Tuesday, July 21, 2026
spot_imgspot_img
spot_imgspot_img

ವಿಟ್ಲ: ಚಂದಪ್ಪಾಡಿ ಮನೆ ಶ್ರೀ ನಾಗ ದೇವರು ದೈವಂಗಳು, ಶ್ರೀ ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ

- Advertisement -
- Advertisement -

ವಿಟ್ಲ: ಚಂದಪ್ಪಾಡಿ ಮನೆ ಶ್ರೀ ನಾಗ ದೇವರು ದೈವಂಗಳು, ಶ್ರೀ ರಕ್ತೆಶ್ವರಿ ಹಾಗೂ ಪರಿವಾರ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವವು ಏಪ್ರಿಲ್ 24 ಶುಕ್ರವಾರದಂದು ನಡೆಯಲಿದೆ.

ಏಪ್ರಿಲ್ 23 ಗುರುವಾರ ಸಂಜೆ ಗಂಟೆ 5:30 ರಿಂದ ಸ್ಥಾನಪರಿಗ್ರಹ, ಸ್ವಸ್ತಿ ಪುಣ್ಯಾಹವಾಚನ, ಪ್ರಾಸಾದ ಶುದ್ಧಿ ಆಚಾರ್ಯವರಣೆ, ರಾಕ್ಷೋಘ್ನಹೋಮ, ವಾಸ್ತುಹೋಮ, ವಾಸ್ತುಬಲಿ, ಅಧಿವಾಸ

ಏಪ್ರಿಲ್ 24 ಶುಕ್ರವಾರ ಬೆಳಿಗ್ಗೆ ಗಂಟೆ 6 ರಿಂದ ಗಣಪತಿಹೋಮ, ಕಲಶಪ್ರತಿಷ್ಠೆ, ಕಲಶಾಧಿವಾಸ ಹೋಮ, ಬೆಳಿಗ್ಗೆ ಗಂಟೆ 9:03ಕ್ಕೆ ನಾಗಬಿಂಬ ಪುನಃ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಆಶ್ಲೇಷಾ ಬಲಿ, ದೈವಂಗಳು, ಜನನಂದೈವ, ಶ್ರೀ ರಕ್ತೇಶ್ವರಿ, ಅರೆದ್ದರೆ ಪಂಜುರ್ಲಿ, ಬಬ್ಬರ್ಯ, ಬಬ್ಬರ್ಯ ಮಾಣಿಕ, ಪೊಟ್ಟ ದೈವಗಳ ಮತ್ತು ರಾಜನ್‌ದೈವ, ರಾಹು ಗುಳಿಗ, ಕೊರತಿ, ಮಳಿಯಾಲ ಗುಳಿಗ ದೈವಗಳ ಪುನಃ ಪ್ರತಿಷ್ಠೆ ಬ್ರಹ್ಮಕಲಶೋತ್ಸವ, ದೈವಗಳಿಗೆ ತಂಬಿಲ ಹಾಗೂ ಬೆಳಿಗ್ಗೆ ಗಂಟೆ 11 ರಿಂದ ಶ್ರೀ ಲಕ್ಷ್ಮೀಸಹಿತ ಸತ್ಯನಾರಾಯಣ ಕಲೋಕ್ತ ಆರಾಧನೆ ಪ್ರಸಾದ ವಿತರಣೆ, ಮಧ್ಯಾಹ್ನ ಗಂಟೆ 1 ರಿಂದ ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ ಗಂಟೆ 4ಕ್ಕೆ ಭಂಡಾರ ಆಗಮನ (ಕಲ್ಲಗದ್ದೆ ಗುತ್ತುವಿನಿಂದ ಚಂದಪ್ಪಾಡಿ ಚಾವಡಿಗೆ), ರಾತ್ರಿ ಗಂಟೆ 8ಕ್ಕೆ ಅನ್ನಸಂತರ್ಪಣೆ, ನೇಮೋತ್ಸವ 16 ದೈವಂಗಳು, ಜನನಂದೈವ, ಶ್ರೀ ರಕೇಶ್ವರಿ, ಅರೆದ್ದರೆ ಪಂಜುರ್ಲಿ, ಬಬ್ಬರ್ಯ, ಬಬ್ಬರ್ಯ ಮಾಣಿಕ, ಪೊಟ್ಟ ದೈವ, ರಾಜನ್ ದೈವ, ರಾಹು ಗುಳಿಗ, ಕೊರತಿ, ಮಳಿಯಾಲ ಗುಳಿಗ, ಕಲ್ಕುಡ-ಕಲ್ಲುರ್ಟಿ ಹಾಗೂ ಪರಿವಾರ ದೈವಗಳ ನೇಮೋತ್ಸವವು ನಡೆಯಲಿದೆ.

- Advertisement -

Related news

error: Content is protected !!