Thursday, July 23, 2026
spot_imgspot_img
spot_imgspot_img

ಮಂಗಳಪದವು: (ಒ.9) 400ಕೆ.ವಿ ವಿದ್ಯುತ್ ಪ್ರಸರಣ ಯೋಜನೆಯ ವಿರುದ್ಧ ಬೃಹತ್ ಪ್ರತಿಭಟನೆ ಮತ್ತು ಕೆಲಿಂಜ ಉಳ್ಳಾಲ್ತಿ ಅಮ್ಮನ ಸನ್ನಿಧಿಗೆ ಪಾದಯಾತ್ರೆ

- Advertisement -
- Advertisement -

ಮಂಗಳಪದವು: ಸನಾತನ ಹಿಂದೂ ಧರ್ಮ ಮತ್ತು ಧಾರ್ಮಿಕ ನಂಬಿಕೆಗಳ ಸಂರಕ್ಷಣಾ ಹೋರಾಟ ಸಮಿತಿ, ವಿಟ್ಲ, ದ.ಕ ಮತ್ತು ಹಲವು ಹಿಂದೂ ಸಂಘಟನೆಗಳು, ಸಾಮಾಜಿಕ ಮತ್ತು ರೈತ ಸಂಘಟನೆಗಳ ಸಹಯೋಗದೊಂದಿಗೆ 400ಕೆ.ವಿ ವಿದ್ಯುತ್ ಪ್ರಸರಣ ಯೋಜನೆಯ ವಿರುದ್ಧ ಹಿಂದೂ ಸಮಾಜದ ಬೃಹತ್ ಶಕ್ತಿಪ್ರದರ್ಶನ ಮತ್ತು ಕೆಲಿಂಜ ಉಳ್ಳಾಲ್ತಿ ಅಮ್ಮನ ಸನ್ನಿಧಿಗೆ ಪಾದಯಾತ್ರೆ ಒ.09-10-2025ನೇ ಗುರುವಾರದಂದು ಬೆಳಿಗ್ಗೆ 10ಗಂಟೆಗೆ ಮಂಗಳಪದವು, ವೀರಕಂಬ ಗ್ರಾಮ, ವಿಟ್ಲ ವಲಯ ಇಲ್ಲಿ ನಡೆಯಲಿದೆ.

ಉಡುಪಿ-ಕಾಸರಗೋಡು ವಿದ್ಯುತ್ ಪ್ರಸರಣ ಮಾರ್ಗ ಯು.ಕೆ.ಟಿ.ಎಲ್ 400ಕೆ.ವಿ ವಿದ್ಯುತ್ ಪ್ರಸರಣ ಮಾರ್ಗ ಎಂಬ ಅವೈಜ್ಞಾನಿಕ ಕೇಂದ್ರ ಸರಕಾರದ ಯೋಜನೆಯನ್ನು ಆದಾನಿ ಕಂಪೆನಿ ಮೂಲಕ ಅನುಷ್ಟಾನಗೊಳಿಸಲು ಪ್ರಯತ್ನಿಸಿ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 20 ಗ್ರಾಮಗಳಲ್ಲಿ ಬಹುತೇಕ ಹಿಂದುಗಳೇ ವಾಸವಾಗಿರುವ ಹಾಗೂ ಹಿಂದುಗಳ ಧಾರ್ಮಿಕ ನಂಬಿಕೆಗಳಲ್ಲಿ ಮುಖ್ಯವಾದ ದೇವಸ್ಥಾನ, ದೈವಸ್ಥಾನ, ನಾಗಬನ, ದೇವರ ಬಾವಿ, ಇತಿಹಾಸ ಪ್ರಸಿದ್ಧವಿರುವ ದೈವಗಳ ಚಾವಡಿಗಳು ಹಾಗೂ ಸುಮಾರು 1000ಕ್ಕೂ ಹೆಚ್ಚು ದೈವ ಸಾನಿಧ್ಯಗಳ ತೆರವಿಗೆ ಮತ್ತು ಅಪಾರ ಕೃಷಿಭೂಮಿ, ಗೋಮಾಳ ಪ್ರದೇಶ ಪ್ರದೇಶ, ಮತ್ತು ಸಾವಿರಾರು ಹೆಕ್ಟೇರ್ ಅರಣ್ಯನಾಶಕ್ಕೆ ಅದಾನಿ ಕಂಪೆನಿ ಮೂಲಕ ಒತ್ತಡ ಹೇರುವ ಕೇಂದ್ರ ಹಾಗೂ ರಾಜ್ಯ ಸರಕಾರಗಳ, ರಾಜಕೀಯ ನಾಯಕರ ಒಳಒಪ್ಪಂದದ ಮೂಲಕ ಹಿಂದೂಗಳ ಧಾರ್ಮಿಕ ನಂಬಿಕೆ ಶ್ರದ್ದೆ ಭಕ್ತಿ, ಮಣ್ಣುಗಳ ನಾಶಕ್ಕೆ ಕಾರಣವಾಗುವ 400ಕೆ.ವಿ ವಿದ್ಯುತ್ ಪ್ರಸರಣ ತಂತಿ ಅಳವಡಿಕೆ ಎಂಬ ಅವೈಜ್ಞಾನಿಕ ಯೋಜನೆಯ ವಿರುದ್ಧ ತಾ. 09-10-2025ನೇ ಗುರುವಾರದಂದು ಬೆಳಿಗ್ಗೆ 10 ಗಂಟೆಗೆ ಬಂಟ್ವಾಳ ವೀರಕಂಭಗ್ರಾಮದ ವಿಟ್ಲ ವಿಟ್ಲ ಕಸಬಾ ಗ್ರಾಮದ ಕೇಂದ್ರ ಪ್ರದೇಶವಾಗಿರುವ ಕೆಲ್ಲಿಂಜ ಉಳ್ಳಾಲ್ತಿಯ ಪವಿತ್ರ ಮಣ್ಣಿನಲ್ಲಿ ಸಾವಿರಾರು ಭಕ್ತರ ಸಂಖ್ಯೆಯಲ್ಲಿ ಹಾಗೂ ಹಲವು ಹಿಂದೂ ನಾಯಕರ, ಸಂತರ ಸಮ್ಮುಖದಲ್ಲಿ ಬೃಹತ್ ಪ್ರತಿಭಟನೆ ಮತ್ತು ಕೆಲಿಂಜ ಅಮ್ಮನ ಸನ್ನಿಧಿಗೆ ಪಾದಯಾತ್ರೆಯು ನಡೆಯಲಿದೆ.

- Advertisement -

Related news

error: Content is protected !!