಬಂಧಿಸಿದ್ದಾರೆ.

- Advertisement -

Related news

error: Content is protected !!