350 ವರ್ಷಗಳ ಬಳಿಕ ಸಾನ್ನಿಧ್ಯವೃದ್ಧಿ ಬ್ರಹ್ಮಕಲಶಾಭಿಷೇಕ ಹಾಗೂ ದೈವಗಳ ನೇಮೋತ್ಸವದ ಜೊತೆ ಸಂಪನ್ನಗೊಳ್ಳಲು ಮಣಿಯಾಗುತ್ತಿದೆ ಈ ಕ್ಷೇತ್ರ





ಧರ್ಮನಗರ: ವೈದ್ಯನಾಥ ಮಲರಾಯ ಸಪರಿವಾರ ದೈವಗಳ ದೈವಸ್ಥಾನ ( ರಿ. ) ಮಲರಾಯ ಜೇರ ಧರ್ಮನಗರ- ಕಂಬಳಬೆಟ್ಟು ಕ್ಷೇತ್ರದಲ್ಲಿ ದಿನಾಂಕ 21-12-2024ನೇ ಶನಿವಾರದಿಂದ 25-12-2024ನೇ ಬುಧವಾರದವರೆಗೆ ಬ್ರಹ್ಮಶ್ರೀ ಆಲಂಪಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವೈದ್ಯನಾಥ ಮಲರಾಯ ಸಪರಿವಾರ ದೈವಗಳ ಸಾನಿಧ್ಯವೃದ್ಧಿ ಬ್ರಹ್ಮಕಲಶಾಭಿಷೇಕ ಮತ್ತು ನೇಮೋತ್ಸವ ಕಾರ್ಯಕ್ರಮ ನಡೆಯಲಿದೆ.






ದಿನಾಂಕ 21-12-2024ನೇ ಶನಿವಾರದಂದು ಬೆಳಿಗ್ಗೆ ಗಂಟೆ 7:00ಕ್ಕೆ ವೇ| ಮೂ| ಜಯರಾಮ ಜೋಯಿಸರು ಬಡೆಜ, ನಿತ್ಯ ತಂತ್ರಿಗಳು, ವೈದ್ಯನಾಥ ಮಲರಾಯ ಸಪರಿವಾರ ದೈವಗಳ ಸನ್ನಿಧಿ ಮಲರಾಯ ಜೇರ ಇವರು ಹಸಿರು ಹೊರೆಕಾಣಿಕೆ ರಥಕ್ಕೆ ಚಾಲನೆ ನೀಡಲಿದ್ದಾರೆ.

ನಂತರ ಶ್ರೀ ಜಯದುರ್ಗಾ ಪರಮೇಶ್ವರಿ ದೇವಿ ಸನ್ನಿಧಿ ಧರ್ಮನಗರ, ಶ್ರೀ ಶಾರದಾಂಬಾ ಭಜನಾ ಮಂದಿರ ಅಳಿಕೆಮಜಲು, ಉರಿಮಜಲು, ಪಾಂಡೇಲು, ಕುಂಡಡ್ಕ ಶ್ರೀ ವಿಷ್ಣುಮೂರ್ತಿ, ಕುಂಡಡ್ಕ ಶೆಡ್ಡು, ಮರುವಾಳ, ಬದನಾಜೆ, ರಜತಾದ್ರಿ ಚಾಮುಂಡೇಶ್ವರಿ ದೇವಸ್ಥಾನ ಮುಂಡ್ರಬೈಲು, ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ, ಶ್ರೀ ಸೀತಾ ರಾಮಾಂಜನೇಯ ಕ್ಷೇತ್ರ,ರಾಮನಗರ, ಮಿತ್ತೂರು., ಶ್ರೀ ಆದಿಪರಾಶಕ್ತಿ ಲಕ್ಷ್ಮೀ ನರಸಿಂಹ ದೇವಸ್ಥಾನ ಬೀಡಿನಮಜಲು, ಶ್ರೀ ಮಹಾದೇವಿ ದೇವಸ್ಥಾನ ಕಬಕ, ಕಬಕ ಅಡ್ಯಲಾಯ ದೈವಸ್ಥಾನದಿಂದ ಮಲರಾಯ ಜೇರಕ್ಕೆ ಹಸಿರು ಹೊರಕಾಣಿಕೆ ಸಾಗಿಬರಲಿದೆ.



