




ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಯಾವುದೇ ಬ್ಯಾನರ್, ಫ್ಲೆಕ್ಸ್, ಅಳವಡಿಸುವುದಿದ್ದರೆ ಕಡ್ಡಾಯವಾಗಿ ಪುರಸಭೆ ಅನುಮತಿ ಪಡೆಯಬೇಕು, ಮತ್ತು ಬಟ್ಟೆಯ ಬ್ಯಾನರ್ ಗೆ ಮಾತ್ರ ಅನುಮತಿ ನೀಡಲಾಗುವುದು, ಬದಲಾಗಿ ಪ್ಲಾಸ್ಟಿಕ್ ಬ್ಯಾನರ್ ಗಳನ್ನು ಬಳಸಿದಲ್ಲಿ ಅಥವಾ ಯಾವುದೇ ಅನುಮತಿ ಪಡೆಯದೇ ಬ್ಯಾನರ್ ಅಳವಡಿಸಿದಲ್ಲಿ ಅಂತಹ ಫ್ಲೆಕ್ಸ್ ಗಳನ್ನು ತೆರವುಗೊಳಿಸಲಾಗುವುದು ಎಂಬುದಾಗಿ ಪುರಸಭೆಯಿಂದ ಜನವರಿ 26 ರಂದು ಅಧಿಕೃತ ಆದೇಶ ಹೊರಡಿಸಿ ಖಡಕ್ ಎಚ್ಚರಿಕೆ ನೀಡಿದ್ದರು.

ಆದಾದ ಕೆಲವೇ ದಿನಗಳಲ್ಲಿ ಬಿ ಸಿ ರೋಡ್ ನಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಆಗಮನಕ್ಕೆ ಪುರಸಭೆ ಅಧಕ್ಷ ವಾಸು ಪೂಜಾರಿ ಸ್ವಾಗತ ಕೋರಿ ತಮ್ಮ ಭಾವಚಿತ್ರವುಳ್ಳ ಬ್ಯಾನರ್ ಅಳವಡಿಸಿದ್ದರು. ಈ ವಿಚಾರ ಭಾರಿ ವೈರಲ್ ಆಗಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆ ಗೆ ಕಾರಣವಾಗಿತ್ತು. ಇದಾದ ಬಳಿಕ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಬಂಧಪಟ್ಟ ಹಲವು ಬ್ಯಾನರ್ ಗಳನ್ನು ಹಲವು ಧರ್ಮದ ಕಾರ್ಯಕರ್ತರು ಅಳವಡಿಸಿದ್ದರು. ಮುಸ್ಲಿಂ ಸಮುದಾಯದವರು ಅಳವಡಿಸಿದ ಧಾರ್ಮಿಕ ಕಾರ್ಯಕ್ರಮದ ಬ್ಯಾನರ್ ನ್ನು ಅಲ್ಲೇ ಉಳಿಸಿ, ಹಿಂದೂ ಧರ್ಮದ ಕಾರ್ಯಕರ್ತರು ಅಳವಡಿಸಿದ ಧಾರ್ಮಿಕ ಕಾರ್ಯಕ್ರಮದ ಪ್ರಚಾರವನ್ನೂಳಗೊಂಡ ಬ್ಯಾನರನ್ನು ಪುರಸಭೆ ತೆರವುಗೊಸಿದ್ದಾರೆ. ಹಿಂದೂ ಕಾರ್ಯಕರ್ತರು ಪರ್ಮಿಷನ್ ಮೇರೆಗೆ ಬ್ಯಾನರ್ ಅಳವಡಿಸಿದ್ದರೂ ಪ್ಲಾಸ್ಟಿಕ್ ನಿಷೇದ ಎನ್ನುವ ನೆಪದಲ್ಲಿ ರಸ್ತೆ ಬದಿ ಅಳವಡಿಸಿದ ಬ್ಯಾನರ್ ಗಳನ್ನು ತೆರವು ಗೊಳಿಸಿ ಪುರಸಭೆಯ ಕೊಠಡಿಯಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಆಕ್ರೋಶಗೊಂಡ ಹಿಂದೂ ಸಂಘಟನೆಗಳು ಪುರಸಭೆ ಹೊರಡಿಸಿದ ಆದೇಶ ಕೇವಲ ಹಿಂದೂ ಸಮಾಜಕ್ಕಾಗಿಯೆ..? ಅಥವಾ ಎಲ್ಲರಿಗೂ ಅನ್ವಯಿಸುತ್ತವೆಯೇ..? ಅನ್ಯ ಧರ್ಮದ ಕಾರ್ಯಕ್ರಮಗಳ ಬ್ಯಾನರ್ ತೆರವು ಯಾವಾಗ? ಕೇವಲ ಒಂದು ಧರ್ಮಕ್ಕೆ ಸೀಮಿತವಾಯಿತೇ ಪುರಸಭೆಯ ಆದೇಶ? ಎಂಬುದಾಗಿ ಎಂದು ಹಿಂದೂ ಜಾಗರಣ ವೇದಿಕೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.








