Friday, December 3, 2021
spot_imgspot_img
spot_imgspot_img

ಮಡಿಕೇರಿ: ತೀರ್ಥರೂಪಿಯಾಗಿ ಹರಿದ ಕಾವೇರಿ ಮಾತೆ..! ಕಾವೇರಿ ಸಂಕ್ರಾತಿಯ ಸೊಬಗನ್ನು ಕಣ್ತುಂಬಿಕೊಂಡ ಜನತೆ

- Advertisement -
- Advertisement -

ಮಡಿಕೇರಿ: ಜೀವನದಿ ಕಾವೇರಿ ಇಂದು ತೀರ್ಥರೂಪಿಣಿಯಾಗಿ ದರ್ಶನ ನೀಡಿದ್ದಾಳೆ. ಬ್ರಹ್ಮಗಿರಿಯ ತಲಕಾವೇರಿ ಕ್ಷೇತ್ರದಲ್ಲಿ ಮಕರ ಲಗ್ನದಲ್ಲಿ ಮಧ್ಯಾಹ್ನ 1.12ಕ್ಕೆ ಕಾವೇರಿಯು ತೀರ್ಥರೂಪಿಣಿಯಾಗಿ ಹರಿದಿದ್ದಾಳೆ. ಪವಿತ್ರ ಕುಂಡಿಯಲ್ಲಿ, ಕಾವೇರಿ ಉಕ್ಕೇರುತ್ತಿದ್ದಂತೆಯೇ ಜೈ ಜೈ ಮಾತಾ ಕಾವೇರಿ ಮಾತಾ, ಕಾವೇರಿ ಮಾತಾಕೀ ಜೈ ಎನ್ನುವ ಘೋಷಣೆಗಳು ಮೊಳಗಿದವು.

ಈ ವರ್ಷದ ಮಧ್ಯಾಹ್ನದ ವೇಳೆಯಲ್ಲಿ ಕಾವೇರಿ ದರ್ಶನ ನೀಡಿದ್ದು ಅಪಾರ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರದಲ್ಲಿ ಸೇರಿದ್ದರು. ತೀರ್ಥೋದ್ಭವದ ಬಳಿಕ ಭಕ್ತರು ತಂದಿದ್ದ ಬಿಂದಿಗೆಯಲ್ಲಿ ತೀರ್ಥವನ್ನು ಸಂಗ್ರಹಿಸಿಕೊ0ಡು ಮನೆಗೆ ಕೊಂಡೊಯ್ದರು. ಕಳೆದ ವರ್ಷ ಕೋವಿಡ್ ಕಾರಣಕ್ಕೆ ಭಕ್ತರಿಗೆ ನಿರ್ಬಂಧ ಹೇರಲಾಗಿತ್ತು.

ಈ ವರ್ಷ ತೀರ್ಥೋದ್ಭವದ ದರ್ಶನಕ್ಕೆ ಜಿಲ್ಲಾಡಳಿತವು ಅವಕಾಶ ನೀಡಿತ್ತು. ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಭಕ್ತರೂ ಕಂಡುಬ0ದರು. ಕೋವಿಡ್ ಕಾರಣಕ್ಕೆ ಮಾಸ್ಕ್ ಕಡ್ಡಾಯ ಮಾಡಲಾಗಿತ್ತು. ಅಂತರ ಕಾಯ್ದುಕೊಳ್ಳುವಂತೆ ಭಕ್ತರಲ್ಲಿ ಮನವಿ ಮಾಡಲಾಗುತ್ತಿತ್ತು. ಆದರೆ ಅಂತರ ಮಾತ್ರ ಮಾಯವಾಗಿತ್ತು.

- Advertisement -

Related news

error: Content is protected !!