ಪೂರ್ವಾಹ್ನ ಗಂಟೆ 11:15ಕ್ಕೆ ಅಡ್ಯಲಾಯ ದೈವಸ್ಥಾನ ಕಬಕದಲ್ಲಿ ಬಿ.ಜೆ.ಪಿ. ಮುಖಂಡರು ಅರುಣ್ ಕುಮಾರ್ ಪುತ್ತಿಲರವರು ಹಸಿರು ಹೊರೆಕಾಣಿಕೆಯ ಭವ್ಯ ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅಡ್ಯಲಾಯ ದೈವಸ್ಥಾನ ಕಬಕ ಇದರ ಅಧ್ಯಕ್ಷ ಸತೀಶ್ ರೈ ಡಿಂಬ್ರಿಗುತ್ತು ಉಪಸ್ಥಿತರಿರುವರು.
ಮಧ್ಯಾಹ್ನ 12:30 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀ ಮಹಾಲಕ್ಷ್ಮೀ ಕ್ಷೇತ್ರ, ಶ್ರೀಧಾಮ ಮಾಣಿಲ ಆಶೀರ್ವಚನ ನೀಡಲಿದ್ದಾರೆ. ವೈದ್ಯನಾಥ ಮಲರಾಯ ಸಪರಿವಾರ ದೈವಗಳ ದೈವಸ್ಥಾನ ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ವಸಂತಕುಮಾರ್ ಅಮೈ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಅರುಣ್ ಕುಮಾರ್ ಪುತ್ತಿಲ, ಬಿಜೆಪಿ ಮುಖಂಡರು, ಪುತ್ತೂರು, ಕೃಷ್ಣಪ್ಪ ಪೂಜಾರಿ ಪಾಂಡೇಲು, ಪುನೀತ್ ಮಾಡತ್ತಾರು ಅಧ್ಯಕ್ಷರು ವಿಟ್ಲಮುಡ್ನೂರು ಗ್ರಾಮ ಪಂಚಾಯತ್,ಮೋಹಿನಿ ಜಯಕರ ಅಧ್ಯಕ್ಷರು ಇಡ್ಕಿದು ಗ್ರಾಮ ಪಂಚಾಯತ್, ಉದಯ ಗೋವಿಂದಯ್ಯ ಅಧ್ಯಕ್ಷರು ಇಡ್ಕಿದು ಹಾಲು ಉತ್ಪಾದಕರ ಸಹಕಾರ ಸಂಘ, ರಾಮಚಂದ್ರ ನಾಯಕ್ ಅಧ್ಯಕ್ಷರು ಕುಂಡಡ್ಕ ಹಾಲು ಉತ್ಪಾದಕರ ಸಹಕಾರ ಸಂಘ, ಶ್ರೀಧರ್ ಭಟ್ ಕೂವೆತ್ತಿಲ ಅಧ್ಯಕ್ಷರು ಮಿತ್ತೂರು ಹಾಲು ಉತ್ಪಾದಕರ ಸಹಕಾರ ಸಂಘ, ಬಾಲಸುಬ್ರಹ್ಮಣ್ಯ ಭಟ್ ಅಧ್ಯಕ್ಷರು ಬದನಾಜೆ ಹಾಲು ಉತ್ಪಾದಕರ ಸಹಕಾರ ಸಂಘ, ಲಿಂಗಪ್ಪ ಗೌಡ ಎಸ್, ಅಧ್ಯಕ್ಷರು ಸೂರ್‍ಯ ಹಾಲು ಉತ್ಪಾದಕರ ಸಹಕಾರ ಸಂಘ, ದಾಮೋದರ ನೆಕ್ಕರೆ, ಅಧ್ಯಕ್ಷರು ಕಬಕ ಹಾಲು ಉತ್ಪಾದಕರ ಸಹಕಾರ ಸಂಘ, ಸದಾಶಿವ ವಿ.