Monday, July 20, 2026
spot_imgspot_img
spot_imgspot_img

ಬೈಕ್‌ನಲ್ಲಿ ಯುವತಿಯ ಹುಚ್ಚಾಟ – ಹೆಲ್ಮೆಟ್ ಧರಿಸದೇ, ಕೈಯಲ್ಲಿ ಬಾಟಲಿ ಹಿಡಿದು ಜಾಲಿ ಮೂಡಲ್ಲಿ ಯುವತಿ!

- Advertisement -
- Advertisement -

ಬೆಂಗಳೂರು: ಹೆಲ್ಮೆಟ್ ಧರಿಸದೇ, ಬಾಟಲ್ ಹಿಡಿದು ಜಾಲಿ ಮೂಡಲ್ಲಿ ಬೈಕ್‌ನಲ್ಲಿ ಯುವತಿಯ ಹುಚ್ಚಾಟ ಮೆರೆದಿರುವ ಘಟನೆ ಬೆಂಗಳೂರಿನ ಬನಶಂಕರಿಯಲ್ಲಿ ನಡೆದಿದೆ.

ಬನಶಂಕರಿ ಕಡೆಯಿಂದ ಬಿಟಿಎಂ ಕಡೆ ಯುವತಿ ಬೈಕ್‌ನಲ್ಲಿ ಹೊರಟಿದ್ದಳು. ಈ ವೇಳೆ ಹಿಂಬದಿಯಲ್ಲಿ ಕುಳಿತು ಸಿನಿಮೀಯ ಸ್ಟೈಲ್‌ನಲ್ಲಿ ಎಂಜಾಯ್ ಮಾಡಿದ್ದಾಳೆ. ಹೆಲ್ಮೆಟ್ ಧರಿಸದೇ ಕೈಯಲ್ಲಿ ಬಾಟಲಿ ಒಂದನ್ನು ಹಿಡಿದು ಜಾಲಿ ಮೂಡ್‌ನಲ್ಲಿ ತೇಲಾಡಿದ್ದಾಳೆ.

ಸುಮಾರು ನಾಲ್ಕೈದು ಕಿ.ಮೀ ಇದೇ ರೀತಿ ಮಾಡಿದ್ದು, ಕುಡಿದಂತೆ ಬೈಕ್‌ನಲ್ಲಿ ತೇಲಾಡಿಕೊಂಡು ತೂರಾಡಿಕೊಂಡು ಹೋಗಿದ್ದಾಳೆ. ಹಿಂದೆ ಕಾರಿನಲ್ಲಿ ಬರುತ್ತಿದ್ದ ಯುವಕರ ಗುಂಪೊಂದು ಯುವತಿ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -

Related news

error: Content is protected !!