Wednesday, July 22, 2026
spot_imgspot_img
spot_imgspot_img

ಬೆಂಗಳೂರು: ವಿವಾಹಿತೆ ಅನುಮಾನಾಸ್ಪದ ಸಾವು – ಪತಿ ವಿರುದ್ಧ ಕೊಲೆ ಆರೋಪ

- Advertisement -
- Advertisement -

ಬೆಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ವಿವಾಹಿತೆ ಶವ ಪತ್ತೆಯಾಗಿರುವ ಘಟನೆ ಯಲಹಂಕದಲ್ಲಿ ನಡೆದಿದ್ದು, ಪತಿ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ.

ಶೃತಿ (22) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ವಿವಾಹಿತೆ. ಪತಿ ಪವನ್ ಕಲ್ಯಾಣ್ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಕಳೆದ ಒಂದೂವರೆ ವರ್ಷದ ಹಿಂದೆ ಪವನ್ ಕಲ್ಯಾಣ್ ಕುಟುಂಬದವರಿಂದ ನಿರಂತರ ವರದಕ್ಷಿಣೆ ಕಿರುಕುಳ ಆರೋಪವನ್ನು ಶೃತಿ ಕುಟುಂಬಸ್ಥರು ಹೊರಿಸಿದ್ದಾರೆ.

ವರದಕ್ಷಿಣೆ ಕಿರುಕುಳ ಹಿನ್ನೆಲೆ ಶೃತಿ ಹಾಗೂ ಪತಿ ಕುಟುಂಬಸ್ಥರ ನಡುವೆ ಕಲಹ ಉಂಟಾಗುತ್ತಿತ್ತು. ಈ ಹಿಂದೆ ರಾಜಿ ಪಂಚಾಯ್ತಿ ಮಾಡಲಾಗಿತ್ತು. ಆದರೆ ಮತ್ತೆ ಕಿರುಕುಳ ನೀಡಿ ಹಿಂಸೆ ನೀಡುತ್ತಿದ್ದರು. ಈ ಹಿನ್ನೆಲೆ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಕೊಲೆ ಮಾಡಿದ್ದಾರೆ. ನಂತರ ನೇಣು ಹಾಕಿ ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ವರದಿ ಮೂಲಕ ತಿಳಿದು ಬಂದಿದೆ.

- Advertisement -

Related news

error: Content is protected !!