Sunday, May 19, 2024
spot_imgspot_img
spot_imgspot_img

ಯೂಟ್ಯೂಬ್‌ ನೋಡಿಕೊಂಡು ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿದ ವಿದ್ಯಾರ್ಥಿಗಳು; ಯುವಕ ದಾರುಣ ಸಾವು..! ಆನ್‌ಲೈನ್ ಪಾಠದ ಪ್ರಭಾವ ಎಂದ ನೆಟ್ಟಿಗರು

- Advertisement -G L Acharya panikkar
- Advertisement -

ಹೈದರಾಬಾದ್: ಆನ್‌ಲೈನ್ ಪಾಠದಿಂದಾಗಿ ಆಗುವ ಅನಾಹುತ ದಿನದಿಂದ ದಿನಕ್ಕೆ ವರದಿಯಾಗುತ್ತಿದೆ. ಕೆಲವೊಂದು ಟ್ರೋಲ್‌ಗಳೂ ಆಗಿದೆ. ಇಲ್ಲೊಂದು ಕಡೆ ಯೂಟ್ಯೂಬ್‌ ನೋಡಿಕೊಂಡು ಇಬ್ಬರು ವಿದ್ಯಾರ್ಥಿಗಳು ಒಬ್ಬನ ಪ್ರಾಣವನ್ನೇ ತೆಗೆದ ಘಟನೆ ನಡೆದಿದೆ. ಲಿಂಗ ಪರಿವರ್ತನೆ ಮಾಡುತ್ತೇವೆಂದು ಇಬ್ಬರು ಬಿ ಫಾರ್ಮ್ ವಿದ್ಯಾರ್ಥಿಗಳು ಯುವಕನೋರ್ವನ ಸಾವಿಗೆ ಕಾರಣವಾದ ಘಟನೆ ನಡೆದಿದೆ.

ಬಿ ಫಾರ್ಮ್ ಓದುತ್ತಿದ್ದ ಮಸ್ತಾನ್ ಹಾಗೂ ಜೀವ ಎಂಬ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಮೃತಪಟ್ಟ ಯುವಕನನ್ನು ಪ್ರಕಾಸಂನ ಶ್ರೀನಾಥ್‌ ಎಂದು ಗುರುತಿಸಲಾಗಿದೆ.

ಬಿ ಫಾರ್ಮ್ ಓದುತ್ತಿದ್ದ ವಿದ್ಯಾರ್ಥಿಗಳಿಬ್ಬರು ಶಸ್ತ್ರಚಿಕಿತ್ಸೆಗಾಗಿ 28 ವರ್ಷದ ಯುವಕನನ್ನು ಮುಂಬೈಗೆ ಕರೆದೊಯ್ದಿದ್ದರು. ಇಲ್ಲಿ ಲಾಡ್ಜ್ ಒಂದರಲ್ಲಿ ರೂಂ ಬಾಡಿಗೆಗೆ ಪಡೆದಿದ್ದರು. ಶಸ್ತ್ರಚಿಕಿತ್ಸೆ ಮಾಡುವುದಾಗಿ ಯೂ ಟ್ಯೂಬ್ ನೋಡಿಕೊಂಡು ಪ್ರಯೋಗ ನಡೆಸಿದರು. ಆದರೆ ಈ ಮಧ್ಯೆ ಎಡವಟ್ಟಾಗಿದ್ದು, ಯುವಕ ತೀವ್ರ ರಕ್ತಸ್ರಾವದಿಂದಾಗಿ ಮೃತಪಟ್ಟಿದ್ದಾನೆ.

ಇದಾದ ಬಳಿಕ ಘಟನಾ ಸ್ಥಳದಿಂದ ವಿದ್ಯಾರ್ಥಿಗಳು ಪರಾರಿಯಾಗಿದ್ದರು. ಈ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಇದು ಆನ್‌ಲೈನ್ ಪಾಠದ ಪ್ರಭಾವ ಎಂದು ಕಾಲೆಳೆದಿದ್ದಾರೆ.

vtv vitla
vtv vitla
- Advertisement -

Related news

error: Content is protected !!