ಯಸ್. ಅಡ್ಯಾಲುಕರೆ, ಪ್ರವೀಣ್ ಕುಮಾರ್ ಶೆಟ್ಟಿ ಅಳಕೆಮಜಲು ,ಉದ್ಯಮಿಗಳು ,ನರ್ಸಪ್ಪ ಪೂಜಾರಿ ಅಧ್ಯಕ್ಷರು ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘ, ಕೃಷ್ಣ ಭಟ್ ಮೀರಾವನ, ಅಧ್ಯಕ್ಷರು ಉಳ್ಳಾಕುಲು ಮಲರಾಯ ದೈವಸ್ಥಾನ ಕೆದಿಲ, ವಿ. ಚಂದ್ರಶೇಖರ ನಾಯ್ಕ್, ಅಧ್ಯಕ್ಷರು ಶ್ರೀ ಧರ್ಮಸೇವಾ ವಿಶ್ವಸ್ತ ಮಂಡಳಿ ರಿ.ಕಬಕ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ರಾತ್ರಿ 7:00 ಗಂಟೆಗೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀ ಗುರುದೇವದತ್ತ ಸಂಸ್ಥಾನಮ್, ಶ್ರೀ ಕ್ಷೇತ್ರ ಒಡಿಯೂರು ಇವರು ಆಶೀರ್ವಚನ ನೀಡಲಿದ್ದಾರೆ. ಮುಳಿಯ ಕೇಶವ ಪ್ರಸಾದ್, ನಿಕಟಪೂರ್ವ ಅಧ್ಯಕ್ಷರು, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಅಶೋಕ್ ಕುಮಾರ್ ರೈ ಶಾಸಕರು ಪುತ್ತೂರು ವಿಧಾನಸಭಾ ಕ್ಷೇತ್ರ, ಕೃಷ್ಣಯ್ಯ ಕೆ. ವಿಟ್ಲ ಅರಮನೆ, ರಾಧಾಕೃಷ್ಣ ರೈ ಬೂಡಿಯಾರು, ಮಾಜಿ ಅಧ್ಯಕ್ಷರು, ಎ.ಪಿ.ಎಂ.ಸಿ.ಪುತ್ತೂರು, ಚಂದ್ರಹಾಸ ಶೆಟ್ಟಿ, ಅಧ್ಯಕ್ಷರು ಕೋಟಿ- ಚೆನ್ನಯ ಕಂಬಳ ಸಮಿತಿ ಪುತ್ತೂರು, ಈಶ್ವರ ಭಟ್ ಪಂಜಿಗುಡ್ಡೆ,ಅಧ್ಯಕ್ಷರು, ಬನ್ನೂರು ರೈತರ ಸೇವಾ ಸಹಕಾರಿ ಸಂಘ, ಲೋಕನಾಥ ಶೆಟ್ಟಿ ಮರುವಾಳ, ಶ್ರೀಧರ ಶೆಟ್ಟಿ ಗುಬ್ಯ, ಮೇಗಿನಗುತ್ತು, ಜಗನ್ನಾಥ ಸಾಲ್ಯಾನ್, ಅಧ್ಯಕ್ಷರು , ಗ್ರಾಮೀಣ ಬ್ಯಾಂಕ್ ವಿಟ್ಲ, ಡಾ. ಕೆ.ಬಿ. ರಾಜಾರಾಮ್, ಗಿರಿಜಾ ಡೆಂಟಲ್ ಕ್ಲಿನಿಕ್ ಉಪ್ಪಿನಂಗಡಿ, ಪದ್ಮನಾಭ ಕೊಂಕೋಡಿ, ಮಾಜಿ ಅಧ್ಯಕ್ಷರು, ಕ್ಯಾಂಪ್ಕೋ ಲಿ. , ಸುಂದರ ಭಟ್ ಜತ್ತನಕೋಡಿ, ಅಧ್ಯಕ್ಷರು ವನದುರ್ಗಾ ಸೇವಾ ಟ್ರಸ್ಟ್ ರಿ. ದೇಂತಡ್ಕ, ಸುರೇಶ್ ಮುಕ್ಕುಡ, ನಿಕಟಪೂರ್ವ ಆಡಳಿತ ಮುಕ್ತೇಸರರು, ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಕೋಲ್ಪೆ, ಸತೀಶ್ ಆಳ್ವ, ಇರಾ ಬಾಳಿಕೆ, ವಿಶ್ವನಾಥ ಅಮೈ, ಅಧ್ಯಕ್ಷರು ಸಿದ್ಧಿವಿನಾಯಕ ಯುವಕ ಮಂಡಲ ಧರ್ಮನಗರ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಂಜೆ 5:00ಕ್ಕೆ ತಂತ್ರಿವರ್ಯರ ಆಗಮನ, ಪೂರ್ಣಕುಂಭ ಸ್ವಾಗತ ನಡೆಯಲಿದೆ. 6:00ಕ್ಕೆ ವಾಸ್ತುಶಿಲ್ಪಿ ಕೃಷ್ಣ ಪ್ರಸಾದ್ ಮುನಿಯಂಗಳ ಇವರಿಂದ ಪ್ರಾಸಾದ ಪರಿಗ್ರಹ ನಡೆಯಲಿದೆ. 6:15ಕ್ಕೆ ಸಾಮೂಹಿಕ ಪ್ರಾರ್ಥನೆ, ಆಚಾರ್‍ಯ ವರಣಂ, ಪುಣ್ಯಾಹಂ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತುಕಲಶ ಪೂಜೆ, ವಾಸ್ತು ಬಲಿ, ವಾಸ್ತು ಕಲಶಾಭಿಷೇಕ, ರಾತ್ರಿ ಪೂಜೆ ನಡೆದು, ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 6:00 ರಿಂದ ಧರ್ಮನಗರ ಬಾಲಗೋಕುಲ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ, ಹಾಗೂ ರಾತ್ರಿ 8:30ರಿಂದ ವಿಠಲ ನಾಯಕ್ ಮತ್ತು ಬಳಗದವರಿಂದ ಗೀತಾ- ಸಾಹಿತ್ಯ- ವೈವಿಧ್ಯ ಕಾರ್ಯಕ್ರಮ ನಡೆಯಲಿದೆ.
ದಿನಾಂಕ 22-12-2024ನೇ ಆದಿತ್ಯವಾರದಂದು ಬೆಳಿಗ್ಗೆ ಗಂಟೆ 6:00ರಿಂದ ಗಣಪತಿ ಹವನ, ಸ್ಥಳ ಶುದ್ಧಿ, ಬಿಂಬ ಶುದ್ಧಿ, ಕುಂಭೇಶ ಕರ್ಕರಿ, ಜಲದ್ರೋಣಿ, ಕಲಶ ಪೂಜೆ, ಶಯ್ಯಾ ಪೂಜೆ, ನಿದ್ರಾಕಲಶ ಪೂಜೆ, ವಿದ್ರೇಶರ ಕಲಶ ಪೂಜೆ, ಅನುಜ್ಞಾಕಲಶ ಪೂಜೆ, ಪ್ರಾರ್ಥನೆ, ಜೀವೋದರಾಸನ, ಶಯ್ಯೆಯಲ್ಲಿ ಜೀವಕಲಶಗಳ ಮಹಾಪೂಜೆ ನಡೆದು ಅನ್ನ ಸಂತರ್ಪಣೆ ನಡೆಯಲಿದೆ.

ಸಂಜೆ ಗಂಟೆ 5:00 ರಿಂದ ಬಿಂಬ ಶುದ್ಧಿ, ಸಾನಿಧ್ಯವೃದ್ಧಿ ಬ್ರಹ್ಮಕಲಶ ಪೂಜೆ, ಅಧಿವಾಸ ಹೋಮ, ಮಂಡಲ ಪೂಜೆ, ಧ್ಯಾನಾಧಿವಾಸ, ಕಲಶಾಧಿವಾಸ, ಅಧಿವಾಸ ಬಲಿ, ರಾತ್ರಿ ಪೂಜೆ ನಡೆದ ಬಳಿಕ ಪ್ರಸಾದ ಭೋಜನ ನಡೆಯಲಿದೆ.
