Monday, July 20, 2026
spot_imgspot_img
spot_imgspot_img

ಕಡಂಬು: ದ.ಕ.ಜಿ.ಪಂ.ಹಿ.ಪ್ರಾ ಶಾಲೆಯಲ್ಲಿ ಎಂ.ಆರ್.ಪಿ.ಎಲ್ ನ ಸಿ.ಎಸ್.ಆರ್ ಅನುದಾನದಿಂದ ಬಿಡುಗಡೆಯಾದ ಶೌಚಾಲಯ ಉದ್ಘಾಟನೆ

- Advertisement -
- Advertisement -

ಕಡಂಬು: ದ.ಕ.ಜಿ.ಪಂ.ಹಿ.ಪ್ರ ಶಾಲೆ ಕಡಂಬು ಇಲ್ಲಿಗೆ ಎಂ.ಆರ್.ಪಿ.ಎಲ್ ನ ಸಿ.ಎಸ್.ಆರ್ ರೂ.12 ಲಕ್ಷ ಅನುದಾನದಿಂದ ಬಿಡುಗಡೆಯಾದ ಶೌಚಾಲಯದ ಉದ್ಘಾಟನೆಯು ದಿನಾಂಕ:16.12.2025 ರಂದು ನಡೆಯಿತು.

ಗ್ರಾಮ ಪಂಚಾಯತ್‌ ಅಧ್ಯಕ್ಷ ಜಯಂತ.ಪಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಎಂಆರ್‌ಪಿ ಎಲ್ ಸಂಸ್ಥೆಯಿಂದ ಆಗಮಿಸಿದ ಸಿ.ಎಸ್.ಆರ್ ಮ್ಯಾನೇಜರ್ ಶ್ರೀ ಕೇಶವ , ಈ ಅನುದಾನ ಬಿಡುಗಡೆಯಾಗಲು ಸಹಕರಿಸಿದ ನಿಕಟಪೂರ್ವ ಹಣಕಾಸು ವಿಭಾಗದ ವ್ಯವಸ್ಥಾಪಕ ಪಿ.ವಿ ಅನಿಲ್ ಕುಮಾರ್, ಲಯನ್ಸ್ ಕ್ಲಬ್ 317D ಇದರ ಜಿಲ್ಲಾ ಸಂಪರ್ಕ ಅಧಿಕಾರಿ ಜಿಲ್ಲಾ ರಾಜ್ಯ ಪ್ರಶಸ್ತಿ ಪುರಸ್ಕೃತ ಸುದರ್ಶನ್ ಪಡಿಯಾರ್, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಸ್ಥಾಪಕಾಧ್ಯಕ್ಷರು ಪ್ರಸ್ತುತ ಕೋಶಾಧಿಕಾರಿ ಸಂದೇಶ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯ ಮಹಮ್ಮದ್‌, ಶ್ರೀಮತಿ ನೆಬಿಸ, ಲಯನ್ಸ್ ಕ್ಲಬ್ ವಿಟ್ಲ ಸಿಟಿಯ ಕಾರ್ಯದರ್ಶಿ ದಿನಕರ ಆಳ್ವ, ಲಯನ್ಸ್‌ನ ವಲಯಾಧ್ಯಕ್ಷ ಮಹಮ್ಮದ್ ಇಕ್ಬಾಲ್, ಎಸ್.ಡಿ. ಎಂ.ಸಿ ಅಧ್ಯಕ್ಷ ಬಿ.ಎಂ ಹಸೈನಾರ್ ಶಾಲಾ ನೂತನ ಮುಖ್ಯೋಪಾಧ್ಯಾಯ ಗೀತಾ.ಎಸ್ ಇವರು ಉಪಸ್ಥಿತರಿದ್ದರು.

ನಿವೃತ್ತ ಮುಖ್ಯೋಪಾಧ್ಯಾಯ ರಾಮಚಂದ್ರ ನಾಯ್ಕ್ ಇವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಶಾಲೆಯ ಹಿರಿಯ ಶಿಕ್ಷಕಿ ಶೋಭಲತಾ.ಎಂ ಸನ್ಮಾನ ಪತ್ರವನ್ನು ವಾಚಿಸಿದರು. ನಿವೃತ್ತ ಮುಖ್ಯೋಪಾಧ್ಯಾಯರೊಂದಿಗಿನ ಒಡನಾಟದ ಬಗ್ಗೆ ಶಾಲಾ ನಾಯಕಿ ಸಮ್ನ, 6ನೇ ತರಗತಿಯ ವಿದ್ಯಾರ್ಥಿ ಆರ್ ನಿಖಿಲ್ ಹಾಗೂ ಸಹ ಶಿಕ್ಷಕಿ ರಶ್ಮಿ ಎಂ.ವಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಲಯನ್ಸ್ ಕ್ಲಬ್ ಸಿಟಿ ಅಧ್ಯಕ್ಷರು ಹಾಗೂ ಅತಿಥಿ ಶಿಕ್ಷಕಿ ಶ್ವೇತಾ ರವಿಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಕೊನೆಗೆ ಗೌರವ ಶಿಕ್ಷಕಿ ತೃಪ್ತಿ ಧನ್ಯವಾದಗೈದರು. ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಮುಕ್ತಾಯವಾಯಿತು.

- Advertisement -

Related news

error: Content is protected !!