Monday, July 20, 2026
spot_imgspot_img
spot_imgspot_img

ಸಂಗಮ ಯುವಕ ಮಂಡಲ (ರಿ) ಪಡಿಬಾಗಿಲು ಆಶ್ರಯದಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ

- Advertisement -
- Advertisement -

ಸಂಗಮ ಯುವಕ ಮಂಡಲ (ರಿ) ಪಡಿಬಾಗಿಲು ಇದರ ಆಶ್ರಯದಲ್ಲಿ ಕಂಪಾನಿಯೋ ನೆಮ್ಮದಿ ವೆಲ್ನೆಸ್ ಸೆಂಟರ್ ಪುತ್ತೂರು ಇದರ ಸಹಭಾಗಿತ್ವದಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ ಪಡಿಬಾಗಿಲು ಸಂಗಮ ಯುವಕ ಮಂಡಲದಲ್ಲಿ ಉದ್ಘಾಟನೆಗೊಂಡಿತು.

ಉದ್ಯಮಿ ಪ್ರಭಾಕರ ಶೆಟ್ಟಿ ದಂಬೆಕಾನ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಸಂದೇಶ್ ಕೆ ಇವರು ಅಧ್ಯಕ್ಷತೆ ವಹಿಸಿದರು.ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಪದ್ಮನಾಭ ಪೂಜಾರಿ ಅಳಿಕೆ,ಶ್ರೀ ಬಾಲಕೃಷ್ಣ ಕಾರಂತ ಎರುಂಬು,ಐತಪ್ಪ ನಾಯ್ಕ್ ಪಡಿಬಾಗಿಲು,ಜಗಜೀವನ್ ರಾಮ್ ಶೆಟ್ಟಿ ಮೈರಾ,ನೆಮ್ಮದಿ ವೆಲ್ನೆಸ್ ಸೆಂಟರ್ ಮಾಲಕ ಪ್ರಭಾಕರ ಸಾಲ್ಯಾನ್ ಬಾಕಿಲ ಗುತ್ತು ಉಪಸ್ಥಿತರಿದ್ದರು.

ತಿಮ್ಮಪ್ಪ ಮಾಸ್ಟರ್ ಕೇಪು ಕಾರ್ಯಕ್ರಮ ನಿರೂಪಿಸಿದರು. ಶೀಮತಿ ನಳಿನಿ ಪ್ರಾರ್ಥನೆ ನೆರವೇರಿಸಿದರು. ಶ್ರೀಮತಿ ಅಮಿತ ವಂದಿಸಿದರು. ಪ್ರಶಾಂತ್ ಪೂಜಾರಿ ನೀರ್ಕಜೆ ಸಹಕರಿಸಿದರು. ಈ ಶಿಬಿರವು ಉಚಿತವಾಗಿದ್ದು ಹದಿನೈದು ದಿನ ನಡೆಯಲಿದೆ. ಶಿಬಿರದ ಸದುಪಯೋಗ ಪಡೆಯುವಂತೆ ವಿನಂತಿಸಲಾಗಿದೆ.

- Advertisement -

Related news

error: Content is protected !!