ಮಧ್ಯಾಹ್ನ 11:30ಕ್ಕೆ ಸುಧಾಕರ್ ಶೆಟ್ಟಿ ಬೀಡಿನಮಜಲು, ಅಧ್ಯಕ್ಷರು, ಇಡ್ಕಿದು ಸೇವಾ ಸಹಕಾರಿ ಸಂಘ ನಿ. ಇವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಶ್ರೀಕಾಂತ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಇವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಸಂಸದರು ಮಂಗಳೂರು ಲೋಕಸಭಾ ಕ್ಷೇತ್ರ, ಕಿಶೋರ್ ಕೂಡ್ಗಿ, ಅಧ್ಯಕ್ಷರು, ಕ್ಯಾಂಪ್ಕೋ ಲಿ. ಮಂಗಳೂರು,ಮಿತ್ರಂಪಾಡಿ ಜಯರಾಮ ರೈ, ಅಧ್ಯಕ್ಷರು, ಇಂಡಿಯ ಸೋಶ್ಯಲ್ & ಕಲ್ಚರಲ್ ಸೆಂಟರ್ ಅಬುದಾಬಿ, ಯಾಮಿನಿ ಶ್ರೀದೇವಿ ಮಲ್ಲಿ, ಕುಂಡಡ್ಕ, ಡಾ. ಬಿ. ಸಂಜೀವ ರೈ ಡೀನ್ ಫಾದರ್‍ಮುಲ್ಲರ್ ಆಸ್ಪತ್ರೆ ಮಂಗಳೂರು, ರವೀಂದ್ರ ಅಡ್ಯಂತಾಯ ಕುಳಗುತ್ತು, ಕೆ.ಯೋಗಿಶ್ ಕುಡ್ವ, ಕುಡ್ವ ಮನೆತನ ಕುಂಡಡ್ಕ, ಕೇಶವ ಅಮೈ, ಮ್ಹಾಲಕರು, ಎಸ್. ಆರ್. ಕೆ. ಲ್ಯಾಡರ್‍ಸ್ ಪುತ್ತೂರು, ದಯಾನಂದ ಶೆಟ್ಟಿ ಉಜಿರೆಮಾರ್, ಅಧ್ಯಕ್ಷರು ಬಿ.ಜೆ.ಪಿ. ಪುತ್ತೂರು ಗ್ರಾಮಾಂತರ ಮಂಡಲ, ಸಹಜ್ ರೈ ಬಳಜ್ಜ, ಸ್ಥಾಪಕಾಧ್ಯಕ್ಷರು ವಿಜಯ ಸಾಮ್ರಾಟ್ ಪುತ್ತೂರು, ಸುಭಾಷ್ ನಾಯಕ್, ಉದ್ಯಮಿಗಳು ವಿಟ್ಲ, ಪ್ರಕಾಶ್ ಕೆ.ಯಸ್. ಉರಿಮಜಲು, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರು, ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ, ದಿನೇಶ್ ಮಾಡ್ತೇಲು, ಆಕೃತಿ ಕನ್‌ಸ್ಟ್ರಕ್ಷನ್ ಕಂಬಳಬೆಟ್ಟು, ರಮೇಶ್ ರೈ ಕುಂಡಡ್ಕ, ಮಾಧವ ಮಾವೆ ಸಾಲೆತ್ತೂರು,ಉದ್ಯಮಿಗಳು, ರಘು ಸಪಲ್ಯ ಪಾಣೆಮಂಗಳೂರು, ಅಧ್ಯಕ್ಷರು ಗಾಣಿಗರ ಸಂಘ, ಬಂಟ್ವಾಳ ತಾಲೂಕು, ವೇಣುಗೋಪಾಲ ಶೆಟ್ಟಿ ಮರುವಾಳ, ಅಧ್ಯಕ್ಷರು, ಶ್ರೀ ವಿಷ್ಣುಮೂರ್ತಿ ಆಡಳಿತ ಸಮಿತಿ, ಈಶ್ವರ ಗೌಡ ನಾಯ್ತೊಟ್ಟು, ಮಾಜಿ ಅಧ್ಯಕ್ಷರು, ಹಾ. ಉ. ಸ. ಸಂಘ, ಸೂರ್‍ಯ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ರಾತ್ರಿ ನಡೆಯುವ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಬಂಗಾರು ಅರಸರು, ವಿಟ್ಲ ಅರಮನೆ ಇವರ ಅಧ್ಯಕ್ಷತೆ ವಹಿಸಲಿದರೆ. ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಶ್ರೀ ನಿತ್ಯಾನಂದ ಯೋಗಾಶ್ರಮ, ಕೊಂಡೆವೂರು ಇವರು ಆಶೀರ್ವಚನ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಜೀವ ಮಠಂದೂರು, ಮಾಜಿ ಶಾಸಕರು ಪುತ್ತೂರು, ಮಲ್ಲಿಕಾ ಪಕ್ಕಳ, ಸದಸ್ಯರು ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆ, ಲೋಕೇಶ್ ಪೂಜಾರಿ ಕೋಡಿಕಲ್, ಸ್ಥಾಪಕಾಧ್ಯಕ್ಷರು, ತುಳುನಾಡ ಬಿರ್ವೆರ್ ಸುರತ್ಕಲ್, ಹಾರೆಕೆರೆ ನಾರಾಯಣ ಭಟ್, ಅಧ್ಯಕ್ಷರು,ಶ್ರೀ ರಾಮಚಂದ್ರಾಪುರ ಶಾಖಾ ಮಠ, ಪೇರಾಜೆ ಮಾಣಿ, ಪ್ರವೀಣ್ ಕುಮಾರ್, ನಿರ್ದೇಶಕರು, ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆ, ಬಿ.ಸಿ. ಟ್ರಸ್ಟ್ ಪುತ್ತೂರು ದ.ಕ, ಶಶಿಕುಮಾರ್ ಬಾಲ್ಯೊಟ್ಟು, ನಿರ್ದೇಶಕರು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿ. ಮಂಗಳೂರು, ದಿವಾಕರ ದಾಸ್ ನೇರ್ಲಾಜೆ, ಆಡಳಿತ ನಿರ್ದೇಶಕರು, ಎಸ್.ಎಲ್.ವಿ. ಗ್ರೂಪ್ಸ್ ಮೈಸೂರು, ಹಾಲ್ತೋಟ ಶಂಕರ ಭಟ್, ಖ್ಯಾತ ಉದ್ಯಮಿಗಳು ಬೆಂಗಳೂರು, ಪ್ರಸನ್ನ ಪಡಾರು, ಹಿರಿಯ ಲೆಕ್ಕ ಪರಿಶೋಧಕರು, ಬೆಂಗಳೂರು, ರಾಜಾರಾಮ್ ಶೆಟ್ಟಿ ಕೋಲ್ಪೆಗುತ್ತು, ತಾರಾನಾಥ ಬೋಳಿಗದ್ದೆ, ಸಾನ್ವಿ ಕನ್‌ಸ್ಟ್ರಕ್ಷನ್ ವಿಟ್ಲ, ಲೋಕೇಶ್ ಶೆಟ್ಟಿ ಕಲ್ಲಂದಡ್ಕ, ಆಡಳಿತ ನಿರ್ದೇಶಕರು, ನವಚೇತನ ಚಿಟ್‌ಫಂಡ್ ಮಂಗಳೂರು, ಜಗದೀಶ ಪೂಜಾರಿ, ಅಧ್ಯಕ್ಷರು ಶ್ರೀ ಶಾರದಾಂಬಾ ಭಜನಾ ಮಂದಿರ ಅಳಕೆಮಜಲು, ಸದಾಶಿವ ಆಚಾರ್ಯ ಕೈಂತಿಲ, ಶ್ರವಣ ಜ್ಯುವೆಲ್ಲರ್ ವಿಟ್ಲ, ಸುಧೀರ್‍ಕುಮಾರ್ ಶೆಟ್ಟಿ ಮಿತ್ತೂರು, ಮಾಜಿ ಉಪಾಧ್ಯಕ್ಷರು, ಇಡ್ಕಿದು ಗ್ರಾಮ ಪಂಚಾಯತ್ ಭಾಗವಹಿಸಲಿದ್ದಾರೆ.
