Monday, July 22, 2024
spot_imgspot_img
spot_imgspot_img

ಮಂಗಳೂರಿಗೆ ಕಾಶೀ ಮಠಾಧೀಶರ ಆಗಮನ !

- Advertisement -G L Acharya panikkar
- Advertisement -

ಮಂಗಳೂರು : ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಶಾರ್ವರಿ ನಾಮ ಸಂವತ್ಸರದ ಚಾತುರ್ಮಾಸ ವ್ರತವು ಈ ಬಾರಿ ಮಂಗಳೂರಿನ ಕೊಂಚಾಡಿ ಕ್ಷೇತ್ರದಲ್ಲಿರುವ ಶ್ರೀ ಸಂಸ್ಥಾನದ ಶಾಖಾ ಮಠದಲ್ಲಿ ನೆರವೇರಲಿದೆ . ಈ ಪ್ರಯುಕ್ತ ಶ್ರೀಗಳವರು ಇಂದು ಬೆಂಗಳೂರು ಕಾಶೀ ಮಠದ ಮೊಕ್ಕಾಂನಿಂದ ಆಗಮಿಸಿದರು , ಶ್ರೀಗಳವರಿಗೆ ಕೊಂಚಾಡಿ ಕಾಶಿ ಮಠದ ವ್ಯವಸ್ಥಾಪಕ ಸಮಿತಿಯ ಪದಾಧಿಕಾರಿಗಳು ಭವ್ಯ ಸ್ವಾಗತ ನೀಡಿದರು . ಈ ಸಂದರ್ಭದಲ್ಲಿ ಶ್ರೀಗಳವರು ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಶ್ರೀ ಮಹಾಲಸಾ ನಾರಾಯಣಿ ದೇವಳಕ್ಕೆ ಭೇಟಿಯಿತ್ತು ಶ್ರೀಗಳವರಿಗೆ ಪಾದ ಪೂಜೆ ಸಮಿತಿಯ ಪದಾಧಿಕಾರಿಗಳಿಂದ ನೆರವೇರಿತು .ಇದೆ ಬರುವ ೦೬-೦೭-೨೦೨೦ ರ ಸೋಮವಾರ ದಂದು ಶ್ರೀ ಸಂಸ್ಥಾನದ ಪರಮಾಚಾರ್ಯರಾದ ಶ್ರೀಮದ್ ಸುಕೃತಿಂದ್ರ ತೀರ್ಥ ಸ್ವಾಮೀಜಿಯವರ ಪುಣ್ಯತಿಥಿ ಆರಾಧನೆ ನಡೆಯಲಿರುವುದು . ದಿನಾಂಕ : ೧೦-೦೭-೨೦೨೦ ರ ಶುಕ್ರವಾರದಂದು ಶ್ರೀಗಳವರ ಚಾತುರ್ಮಾಸ ವ್ರತ ಸ್ವೀಕಾರ ಕಾರ್ಯಕ್ರಮ ಜರಗಲಿರುವುದು .

ಚಿತ್ರ : ಮಂಜು ನೀರೇಶ್ವಾಲ್ಯ

ಈ ಸಂದರ್ಭದಲ್ಲಿ ವ್ಯವಸ್ಥಾಪಕ ಸಮಿತಿಯ ಡಿ . ವಾಸುದೇವ ಕಾಮತ್ , ಕಸ್ತುರಿ ಸದಾಶಿವ ಪೈ , ಜಿ . ರತ್ನಾಕರ ಕಾಮತ್ , ಪ್ರಶಾಂತ್ ಪೈ , ದೀಪಕ್ ಕುಡ್ವ , ಅನಿಲ್ ಕಾಮತ್, ಸೂರಜ್ ಕಾಮತ್, ಅರುಣ್ ಕಾಮತ್ , ಉರ್ವಿ ರಾಧಾಕೃಷ್ಣ ಶೆಣೈ ಹಾಗೂ ಮಂಗಳೂರು ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು , ಜಿ ಯಸ್ ಬಿ ದೇವಾಲಯಗಳ ಒಕ್ಕೂಟದ ಅಧ್ಯಕ್ಷ ಎಂ . ಜಗನ್ನಾಥ್ ಕಾಮತ್ ಉಪಸ್ಥಿತರಿದ್ದರು .

- Advertisement -

Related news

error: Content is protected !!