Wednesday, April 24, 2024
spot_imgspot_img
spot_imgspot_img

ಮಂಗಳೂರು: ಮೇ ತಿಂಗಳಲ್ಲಿ ಲೇಡಿಗೋಷನ್‌‌ ಆಸ್ಪತ್ರೆಯಲ್ಲಿ 50ಕ್ಕೂ ಅಧಿಕ ಕೋವಿಡ್ ಸೋಂಕಿತ ಗರ್ಭಿಣಿಯರ ಹೆರಿಗೆ!

- Advertisement -G L Acharya panikkar
- Advertisement -

ಮಂಗಳೂರು: ಸರ್ಕಾರ ವ್ಯವಸ್ಥೆಯಲ್ಲೂ ಉತ್ತಮವಾದ ಸೌಲಭ್ಯಗಳನ್ನು ಒದಗಿಸುತ್ತಿರುವ ಮಂಗಳೂರಿನ ಲೇಡಿಗೋಷನ್‌‌ ಆಸ್ಪತ್ರೆಯಲ್ಲಿಈ ವರ್ಷದ ಮೇ ತಿಂಗಳಲ್ಲಿ ಸುಮಾರು 50 ಕೊರೊನಾ ಸೋಂಕಿತ ಗರ್ಭಿಣಿಯರ ಹೆರಿಗೆ ನಡೆಸಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ, ಕೊರೊನಾದ ಎರಡನೇ ಅಲೆಯು ಈ ಬಾರಿ ಗರ್ಭಿಣಿಯರ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಈ ಹಿಂದೆ ಯಾವ ತಿಂಗಳುಗಳಲ್ಲಿ ಹೆರಿಗೆ ಪ್ರಮಾಣ 45 ದಾಟಿರಲಿಲ್ಲ. ಆದರೆ, ಮೇ ತಿಂಗಳ 24 ದಿನಗಳಲ್ಲಿ ಕೊರೊನಾ ಸೋಂಕಿತ ಗರ್ಭಿಣಿಯರ ಪೈಕಿ23 ನಾರ್ಮಲ್‌‌‌ ಹಾಗೂ 27 ಸಿಸೇರಿಯನ್‌‌‌ ಹೆರಿಗೆಯಾಗಿದೆ.

ಲೇಡಿ ಗೋಶನ್‌ ಆಸ್ಪತ್ರೆಯಲ್ಲಿ ಕಳೆದ ಅಕ್ಟೋಬರ್‌‌ನಲ್ಲಿ ಒಟ್ಟು 800 ಹೆರಿಗೆಯಾಗಿದ್ದು, ಈ ಮೂಲಕ ದಾಖಲೆ ಮಾಡಿತ್ತು. ಆ ಸಂದರ್ಭ ಕೊರೊನಾ ಸೋಂಕಿತ 14 ನಾರ್ಮಲ್‌‌‌ ಹಾಗೂ 21 ಸಿಸೇರಿಯನ್‌‌‌‌ ಮೂಲಕ ಒಟ್ಟು 35 ಹೆರಿಗೆ ನಡೆದಿದ್ದು, ಬಳಿಕ ಅದರ ಪ್ರಮಾಣ ಇಳಿಕೆಯಾಗಿ, ಇದೀಗ ಮತ್ತೆ ಹೆಚ್ಚಳವಾಗಿದೆ.

ಲೇಡಿಗೋಶನ್‌‌ ಸರಕಾರಿ ಆಸ್ಪತ್ರೆಯು 173 ವರ್ಷಗಳ ಇತಿಹಾಸ ಹೊಂದಿದ್ದು, ಈ ಆಸ್ಪತ್ರೆಯಲ್ಲಿ ಕಳೆದ ಸೆಪ್ಟೆಂಬರ್‌ ತಿಂಗಳಿನಲ್ಲೇ ಕೊರೊನಾ ಮೆಟರ್ನಿಟಿ ಬ್ಲಾಕ್‌ ಪ್ರಾರಂಭಿಸಲಾಗಿದೆ. ಆ ಸಂದರ್ಭ 15 ಆಕ್ಸಿಜನ್‌‌‌ ಹಾಗೂ ಐದು ನಾನ್‌‌ ಆಕ್ಸಿಜನ್‌‌‌ ಸೇರಿದಂತೆ 21 ಬೆಡ್‌ಗಳನ್ನು ಹಾಕಲಾಗಿತ್ತು. ಶಂಕಿತ ಪ್ರಕರಣಗಳಿಗೆ ಸಂಬಂಧಿಸಿದಂತೆ 14 ಸೇರಿದಂತೆ ಒಟ್ಟು 53 ಬೆಡ್‌‌ಗಳನ್ನು ಮೀಸಲಿಡಲಾಗಿದೆ.