ಬೆಳಿಗ್ಗೆ ಗಂಟೆ 10:30ಕ್ಕೆ ಜೈದೀಪ್ ಅಮೈ ನೇತೃತ್ವದ ಕಲಾತಪಸ್ವಿ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 6:00 ವಿದುಷ ಅನುರಾಧ ಅಡ್ಕಸ್ಥಳ ಮತ್ತು ಬಳಗದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ಬಳಿಕ ರಾತ್ರಿ 8:30ಕ್ಕೆ ಉಮೇಶ್ ಮಿಜಾರು ಸಾರಥ್ಯದ ನಮ್ಮ ಕಲಾವಿದೆರ್ ಬೆದ್ರ ಅಭಿನಯದ ತುಳು ಹಾಸ್ಯಮಯ ನಾಟಕ ’ಮನಸ್ ಮೈದಾನ’ ನಡೆಯಲಿದೆ.
ದಿನಾಂಕ 23-12-2024ನೇ ಸೋಮವಾರದಂದು ಬೆಳಿಗ್ಗೆ 6:00ಕ್ಕೆ ಮಹಾಗಣಪತಿ ಹವನ, ಪ್ರಾಸಾದ ಪ್ರತಿಷ್ಠೆ, ಪೀಠ ಪ್ರತಿಷ್ಠೆ ನಡೆಯಲಿದೆ. ನಂತರ ಪೂರ್ವಾಹ್ನ ಗಂಟೆ 9:18 ರಿಂದ 10:18 ರ ಮಕರ ಲಗ್ನ ಸುಮುಹೂರ್ತದಲ್ಲಿ ಕಂಭೇಶ ಕಲಶ ಅಭಿಷೇಕ, ನಿದ್ರಾಕಲಶ ಅಭಿಷೇಕ, ಜೀವ ಕಲಶ ಅಭಿಷೇಕ, ಸಾನಿಧ್ಯವೃದ್ಧಿ ಬ್ರಹ್ಮಕಲಶ ಅಭಿಷೇಕ, ಪ್ರತಿಷ್ಠಾ ಬಲಿ, ದೈವಗಳಿಗೆ ಬ್ರಹ್ಮಕಲಶದ ಮಹಾತಂಬಿಲ ಸೇವೆ ನಡೆಯಲಿದೆ. ಬಳಿಕ ಮಹಾಪೂಜೆ, ನಿತ್ಯವಿಧಿ ನಿರ್ಣಯ, ನಡೆ ಪ್ರಾರ್ಥನೆ, ಮಹಾ ಮಂತ್ರಾಕ್ಷತೆ, ಮಹಾ ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 12:30 ರಿಂದ ಮಹಾಅನ್ನಸಂತರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾದಿ ಬೆಳಗ್ಗೆ 10.30 ರಿಂದ 12 ರವರೆಗೆ ವರುಣ್ ಆಚಾರ್ಯ ಬಂಟ್ವಾಳ ಮತ್ತು ಬಳಗದವರಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಮಧ್ಯಾಹ್ನ 12 ರಿಂದ ಗಡಿನಾಡ ಕನ್ನಡ ಧ್ವನಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಎಲ್ ಕೆ ಧರಣ್ ಮಾಣಿ ಇವರಿಂದ ಶ್ರೀ ಹರಿ ನಾಮ ಸಂಕೀರ್ತನೆ ನಡೆಯಲಿದೆ. ಗಂಟೆ 6:30 ರಿಂದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವ್ರಜ ಕ್ಷೇತ್ರ ಪಾವಂಜೆ, ಹಳೆಯಂಗಡಿ ಇವರಿಂದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ.

