



ವಿಟ್ಲ: ಬಿಲ್ಲವ ಸಂಘ (ರಿ.) ವಿಟ್ಲ, ಮಹಿಳಾ ಬಿಲ್ಲವ ಘಟಕ ಹಾಗೂ ಯುವವಾಹಿನಿ (ರಿ.) ವಿಟ್ಲ ಇದರ ವತಿಯಿಂದ ಆಟಿ ತಿಂಗೊಲ್ದ ಪೊಲಬು ಕಾರ್ಯಕ್ರಮವು ದಿನಾಂಕ:20 /7/2025ನೇ ಆದಿತ್ಯವಾರ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನ ವಿಟ್ಲದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮಹಿಳಾ ಬಿಲ್ಲವ ಘಟಕದ ಅಧ್ಯಕ್ಷೆ ಮಮತಾ ಸಂಜೀವ ಪೂಜಾರಿ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ ಸುರತ್ಕಲ್ ಹೋಬಳಿ ಅಧ್ಯಕ್ಷೆ ಶ್ರೀಮತಿ ಗುಣವತಿ ರಮೇಶ್ ಸಂಪನ್ಮೂಲ ವ್ಯಕ್ತಿಯಾಗಿ ಉಪಸ್ಥಿತರಿದ್ದರು.
ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸಂಜೀವ ಪೂಜಾರಿ, ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಹರೀಶ್ ಪೂಜಾರಿ ಸಿ.ಎಚ್, ಜೆ.ಸಿ.ಐ ವಿಠಲ್ ಸಂಸ್ಥೆ ಅಧ್ಯಕ್ಷೆ ಸೌಮ್ಯ ಚಂದ್ರಹಾಸ, ವಿಟ್ಲ ಬಿಲ್ಲವ ಸಂಘ ಗೌರವಾಧ್ಯಕ್ಷ ಬಾಬು ಪೂಜಾರಿ ಕೊಪ್ಪಳ, ಯುವವಾಹಿನಿ (ರಿ.) ವಿಟ್ಲ ಅಧ್ಯಕ್ಷ ಹರೀಶ್ ಪೂಜಾರಿ ಮರುವಾಳ, ಮಹಿಳಾ ಮಂಡಲ ವಿಟ್ಲ ಗೌರವಾಧ್ಯಕ್ಷೆ ಶ್ರೀಮತಿ ಹೇಮಲತಾ ಜಗನ್ನಾಥ ಸಾಲ್ಯಾನ್, ವಿಟ್ಲ ಬಿಲ್ಲವ ಸಂಘ ಕಾರ್ಯದರ್ಶಿ ಲಕ್ಷ್ಮಣ ಪೂಜಾರಿ, ವಿಟ್ಲ ಮಹಿಳಾ ಬಿಲ್ಲವ ಸಂಘ ಗೌರವಾಧ್ಯಕ್ಷೆ ಪ್ರೇಮಲತಾ ಸೋಮಶೇಖರ್, ವಿಟ್ಲ ಮಹಿಳಾ ಬಿಲ್ಲವ ಸಂಘ ಕಾರ್ಯದರ್ಶಿ ಭಾರತಿ ಪ್ರಕಾಶ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇಕಡಾ 95% ಗಿಂತ ಹೆಚ್ಚು ಅಂಕ ಪಡೆದ 9 ಮಕ್ಕಳನ್ನು ಗುರುತಿಸಲಾಯಿತು. ಹಾಗೂ ಮಹಿಳಾ ಘಟಕದ ವತಿಯಿಂದ ಸಂಘಕ್ಕೆ ಪೋಡಿಯಂ ನೀಡಲಾಯಿತು. ಆಟಿ ತಿಂಗಳಿನಲ್ಲಿ ಸಿಗುವಂತಹ ಕೆಲವು ಬಗೆಯ ರುಚಿ ರುಚಿಯಾದ ತಿಂಡಿಗಳನ್ನು ಸಂಘದ ಸದಸ್ಯರು ತಂದಿದ್ದರು. ಈ ಸಂದರ್ಭದಲ್ಲಿ ಹೊಸ ಮಹಿಳಾ ಸದಸ್ಯರ ಸೇರ್ಪಡೆ ಮಾಡಲಾಯಿತು.
ಶ್ರೀಮತಿ ಕವಿತಾ ಪರಮೇಶ್ವರ ಸ್ವಾಗತಿಸಿದರು. ವರದಿಯನ್ನು ಶ್ರೀಮತಿ ಪ್ರಮೀಳಾ, ವಿವಿದ ಬಗೆಯ ತಿಂಡಿ ತಿನಸುಗಳನ್ನು ತಂದ ಸದಸ್ಯರ ಹೆಸರನ್ನು ಶ್ರೀಮತಿ ಶೋಭಾ ಹೇಳಿದರು. ಕಾರ್ಯದರ್ಶಿ ಭಾರತಿ ಪ್ರಕಾಶ್ ಧನ್ಯವಾದಗೈದರು. ಶ್ರೀಮತಿ ಧನಲಕ್ಷ್ಮಿ ರಾಜೇಶ್ ಮತ್ತು ಕುಮಾರಿ ಅಕ್ಷತಾ ನಿರೂಪಿಸಿದರು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.