ಈ ಪೈಕಿ ನಾರ್ಮಲ್‌ ಹಾಗೂ ಸಿಸೇರಿಯನ್‌‌‌‌ಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಈವರೆಗೆ ಒಟ್ಟು 331 ಸೋಂಕಿತ ಗರ್ಭಿಣಿಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 62 ನಾರ್ಮಲ್‌ ಹಾಗೂ 95 ಸಿಸೇರಿಯನ್‌‌‌‌ ಸೇರಿ ಒಟ್ಟು 157 ಹೆರಿಗೆಯಾಗಿದೆ. ಕೆಲವು ಶಂಕಿತ ಪ್ರಕರಣಗಳು ನೆಗೆಟಿವ್‌‌‌ ಸಹ ಆಗಿದೆ. ಹೆರಿಗೆಯಾದ ಮೂರು ಶಿಶುಗಳಿಗೆ ಕೊರೊನಾ ಪಾಸಿಟಿವ್‌ ದೃಢವಾಗಿದ್ದು, ಆಸ್ಪತ್ರೆಯು ಕೊರೊನಾ ಪಾಸಿಟಿವ್ ನವಜಾತ ಶಿಶುಗಳಿಗೆ ಪ್ರತ್ಯೇಕ ತೀವ್ರ ನಿಗಾ ಘಟಕಗಳನ್ನು ಹೊಂದಿದೆ.

ಇತರೆ ಆಸ್ಪತ್ರೆಗಳ ರೀತಿ ಆಕ್ಸಿಜನ್‌ ಬೆಡ್‌ಗಳ ಕೊರತೆ ಇರುತ್ತದೆ. ಇಲ್ಲಿ ಪ್ರಸೂತಿಗಾಗಿಯೇ ಆಬ್‌‌ ಸ್ಪೆಟ್ರಿಕ್‌‌‌ ವೆಂಟಿಲೇಟರ್‌‌‌‌ ಸಹಿತ ಐಸಿಯು ಬೆಡ್‌ಗಳಿವೆ. ಮಹಿಳೆಯರಿಗೆ ಗರ್ಭಾವಸ್ಥೆ ಎನ್ನುವುದೇ ಪ್ರತಿರೋಧ ಶಕ್ತಿಯನ್ನು ಕಳೆದುಕೊಳ್ಳುವ ಪ್ರಾಕೃತಿಕ ಕ್ರಿಯೆ. ಪ್ರತಿರೋಧ ಶಕ್ತಿ ಕಡಿಮೆಯಾದ ವೇಳೆ ಸೋಂಕು ತಗುಲುವುದು ಸಾಮಾನ್ಯ. ಈ ಸಮಯದಲ್ಲಿ ಪೌಷ್ಠಿಕ ಆಹಾರ ಸೇರಿದಂತೆ ವಿಟಮಿ‌ನ್‌ ಸಿ ಮಾತ್ರೆ ಸೇವನೆಯ ಮೂಲಕ ಅತಿಯಾದ ರಕ್ತಸ್ರಾವ ಆಗದಂತೆ ಎಚ್ಚರಿಕೆ ವಹಿಸಬೇಕು. ವೈಯುಕ್ತಿಕ ಸ್ವಚ್ಛತೆ, ಸೋಂಕು ತಗುಲದಂತೆ ಜಾಗ್ರತೆ ವಹಿಸಬೇಕು.

- Advertisement -

Related news

error: Content is protected !!