Wednesday, August 12, 2026
spot_imgspot_img
spot_imgspot_img

ಕೆಲಿಂಜ: (ಆ.27) ಶ್ರೀ ಗಣೇಶೋತ್ಸವ ಸಮಿತಿ ಕೆಲಿಂಜ ಆಶ್ರಯದಲ್ಲಿ 49ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

- Advertisement -
- Advertisement -

ಕೆಲಿಂಜ: ಶ್ರೀ ಗಣೇಶೋತ್ಸವ ಸಮಿತಿ ಕೆಲಿಂಜ ಇದರ ಆಶ್ರಯದಲ್ಲಿ 49ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಆ.27-8-2025ನೇ ಬುಧವಾರ ಶ್ರೀ ನಿಕೇತನ ಮಂದಿರ ಕೆಲಿಂಜದಲ್ಲಿ ನಡೆಯಲಿದೆ.

ಬೆಳಿಗ್ಗೆ 10:00ಕ್ಕೆ ರಾಮ ಮೂಲ್ಯ ವೀರಕಂಭ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಶ್ರೀ ಕ್ಷೇತ್ರ ಕೆಲಿಂಜ ಪ್ರಧಾನ ಅರ್ಚಕರು ಮಹೇಶ್‌ ಭಟ್‌ ಮೂರ್ತಿ ಪ್ರತಿಷ್ಠೆ ಮಾಡಲಿದ್ದಾರೆ.

ಬೆಳಿಗ್ಗೆ 10:30 ರಿಂದ 11:30ವರೆಗೆ ಕೆಲಿಂಜೇಶ್ವರಿ ಭಜನಾ ಮಂಡಳಿ ಕೆಲಿಂಜ ಇವರಿಂದ ಭಜನೆ ಕಾರ್ಯಕ್ರಮ ನಡೆಯಲಿದೆ.

ಮಧ್ಯಾಹ್ನ 12:00ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕೆಲಿಂಜ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸಂದೀಪ್‌ ಪೂಜಾರಿ ಪೆಲತ್ತಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಯುವಾ ವಾಗ್ಮಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮನ್ಮಥ ಶೆಟ್ಟಿ ಪುತ್ತೂರು, ಮಂತ್ರ ದೇವತಾ ಸಾನಿಧ್ಯ ಕಟ್ಟೆಮಾರ್‌ ಮನೋಜ್‌ ಕಟ್ಟೆಮಾರ್‌, ಪ್ರಗತಿಪರ ಕೃಷಿಕ ಜಯಪ್ರಕಾಶ್‌ ತೆಕ್ಕಿಪಾಪು ವೀರಕಂಭ, ಕೆಲಿಂಜ ಹಿಂದೂ ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ ಕೊರಗಪ್ಪ ಗೌಡ ಅಡ್ಡೆಯಿ, ಕೆಲಿಂಜ ಶ್ರೀ ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷ ದೇವದಾಸ್‌ ರೈ ಮಾಡದಾರ್‌‌ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

2024-25ನೇ ಸಾಲಿನ SSLC ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ.

ಮಧ್ಯಾಹ್ನ 1:00ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಬಳಿಕ 3:00ಕ್ಕೆ ಮಹಾಮಂಗಳಾರತಿ ಬಳಿಕ ಶೋಭಾಯಾತ್ರೆ ನಡೆಯಲಿದೆ.

ಶ್ರೀನಿಕೇತನ ಮಂದಿರದಿಂದ ಕೆಲಿಂಜೇಶ್ವರಿ ಮಕ್ಕಳ ಕುಣಿತ ಭಜನಾ ಮಂಡಳಿ ಕೆಲಿಂಜ ಹಾಗೂ ಶ್ರೀ ವಿದ್ಯಾದೇವಿ ಭಜನಾ ಮಂಡಳಿ ದೇವಿನಗರ, ಪುಣಚ ಹಾಗೂ ಶ್ರೀ ವಿಷ್ಣು ಮೂರ್ತಿ ಕುಣಿತ ಭಜನಾ ತಂಡ ವಿಷ್ಣು ನಗರ ಕುಂಡಡ್ಕ ಇವರಿಂದ ಕುಣಿತ ಭಜನೆಯ ಮೂಲಕ ಹೊರಟು ಒಕ್ಕೆತ್ತೂರು ಹೊಳೆಯಲ್ಲಿ ಜಲಸ್ತಂಭನಗೊಳ್ಳಲಿದೆ.

*ವಿಶೇಷ ಸೂಚನೆ:
ಆ.24-08-2025ನೇ ಆದಿತ್ಯವಾರದಂದು ‘ಆಟೋಟ ಸ್ಪರ್ಧೆ’ ಏರ್ಪಡಿಸಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಿದೆ.

- Advertisement -

Related news

error: Content is protected !!