- Advertisement -
- Advertisement -






ತುಮಕೂರು: ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ಮಾತ್ರೆಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ 6 ಮಂದಿ ಆರೋಪಿಗಳನ್ನು ತುಮಕೂರಿನ ತಿಲಕ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಉಮರ್(32), ನಜೀರ್(35), ನವೀದ್(32) ಹಾಗೂ ತುಮಕೂರಿನ ಮರಳೂರುದಿಣ್ಣೆ ನಿವಾಸಿ ಶಾಹಬಾಜ್(30), ಮಹಮ್ಮದ್ ಗೌಸ್(32), ಮಹಮ್ಮದ್ ಇಕ್ಬಾಲ್(28) ಬಂಧಿತ ಆರೋಪಿಗಳು.
ತುಮಕೂರು ನಗರದ ವಿವಿಧ ಕಾಲೇಜುಗಳ ಬಳಿ ನಿಂತುಕೊಂಡು ಕಾಲೇಜು ವಿದ್ಯಾರ್ಥಿಗಳಿಗೆ ಆರೋಪಿಗಳು ಮಾದಕ ಮಾತ್ರೆಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು. ಟಾಪೆಜೆಕ್ 100 ಎಂಜಿ, ಹಾಗೂ ಟೈಜೋಲ್-100 ಎಂಜಿ ಮಾತ್ರೆಗಳನ್ನ ಮಾರಾಟ ಮಾಡಲು ಯತ್ನಿಸಲಾಗಿತ್ತು.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ತಿಲಕ್ ಪಾರ್ಕ್ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಬಳಿಯಿದ್ದ 100 ಮಾದಕ ಮಾತ್ರೆಗಳನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳ ವಿರುದ್ಧ ಎಂಡಿಎಂಎ ಆಕ್ಟ್ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ವರದಿ ಮುಲಕ ತಿಳಿದುಬಂದಿದೆ.
- Advertisement -







