


ಬೆಂಗಳೂರು: ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಭ್ರಷ್ಟಾಚಾರ ನಿಗ್ರಹ ದಳದ ಸಿಬ್ಬಂದಿ ಎಂದು ನಂಬಿಸಿ 24 ಲಕ್ಷ ರೂ. ದರೋಡೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 9 ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಕೃಷ್ಣಕುಮಾರ್ ರೆಡ್ಡಿ, ಅಹ್ಮದ್ ಷರೀಫ್, ವೇಣುಗೋಪಾಲ್, ಸಂಪಂಗಿರಾಮ, ನಾರಾಯಣಸ್ವಾಮಿ ಸೇರಿದಂತೆ ಒಟ್ಟು 9 ಜನರೆಂದು ಗುರುತಿಸಲಾಗಿದೆ.ಘಟನೆ ಹೇಗೆ ನಡೆಯಿತು?ಒಡವೆ ಮಾರಾಟ ಮಾಡಿ ಹಾಗೂ ಸಾಲ ಮಾಡಿ 24 ಲಕ್ಷ ರೂ. ಸಂಗ್ರಹಿಸಿದ್ದ ಶಂಕರಪ್ಪ ಅವರು ಹಣದ ಬ್ಯಾಗ್‌ನ್ನು ತೆಗೆದುಕೊಂಡು ತೆರಳುತ್ತಿದ್ದ ವೇಳೆ, ‘ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಭ್ರಷ್ಟಾಚಾರ ನಿಗ್ರಹ ದಳ’ ಎಂಬ ಬೋರ್ಡ್ ಅಂಟಿಸಿದ್ದ ಕಾರಿನಲ್ಲಿ ಬಂದ ಖದೀಮರು ತಡೆದಿದ್ದಾರೆ.“ಹಣ ಎಲ್ಲಿಂದ ಬಂದಿದೆ?” ಎಂದು ವಿಚಾರಣೆ ನಡೆಸುವ ನೆಪದಲ್ಲಿ ಬ್ಯಾಗ್ ಕಸಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.ಸಿಸಿ ಟಿವಿ ಸುಳಿವಿನಿಂದ ಬಂಧನಘಟನೆ ಬಳಿಕ ದೂರು ಸ್ವೀಕರಿಸಿದ ಕರ್ನಾಟಕ ಪೊಲೀಸ್ ತಂಡ ತನಿಖೆ ಆರಂಭಿಸಿತು. ಸುತ್ತಮುತ್ತಲಿನ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ವಾಹನದ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ.ಈ ಕಾರ್ಯಾಚರಣೆಯಲ್ಲಿ ದೇವನಹಳ್ಳಿ ಪೊಲೀಸ್ ಠಾಣೆ ಅಧಿಕಾರಿಗಳು ಪ್ರಮುಖ ಪಾತ್ರವಹಿಸಿದ್ದಾರೆ. ಪೊಲೀಸರ ಶೀಘ್ರ ಕ್ರಮಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.







