Friday, July 24, 2026
spot_imgspot_img
spot_imgspot_img

ಬಂಟ್ವಾಳದ ಕಂದಮ್ಮನ ಚಿಕಿತ್ಸೆಗೆ ಬೇಕಿದೆ ಸಹೃದಯಿಗಳ ನೆರವು

- Advertisement -
- Advertisement -


ಬಂಟ್ವಾಳ: ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಬಜ ನಿವಾಸಿ ದಿನೇಶ್ ಶೆಟ್ಟಿ ಹಾಗೂ ರಂಜಿತಾ ದಂಪತಿಗಳ ಒಂದು ವರ್ಷ ಎರಡು ತಿಂಗಳ ಮುದ್ದು ಮಗು ಶ್ರೀದೇವಿಗೆ ಇವಿಂಗ್ಸ್ ಸರ್ಕೋಮಾ ಎನ್ನುವ ಎಲುಬು ಸಂಬಂಧಿ ಕ್ಯಾನ್ಸರ್ ರೋಗ ಇರುವುದು ಪತ್ತೆಯಾಗಿದೆ. ರೋಗ ಆರಂಭದ ಹಂತದಲ್ಲಿರುವುದರಿಂದ ಸೂಕ್ತ ಶಸ್ತ್ರಚಿಕಿತ್ಸೆ ಮಾಡಿಸಿದರೆ ಮಗು ಗುಣಮುಖಳಾಗುತ್ತಾಳೆ ಎಂದು ವೈದ್ಯರು ಭರವಸೆ ನೀಡಿದ್ದಾರೆ.

ಶಸ್ತ್ರಚಿಕಿತ್ಸೆಗೆ 40ಲಕ್ಷ ರೂಪಾಯಿ ಖರ್ಚು ತಗಲುವುದಾಗಿ ವೈದ್ಯರು ತಿಳಿಸಿದ್ದಾರೆ. ಈಗಾಗಲೇ ಆರಂಭಿಕ ಹಂತದ 5 ಶಸ್ತ್ರಚಿಕಿತ್ಸೆ ಮಾಡಿ, 4 ಕಿಮೋಥೆರಪಿ ನೀಡಲಾಗಿದ್ದು 6 ಲಕ್ಷ ರೂ. ಖರ್ಚಾಗಿದೆ. ಮದ್ಯಮ ವರ್ಗದ ಕುಟುಂಬಕ್ಕೆ ಚಿಕಿತ್ಸೆಗೆ ಆರ್ಥಿಕ ಸಂಕಷ್ಟ ಎದುರಾಗಿದ್ದು ದಾನಿಗಳ ಸಹಕಾರ ಅಗತ್ಯವಿದೆ ಎಂದು ಮಗುವಿನ ಪೋಷಕರು ತಿಳಿಸಿದ್ದಾರೆ.

ನೆರವು ನೀಡುವವರು ದಿನೇಶ್ ಶೆಟ್ಟಿ ಖಾತೆ ಸಂಖ್ಯೆ 42150100005115, ಬ್ಯಾಂಕ್ ಆಫ್ ಬರೋಡ, ಐಎಫ್ಎಸ್ ಸಿ ಕೋಡ್ BARBOBANTWA ಅಥವಾ ದೂರವಾಣಿ ಸಂಖ್ಯೆ 7090883350 ಸಂಪರ್ಕಿಸಬಹುದು ಎಂದು ಮಾಹಿತಿಯಲ್ಲಿ ತಿಳಿಸಿದ್ದಾ

ರೆ.

- Advertisement -

Related news

error: Content is protected !!