Wednesday, July 22, 2026
spot_imgspot_img
spot_imgspot_img

ದೆಹಲಿ: ಗಣರಾಜ್ಯೋತ್ಸವ ಹಿನ್ನೆಲೆ ಸುರಕ್ಷತಾ ಕ್ರಮ:ಅಪರಾಧಿಗಳ ಸುಳಿವು ಪತ್ತೆಗಾಗಿ ಪೊಲೀಸರಿಗೆ AI ಸ್ಮಾರ್ಟ್‌ ಕನ್ನಡಕ!

- Advertisement -
- Advertisement -

ನವದೆಹಲಿ: ಜ. 26, 77ನೇ ಗಣರಾಜ್ಯೋತ್ಸವ ದಿನಾಚರಣೆ ಹಿನ್ನಲೆ ಕರ್ತವ್ಯ ಪಥದಲ್ಲಿ ನಡೆಯಲಿರುವ ಪರೇಡ್‌ಗೂ ಮುನ್ನ ದೆಹಲಿ ಪೊಲೀಸರು ಸುರಕ್ಷತಾ ಕ್ರಮಗಳನ್ನ ಹೆಚ್ಚಿಸಿದ್ದಾರೆ. ಈ ಬಾರಿ ಪೊಲೀಸ್‌ ಇಲಾಖೆ ಬಿಡುಗಡೆ ಮಾಡಿರುವ ಅಲರ್ಟ್ ಪೋಸ್ಟರ್‌ಗಳಲ್ಲಿ ಮೊದಲ ಬಾರಿಗೆ ದೆಹಲಿಯ ಸ್ಥಳೀಯ ಭಯೋತ್ಪಾದಕನ ಚಿತ್ರವನ್ನ ಸೇರಿಸಲಾಗಿದೆ. ಭಯೋತ್ಪಾದಕನನ್ನ ಮೊಹಮ್ಮದ್ ರೆಹಾನ್ ಎಂದು ಗುರುತಿಸಲಾಗಿದ್ದು, ಅಲ್-ಖೈದಾ ಇನ್ ಇಂಡಿಯನ್ ಸಬ್‌ಕಾಂಟಿನೆಂಟ್ ಸಂಘಟನೆಗೆ ಸೇರಿದ್ದಾನೆ ಎನ್ನಲಾಗಿದೆ. ರೆಹಾನ್ ದೆಹಲಿ ಪೊಲೀಸ್ ಹಾಗೂ ಕೇಂದ್ರೀಯ ಗುಪ್ತಚರ ಏಜೆನ್ಸಿಗಳ ಕಣ್ತಪ್ಪಿಸಿ ಬಹುಕಾಲದಿಂದ ತಲೆಮರಿಸಿಕೊಂಡಿದ್ದಾನೆ. ಗಣರಾಜ್ಯೋತ್ಸವದ ದಿನದಂದು ಭಯೋತ್ಪಾದಕ ದಾಳಿಯ ಎಚ್ಚರಿಕೆ ಇರೋದ್ರಿಂದ ಆತನ ಪೋಸ್ಟರ್‌ ಪ್ರಕಟಿಸಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಪರಾಧಿ ಹಿನ್ನೆಲೆಯ ವ್ಯಕ್ತಿಗಳು ಅಥವಾ ಕಳ್ಳತನದ ವಾಹನಗಳನ್ನ ಗುರುತಿಸಿದ ತಕ್ಷಣ ಅಲರ್ಟ್ ನೀಡುವ ಎಐ ವ್ಯವಸ್ಥೆಯನ್ನ ನಿಯೋಜಿಸಲಾಗಿದೆ. ಅದಕ್ಕಾಗಿ ಪೊಲೀಸರಿಗೆ ಎಐ ಸ್ಮಾರ್ಟ್‌ ಕನ್ನಡಕಗಳನ್ನ ನೀಡಲಾಗಿದೆ. ಛತ್ರಿ ಪರ್ಫ್ಯೂಮ್‌ಗೆ ನಿಷೇಧ ಅತಿಥಿಗಳ ಸೌಕರ್ಯ ಮತ್ತು ಸುರಕ್ಷತೆಗಾಗಿ ಸುರಕ್ಷಾ ನಿಯೋಜನೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಸಮಾರಂಭ ಸ್ಥಳದೊಳಗೆ ಬ್ಯಾಗ್, ಬ್ರೀಫ್‌ಕೇಸ್, ಆಹಾರ-ಪಾನೀಯ, ಮೊಬೈಲ್ ಫೋನ್ ಎಲೆಕ್ಟ್ರಾನಿಕ್ ವಸ್ತುಗಳು, ಪವರ್ ಬ್ಯಾಂಕ್, ನೀರಿನ ಬಾಟಲ್, ಶಸ್ತ್ರಾಸ್ತ್ರಗಳು, ಚೂಪಾದ ವಸ್ತುಗಳು, ಉರಿಯಬಹುದಾದ ವಸ್ತುಗಳು, ಛತ್ರಿ, ಪರ್ಫ್ಯೂಮ್, ಆಟಿಕೆ ಶಸ್ತ್ರಾಸ್ತ್ರಗಳು ಮತ್ತು ಯಾವುದೇ ಸ್ಫೋಟಕಗಳನ್ನು ತರಲು ಸಂಪೂರ್ಣ ನಿಷೇಧಿಸಲಾಗಿದೆ.

- Advertisement -

Related news

error: Content is protected !!