- Advertisement -
- Advertisement -






ಬೆಂಗಳೂರು: ರಾಜ್ಯ ಸರ್ಕಾರ ವಿದ್ಯುತ್ ದರವನ್ನು ಏರಿಕೆ ಮಾಡಿದ್ದು, ಒಂದು ಯೂನಿಟ್‌ಗೆ 56 ಪೈಸೆ ಹೆಚ್ಚಳ ಮಾಡಿ ಕೆಇಆರ್‌ಸಿ ಆದೇಶ ಹೊರಡಿಸಿದೆ.
ನೂತನ ದರ ಮೇ ತಿಂಗಳಿನಿಂದ ಅನ್ವಯ ಆಗಲಿದ್ದು, 2024-25 ಆರ್ಥಿಕ ವರ್ಷದಲ್ಲಿ 34,084 ಕೋಟಿ ಕೆಇಆರ್‌ಸಿ ಆದಾಯ ನಿರೀಕ್ಷೆ ಮಾಡಿತ್ತು. ಆದರೆ 32,019 ಕೋಟಿಯಷ್ಟೇ ಆದಾಯ ಬಂದಿದೆ. ಹೀಗಾಗಿ 2,068 ಕೋಟಿ ಹಣದ ಕೊರತೆಯನ್ನ ಗ್ರಾಹಕರಿಂದ ಸಂಗ್ರಹಿಸಲು ಕೆಇಆರ್‌ಸಿ ಆದೇಶ ಮಾಡಿದೆ.
ಒಂದು ಯೂನಿಟ್‌ಗೆ 56 ಪೈಸೆ ಹೆಚ್ಚಳ ಮಾಡಿ ಆದೇಶಿಸಿದ್ದು, ಎಸ್ಕಾಂ ದರ ಹೆಚ್ಚಿಸುವಂತೆ ಸರ್ಕಾರಕ್ಕೆ ಕೆಇಆರ್‌ಸಿ ಮನವಿ ಮಾಡಿತ್ತು ಎಂದು ವರದಿ ಮೂಲಕ ತಿಳಿದುಬಂದಿದೆ.
- Advertisement -








