Friday, June 26, 2026
spot_imgspot_img
spot_imgspot_img

ಕಾವೂರು: ಅಕ್ರಮವಾಗಿ ಸಾಗಿಸುತ್ತಿದ್ದ 43,091ರೂ. ಮೌಲ್ಯದ ಮದ್ಯ ಪೊಲೀಸ್ ವಶ!

- Advertisement -
- Advertisement -

ಮಂಗಳೂರು: ಸ್ಕೂಟರ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 43,091 ರೂ. ಮೌಲ್ಯದ ಮದ್ಯವನ್ನು ಮಂಗಳೂರು ಉಪವಿಭಾಗ-2ರ ಅಬಕಾರಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗವು ಶನಿವಾರ ಕಾವೂರು ಬಳಿ ವಶಪಡಿಸಿಕೊಂಡಿದ್ದು, ಆರೋಪಿ ಸ್ಕೂಟರ್ ಸವಾರ ಘಟನಾ ಸ್ಥಳದಿಂದ ತಪ್ಪಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾವೂರು ಪರಿಸರದಲ್ಲಿ ರಸ್ತೆ ಕಾವಲು ನಡೆಸುತ್ತಿದ್ದಾಗ ಅಲ್ಲಿಗೆ ಬಂದ ಸ್ಕೂಟರ್ ಸವಾರ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದನು. ಅಬಕಾರಿ ಸಿಬ್ಬಂದಿಯು ವಿಚಾರಣೆ ನಡೆಸಿದಾಗ ಸ್ಕೂಟರ್ ಬಿಟ್ಟು ಓಡಿ ಪರಾರಿಯಾಗಿದ್ದಾನೆ ಎಂದು ಈ ಬಗ್ಗೆ ಅಬಕಾರಿ ಉಪ ಅಧೀಕ್ಷಕ ಅಮರನಾಥ ಎಸ್.ಎಸ್.ಭಂಡಾರಿ ದೂರು ದಾಖಲಿಸಿದ್ದಾರೆ.

ಅಬಕಾರಿ ಉಪ ಆಯುಕ್ತೆ ಬಿಂದುಶ್ರೀ ಪಿ. ನಿರ್ದೇಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಜಯಪ್ಪಲಮಾಣಿ, ಸಂತೋಷ್ ಎಂ.ಡಂಬ್ರಳ್ಳಿ, ವಾಹನ ಚಾಲಕ ಕೆ. ಮಾಯಿಲಪ್ಪ ಪಾಲ್ಗೊಂಡಿದ್ದರು.

- Advertisement -

Related news

error: Content is protected !!