ದಿನಾಂಕ 24-12-2024ನೇ ಮಂಗಳವಾರದಂದು ದೈವಗಳ ಭಂಡಾರ ಬರುವುದು ಮತ್ತು ನೇಮೋತ್ಸವ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಗಂಟೆ 2:00ಕ್ಕೆ ಡೆಚ್ಚಾರು ಮಲರಾಯ ದೈವದ ಭಂಡಾರ ಸನ್ನಿಧಿಯಲ್ಲಿ ತಂಬಿಲ ಸೇವೆ, ಪ್ರಾರ್ಥನೆ ಮತ್ತು ಭಂಡಾರ ಹೊರಡುವುದು. ಸಂಜೆ 4:00ಕ್ಕೆ ಜೈನೆರಕೋಡಿ ಮೂವರ್ ದೈವಂಗಳು ಭಂಡಾರ ಸನ್ನಿಧಿಯಲ್ಲಿ ಪ್ರಾರ್ಥನೆ, ಭಂಡಾರ ಹೊರಡುವುದು. ಸಂಜೆ 5:10ಕ್ಕೆ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬಳಿ ಭಂಡಾರ ಬರುವುದು, 6:00ಕ್ಕೆ ಕುಳಗುತ್ತು ಚಾವಡಿಯಲ್ಲಿ ಪ್ರಾರ್ಥನೆ, ವೈದ್ಯನಾಥನ ಭಂಡಾರ ಹೊರಡುವುದು, 6:45ಕ್ಕೆ ಉರಿಮಜಲು ನಡುಸಾದಿ (ನಡುದಾರಿ) ಯಲ್ಲಿ ವೈದ್ಯನಾಥ, ಮಲರಾಯ, ಮೂವರ್‌ದೈವಂಗಳು ಸಪರಿವಾರ ದೈವಗಳ ಭಂಡಾರವನ್ನು ಮೂರು ಗ್ರಾಮಗಳ ಸಮಸ್ತ ಭಕ್ತರು ಎದುರುಗೊಳ್ಳುವುದು, 7:30ಕ್ಕೆ ಮಲರಾಯ ಜೇರಕ್ಕೆ ಭಂಡಾರದ ಆಗಮನ, ರಾತ್ರಿ ಗಂಟೆ 9:00ಕ್ಕೆ ವೈದ್ಯನಾಥ ನೇಮೋತ್ಸವ ನಡೆಯಲಿದೆ. ರಾತ್ರಿ 12:00ಕ್ಕೆ ಮೂವರ್ ದೈವಂಗಳಿಗೆ ನೇಮೋತ್ಸವ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 7 ಗಂಟೆಯಿಂದ ಶಿವಂ ಡ್ಯಾನ್ಸ್ ಅಕಾಡೆಮಿ ವಿಟ್ಲ ಇವರಿಂದ ನೃತ್ಯ ಸಂಭ್ರಮ ನಡೆಯಲಿದೆ.
ದಿನಾಂಕ 25-12-2024ನೇ ಬುಧವಾರದಂದು ಬೆಳಿಗ್ಗೆ ಗಂಟೆ 10:00ಕ್ಕೆ ಮಲರಾಯ ದೈವದ ನೇಮೋತ್ಸವ ನಡೆಯಲಿದೆ. ಸಂಜೆ ಗಂಟೆ 3:00ಕ್ಕೆ ಪ್ರಧಾನ ದೈವಗಳ ಭಂಡಾರವು ಮೂಲಸ್ಥಾನಕ್ಕೆ ಹೊರಡುವುದು. ರಾತ್ರಿ 8:00 ಗಂಟೆಗೆ ಕೊರತ್ತಿ, ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ.



ಎಲ್ಲಾ ದಿನ ಅನ್ನಸಂತರ್ಪಣೆ ವ್ಯವಸ್ಥೆಯನ್ನು ಧರ್ಮನಗರ ಸಮಾಜ ಮಂದಿರದಲ್ಲಿ ಮಾಡಲಾಗುವುದು.








